Advertisement
ಭಾರತದ ಹಲವು ರಾಜ್ಯಗಳಲ್ಲಿ ಅವಲಕ್ಕಿಯಿಂದ ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಉದಾಃ ಅವಲಕ್ಕಿ ಒಗ್ಗರಣೆ, ಅವಲಕ್ಕಿ ಬಾತ್, ಅವಲಕ್ಕಿ ಉಪ್ಪಿಟ್ಟು ,ಅವಲಕ್ಕಿ ಚಿತ್ರಾನ್ನ, ಅವಲಕ್ಕಿ ಪೊಂಗಲ್ ಹೀಗೆ ಹತ್ತು ಹಲವು . ಅವಲಕ್ಕಿಯಲ್ಲಿ ವಿಟಮಿನ್ ಬಿ ಅಂಶ ಇರುವ ಕಾರಣ, ದೇಹದ ಶಕ್ತಿಯನ್ನು ಹೆಚ್ಚಿಸಿ, ಮೆದುಳಿನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ಇದೊಂದು ಅದ್ಭುತ ಆಹಾರವಾಗಿದೆ.
ದಪ್ಪ ಅವಲಕ್ಕಿ -3ಕಪ್, ಈರುಳ್ಳಿ-2(ಸಣ್ಣಗೆ ಹೆಚ್ಚಿದ್ದು), ಹಸಿಮೆಣಸು-4ರಿಂದ 5, ಸಾಸಿವೆ-ಅರ್ಧ ಚಮಚ, ಜೀರಿಗೆ-ಅರ್ಧ ಚಮಚ, ಶೇಂಗಾ ಬೀಜ-2ಚಮಚ, ನಿಂಬೆಹಣ್ಣು-ಅರ್ಧ ಚಮಚ, ಕರಿಬೇವು-5ರಿಂದ6 ಎಸಳು, ಕೊತ್ತಂಬರಿ ಸೊಪ್ಪು-ಸ್ವಲ್ಪ, ತೆಂಗಿನೆಣ್ಣೆ-3ಚಮಚ, ಅರಿಶಿನ ಪುಡಿ-ಅರ್ಧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
Related Articles
ಮೊದಲಿಗೆ ದಪ್ಪ ಅವಲಕ್ಕಿಯನ್ನು 5ರಿಂದ 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಹಾಕಿರಿ. ನಂತರ ಒಂದು ಬಾಣಲೆಗೆ 3ಚಮಚದಷ್ಟು ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಶೇಂಗಾಬೀಜ, ಕರಿಬೇವು, ಹಸಿಮೆಣಸು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸರಿಯಾಗಿ ಫ್ರೈ ಮಾಡಿ ಆಬಳಿಕ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ತದನಂತರ ಸ್ವಲ್ಪ ಅರಿಶಿನಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ನೆನೆಸಿ ತೆಗೆದ ಅವಲಕ್ಕಿ ಹಾಕಿ ಅದಕ್ಕೆ ನಿಂಬೆರಸ ಹಿಂಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಅವಲಕ್ಕಿ ಚಿತ್ರಾನ್ನ ಸವಿಯಲು ಸಿದ್ಧ . ಇದನ್ನು ಕಾಯಿ ಚಟ್ನಿಯೊಂದಿಗೆ ಸವಿಯಲು ಬಹಳ ರುಚಿಕರ. ಒಮ್ಮೆ ಮಾಡಿ, ಸವಿದು ನೋಡಿ…
Advertisement
-ಶ್ರೀರಾಮ್ ಜಿ . ನಾಯಕ್