Advertisement

ಆಸ್ಟ್ರೇಲಿಯನ್‌ ಓಪನ್‌-2021:  ನೊವಾಕ್‌ ಜೊಕೋವಿಕ್ ಗೆಲುವಿನ ಆರಂಭ

10:48 PM Feb 08, 2021 | Team Udayavani |

ಮೆಲ್ಬರ್ನ್: ಸೋಮವಾರ ಮೊದಲ್ಗೊಂಡ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾಮ್‌ಸ್ಲಾಮ್‌ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌, ಡೊಮಿನಿಕ್‌ ಥೀಮ್‌ ಸಹಿತ ಸ್ಟಾರ್‌ ಆಟಗಾರರು ಗೆಲುವಿನ ಆರಂಭ ಪಡೆದಿದ್ದಾರೆ. ವನಿತಾ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್‌, ನವೋಮಿ ಒಸಾಕಾ ಕೂಡ ಗೆಲುವಿನ ನಗು ಬೀರಿದ್ದಾರೆ.

Advertisement

ಜೊಕೋವಿಕ್‌ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು 6-3, 6-1, 6-2 ಅಂತರದಿಂದ ಮಣಿಸಿದರು. ಕಳೆದ ವರ್ಷದ ಫೈನಲ್‌ನಲ್ಲಿ ಜೊಕೋಗೆ ಶರಣಾಗಿದ್ದ 3ನೇ ಶ್ರೇಯಾಂಕದ ಥೀಮ್‌ 7-6 (2), 6-2, 6-3ರಿಂದ ಕಜಾಕ್‌ಸ್ಥಾನದ ಮಿಖೈಲ್‌ ಕುಕುಶ್ಕಿನ್‌ ವಿರುದ್ಧ ಜಯ ಸಾಧಿಸಿದರು.

6ನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ಭಾರೀ ಹೋರಾಟದ ಬಳಿಕ ಅಮೆರಿಕದ ಮಾರ್ಕೋಸ್‌ ಗಿರಾನ್‌ ಅವರನ್ನು 6-7 (8-10), 7-6 (7-5), 6-3, 6-2ರಿಂದ ಮಣಿಸಿದರು. ಸ್ಟಾನಿಸ್ಲಾಸ್‌ ವಾವ್ರಿಂಕ ಮತ್ತು ನಿಕ್‌ ಕಿರ್ಗಿಯೋಸ್‌ ಎದುರಾಳಿಗಳಾದ ಪೆಡ್ರೊ ಸೂಸ ಹಾಗೂ ಫೆರೀರ ಸಿಲ್ವ ವಿರುದ್ಧ ಸುಲಭ ಜಯ ಸಾಧಿಸಿದರು.

ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ ಪ್ರಮುಖನೆಂದರೆ ಜಪಾನಿನ ಕೀ ನಿಶಿಕೊರಿ. ಇವರನ್ನು ಪಾಬ್ಲೊ ಕರೆನೊ ಬುಸ್ಟ 7-5, 7-6 (7-4), 6-2 ಅಂತರದಿಂದ ಮಣಿಸಿದರು.

ಇದನ್ನೂ ಓದಿ:ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಬಜೆಟ್ ಮಂಡನೆ, ದಿನಾಂಕ ಇನ್ನೂ ನಿರ್ಧಾರ ಮಾಡಿಲ್ಲ ‌: ಸಿಎಂ

Advertisement

ಸೋದರಿಯರಿಗೆ ಜಯ
ಸೆರೆನಾ ವಿಲಿಯಮ್ಸ್‌ ಮತ್ತು ನವೋಮಿ ಒಸಾಕಾ ಅವರಿಗೆ ಸುಲಭ ಗೆಲುವು ಒಲಿಯಿತು. ಸೆರೆನಾ 6-1, 6-1ರಿಂದ ಲಾರಾ ಸಿಗ್ಮನ್ಡ್ ‌ಗೆ
ಸೋಲುಣಿಸಿದರು. 21ನೇ ಆಸ್ಟ್ರೇಲಿ ಯನ್‌ ಓಪನ್‌ ಆಡುತ್ತಿರುವ ಅಕ್ಕ ವೀನಸ್‌ ವಿಲಿಯಮ್ಸ್‌ 2019ರ ಬಳಿಕ ಮೊದಲ ಗ್ರ್ಯಾನ್‌ಸ್ಲಾಮ್‌ ಜಯ ಕಂಡರು. ಕರ್ಸ್ಟನ್‌ ಫ್ಲಿಪ್‌ಕೆನ್ಸ್‌ ವಿರುದ್ಧ ವೀನಸ್‌ 7-5, 6-2 ಅಂತರದ ಜಯ ಸಾಧಿಸಿದರು.

2 ವರ್ಷಗಳ ಹಿಂದೆ ಇಲ್ಲಿ ಪ್ರಶಸ್ತಿ ಎತ್ತಿದ್ದ ನವೋಮಿ ಒಸಾಕಾ 6-1, 6-2ರಿಂದ ಅನಾಸ್ತಾಸಿಯಾ ಪಾವ್ಲುಚೆಂಕೋವಾಗೆ ಸೋಲುಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next