Advertisement

ಬಾರ್ಬಿ ಡಾಲ್‌ನಂತೆ ಕಾಣಲು 24 ಲಕ್ಷ ಕೊಟ್ಟು ಸರ್ಜರಿ ಮಾಡಿಸಿಕೊಂಡ ಯುವತಿ

09:00 AM Sep 06, 2021 | Team Udayavani |

ವಿಯೆನ್ನಾ: ಬಾರ್ಬಿ ಡಾಲ್‌ನಂತೆಯೇ ಕಾಣಿಸಿಕೊಳ್ಳಲು, ಯುವತಿಯೊಬ್ಬಳು ತನ್ನ ದೇಹದ ಅನೇಕ ಭಾಗಗಳಿಗೆ ಸರ್ಜರಿ ಮಾಡಿಸಿಕೊಳ್ಳಲು 24 ಲಕ್ಷ ರೂ. ಖರ್ಚು ಮಾಡಿದ್ದಾಳೆ!

Advertisement

ಜರ್ಮನ್‌ ಮೂಲದ ಜೆಸ್ಸಿ ಬನ್ನಿ(20)ಗೆ ಬಾರ್ಬಿಯಂತಾಗಬೇಕೆಂದು ಕನಸಿತ್ತಂತೆ. ಆದರೆ ಅದಕ್ಕೆ ತಂದೆ ತಾಯಿ ವಿರೋಧಿಸಿದ್ದರು. ಅವರನ್ನು ತ್ಯಜಿಸಿ ಆಸ್ಟ್ರೇಲಿಯಾದ ವಿಯೆನ್ನಾಕೆ ಬಂದು ನೆಲೆಸಿದ ಆಕೆ ಇದೀಗ ಅಪ್ಪ ಅಮ್ಮ ಉಳಿತಾಯ ಮಾಡಿದ್ದ ಹಣದಲ್ಲಿಯೇ ಅನೇಕ ರೀತಿಯ ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾಳೆ.

ಬ್ರೆಸ್ಟ್‌ ಎನ್‌ಲಾರ್ಜ್‌ಮೆಂಟ್‌ ಸರ್ಜರಿ, ತುಟಿಗಳ ಸರ್ಜರಿ ಸೇರಿ ಅನೇಕ ಸರ್ಜರಿ ಮಾಡಿಸಿಕೊಂಡಿರುವ ಆಕೆಗೆ ಇದೀಗ ತಾನು ಸುಂದರವಾಗಿ ಕಾಣುತ್ತಿದ್ದೇನೆ ಎನ್ನುವ ಭಾವನೆ ಹೆಚ್ಚಿದ್ದು, ಆತ್ಮವಿಶ್ವಾಸವೂ ಹೆಚ್ಚಾಗಿದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next