Advertisement

ಅಮೆರಿಕದಲ್ಲಿ ಮತ್ತೂಮ್ಮೆ ಆವೈಜಾಸಾ

12:11 PM Aug 04, 2018 | Team Udayavani |

ಮಣಿಪಾಲ: ಕೊಂಕಣಿ ಭಾಷೆಯ ಪ್ರಪ್ರಥಮ ಮಕ್ಕಳ ಚಲನಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ಆ ವೈ ಜಾ ಸಾ ಆ. 5ರಂದು ಅಮೆರಿಕದ ಬೇ ಏರಿಯಾದಲ್ಲಿರುವ ಕುಪರ್ಟಿನೊದ ರಾನ್ಕೋರಿನಕೊಂಡಾ ಸಭಾಂಗಣದಲ್ಲಿ ಸಂಜೆ 3 ಗಂಟೆಗೆ ಪ್ರದರ್ಶನಗೊಳ್ಳಲಿದೆ ಎಂದು ಕೆಎಒಸಿಎ (ಕೊಂಕಣಿ ಅಸೋಸಿಯೇಶನ್‌ ಆಫ್ ಕ್ಯಾಲಿ ಫೋರ್ನಿಯಾ)ದ ಅಧ್ಯಕ್ಷ ರಮೇಶ್‌ ಕಾಮತ್‌ ತಿಳಿಸಿ¨ªಾರೆ.

Advertisement

ಉತ್ತಮ ಸಮಾಜದ ನಿರ್ಮಾಣಕ್ಕೆ ಆಧ್ಯಾತ್ಮಿಕ, ವೈಜ್ಞಾನಿಕ, ಜಾತ್ಯತೀತ ಮತ್ತು ಸಾಮಾಜಿಕ ಗುಣಗಳನ್ನು ರೂಢಿಸಿಕೊಳ್ಳಬೇಕೆಂಬ ತಣ್ತೀ ಸಾರುವ ಚಲನಚಿತ್ರ ಆ ವೈ ಜಾ ಸಾ. ಈ ಚಲನಚಿತ್ರವನ್ನು ಪುಣೆ ಫಿಲ್ಮ್ ಇನ್‌ಸ್ಟಿಟ್ಯೂಟ್‌ ಪದವಿಧರರಾದ ಡಾ| ರಮೇಶ್‌ ಕಾಮತ್‌ ನಿರ್ದೇಶಿಸಿ¨ªಾರೆ. ಇದು ಇವರ ಎರಡನೇ ಕೊಂಕಣಿ ಚಲನಚಿತ್ರ. ಆವೈಜಾಸಾ ಸಂಪೂರ್ಣವಾಗಿ ಉಡುಪಿಯ ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ನಲುವತ್ತಕ್ಕೂ ಹೆಚ್ಚು ಮಕ್ಕಳು ಈ ಚಿತ್ರದಲ್ಲಿ ಪಾಲ್ಗೊಂಡಿ¨ªಾರೆ. ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ಬೃಹತ್‌ ಕೊಂಕಣಿ ಸಮ್ಮೇಳನ 2016ರಲ್ಲಿ ಈ ಚಲನಚಿತ್ರ ಉದ್ಘಾಟನಾ ಪ್ರದರ್ಶನ ಕಂಡು ದಾಖಲೆ ಸ್ಥಾಪಿಸಿತ್ತು. ಆವೈಜಾಸಾ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನಗೊಂಡಿದ್ದು, ನಾರ್ತ್‌ ಅಮೆರಿಕದ ಹೆಡ್‌ಲೈನ್‌ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅವಾರ್ಡ್‌ ಆಫ್ ಎಕ್ಸಲೆನ್ಸ್‌  ಪ್ರಶಸ್ತಿಗಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next