Advertisement

Author ಗೀತಾ ಮೆಹ್ತಾ ವಿಧಿವಶ; ಸಹೋದರಿಯ ಅಂತಿಮ ದರ್ಶನ ಪಡೆದ ಒಡಿಶಾ ಸಿಎಂ

05:14 PM Sep 17, 2023 | |

ಹೊಸದಿಲ್ಲಿ: ಖ್ಯಾತ ಲೇಖಕಿ , ಸಾಕ್ಷ್ಯಚಿತ್ರ ನಿರ್ಮಾಪಕಿ-ನಿರ್ದೇಶಕಿ, ಪತ್ರಕರ್ತೆ ಗೀತಾ ಮೆಹ್ತಾ ಅವರು ಸೆ.16 ರಂದು ನಿಧನ ಹೊಂದಿದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

Advertisement

1943 ರಲ್ಲಿ ಗೀತಾ ಅವರು ಸ್ವಾತಂತ್ರ್ಯ ಹೋರಾಟಗಾರ, ಒಡಿಶಾದ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್ ಮತ್ತು ಗ್ಯಾನ್ ದಂಪತಿಯ ಪುತ್ರಿಯಾಗಿ ಜನಿಸಿದರು.

ಇಂಡೋ- ಅಮೇರಿಕನ್ ಆಗಿದ್ದ ಗೀತಾ ಬರಹಗಾರ್ತಿ, ಸಾಕ್ಷ್ಯಚಿತ್ರ ನಿರ್ಮಾಪಕಿ, ಪತ್ರಕರ್ತೆಯಾಗಿ ಅವರು 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧವನ್ನು ಒಳಗೊಂಡಂತೆ ಸಂಘರ್ಷ ಗಳ ವರದಿ ಮಾಡುವತ್ತ ಗಮನಹರಿಸಿದ್ದರು. ಲೇಖಕಿಯಾಗಿ ಅವರು 21 ಭಾಷೆಗಳಿಗೆ ಅನುವಾದಿಸಲಾದ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಕೃತಿಗಳು ಭಾರತದ ಮೇಲೆ ಕೇಂದ್ರೀಕೃತವಾಗಿದ್ದು, ಹೆಚ್ಚಿನ ಪಾಶ್ಚಿಮಾತ್ಯ ಪ್ರೇಕ್ಷಕರಿಗೆ ದೇಶವನ್ನು ಅರ್ಥೈಸುವ ಉದ್ದೇಶವನ್ನು ಹೊಂದಿದ್ದವು.

ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಹೋದರಿಯ ಅಂತಿಮ ದರ್ಶನ ಪಡೆದರು. ‘ನನ್ನ ಹಿರಿಯ ಸಹೋದರಿ ಗೀತಾ ಇಹಲೋಕ ತ್ಯಜಿಸಿದ್ದು, ನಾನು ದೆಹಲಿಯಲ್ಲಿದ್ದೇನೆ. ಸಂತಾಪ ಸೂಚಿಸಿದವರಿಗೆ ಧನ್ಯವಾದಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ.” ಎಂದು ಹೇಳಿದರು.

Advertisement

ಗೀತಾ ಅವರು 1965 ರಲ್ಲಿ ಆಲ್ಫ್ರೆಡ್ ಎ. ನಾಫ್ ಪಬ್ಲಿಷಿಂಗ್ ಹೌಸ್‌ನ ಮಾಜಿ ಮುಖ್ಯಸ್ಥ ಸೋನಿ ಮೆಹ್ತಾರನ್ನು ವಿವಾಹವಾಗಿದ್ದರು. ಆದಿತ್ಯ ಸಿಂಗ್ ಮೆಹ್ತಾ ಎಂಬ ಪುತ್ರನಿದ್ದಾರೆ. 2019ರಲ್ಲಿ ಸೋನಿ ಮೆಹ್ತಾ ನಿಧನ ಹೊಂದಿದ್ದರು.

ಪ್ರಧಾನಿ ಮೋದಿ ಸಂತಾಪ

”ಖ್ಯಾತ ಲೇಖಕಿ ಗೀತಾ ಮೆಹ್ತಾ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಗೀತಾ ಮೆಹ್ತಾ ಜಿ. ಅವರು ಬಹುಮುಖಿ ವ್ಯಕ್ತಿತ್ವವನ್ನು ಹೊಂದಿದ್ದರು, ಅವರ ಬುದ್ಧಿಶಕ್ತಿ ಮತ್ತು ಬರವಣಿಗೆ ಮತ್ತು ಚಲನಚಿತ್ರ ತಯಾರಿಕೆಯ ಉತ್ಸಾಹಕ್ಕೆ ಹೆಸರುವಾಸಿಯಾಗಿದ್ದರು. ಅವರು ಪ್ರಕೃತಿ ಮತ್ತು ಜಲ ಸಂರಕ್ಷಣೆಯ ಬಗ್ಗೆಯೂ ಒಲವು ಹೊಂದಿದ್ದರು. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ನವೀನ್ ಪಟ್ಟನಾಯಕ್ ಮತ್ತು ಅವರ ಇಡೀ ಕುಟುಂಬದ ಜತೆಯಲ್ಲಿವೆ.ಓಂ ಶಾಂತಿ.” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next