ಶಿಮ್ಲಾ: ರಸ್ತೆ ಅಪಘಾತದಲ್ಲಿ ಖ್ಯಾತ ಪತ್ರಕರ್ತರೊಬ್ಬರು ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಕಾಜಾದಲ್ಲಿ ನಡೆದಿರುವುದು ವರದಿಯಾಗಿದೆ.
ಬೈಕ್ ಗಳಿಗೆ ಸಂಬಂಧಿಸಿದ ವಿಮರ್ಶೆಗಳನ್ನು (Auto journalist) ಮಾಡುತ್ತಿದ್ದ ಸುವಿಲ್ ಸುಸ್ವಿರ್ಕರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿಯನ್ನು ಟಿವಿಎಸ್ ಮೋಟಾರ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಭಾರೀ ಮಳೆ ಮತ್ತು ಭೂಕುಸಿತದಿಂದ ಹಾನಿಗೊಳಗಾಗಿರುವ ಹಿಮಾಚಲ ಪ್ರದೇಶದ ಕಾಜಾಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ಟಿವಿಎಸ್ ಹೇಳಿದೆ.
ಯಾವ ರೀತಿಯಾಗಿ ಅಪಘಾತ ಸಂಭವಿಸಿದೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಟಿವಿಎಸ್ ಕಂಪನಿಯು ಆಯೋಜಿಸಿದ್ದ ರೈಡ್‌ನಲ್ಲಿ ಭಾಗಿಯಾಗಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಸುವಿಲ್ ಸುಸ್ವಿರ್ಕರ್” ಬೈಕ್‌ವಾಲೆ” ಯಲ್ಲಿ ಪ್ರಧಾನ ವರದಿಗಾರರಾಗಿದ್ದರು. ಹೊಸ ಹೊಸ ಬೈಕ್ ಗಳನ್ನು ಪರಿಚಯಿಸುವುದು ಅದರ ಉಪಯೋಗ, ಫೀಚರ್ಸ್ ಗಳನ್ನು ಅವರು ಸ್ವತಃ ಚಲಾಯಿಸಿಕೊಂಡು ವಿವರಿಸುತ್ತಿದ್ದರು. ತನ್ನ ಬೈಕ್ ಗಳ ವರದಿಗಾರಿಕೆಯಿಂದಲೇ ಖ್ಯಾತನಾಮರಾಗಿದ್ದ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಮೋಟಾರ್ ಸೈಕ್ಲಿಂಗ್ ಸಮುದಾಯಕ್ಕೆ ಆಘಾತವನ್ನೀಡಿದೆ.
ಈ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ. ನಾವು ಅವರ ನಿಧನಕ್ಕೆ ಸಂತಾಪವನ್ನು ಸೂಚಿಸುತ್ತೇವೆ.
ಅವರ ಪಯಣದಲ್ಲಿದ್ದ ಮೊಬೈಲ್ ಆಂಬ್ಯುಲೆನ್ಸ್‌ನಲ್ಲಿ ವೈದ್ಯರು ಸುಸ್ವಿರ್ಕರ್‌ಗೆ ತಕ್ಷಣದ ವೈದ್ಯಕೀಯ ಸಹಾಯವನ್ನು ಒದಗಿಸಿದ್ದಾರೆ. ಆದರೆ ಗಂಭೀರ ಸ್ವರೂಪದ ಗಾಯಗಳಿಂದ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ಟಿವಿಎಸ್ ಹೇಳಿದೆ.