Advertisement

Tennis: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಸಿನ್ನರ್‌ ವಿನ್ನರ್‌

10:46 PM Jan 28, 2024 | Team Udayavani |

ಮೆಲ್ಬರ್ನ್: ಇಟಲಿಯ 22 ವರ್ಷದ ಯುವ ಆಟಗಾರ ಜಾನಿಕ್‌ ಸಿನ್ನರ್‌ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ಟೆನಿಸ್‌ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಸಿನ್ನರ್‌ ಈಗ ಆಸ್ಟ್ರೇಲಿಯನ್‌ ಓಪನ್‌ ವಿನ್ನರ್‌. ರವಿವಾರ ರಷ್ಯಾದ ಡ್ಯಾನಿಲ್‌ ಮೆಡ್ವೆಡೇವ್‌ ವಿರುದ್ಧ ನಡೆದ ಫೈನಲ್‌ ಹಣಾಹಣಿಯಲ್ಲಿ ಮೊದಲೆರಡು ಸೆಟ್‌ ಕಳೆದುಕೊಂಡೂ ತಿರುಗಿ ಬಿದ್ದ ಸಿನ್ನರ್‌, ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಗೆದ್ದ ಇಟಲಿಯ ಮೊದಲ ಆಟಗಾರನೆಂಬ ಹಿರಿಮೆಗೂ ಪಾತ್ರರಾದರು. ಗೆಲುವಿನ ಅಂತರ 3-6, 3-6, 6-4, 6-4, 6-3.

Advertisement

ಇದು 1976ರ ಬಳಿಕ ಇಟಲಿಗೆ ಒಲಿದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ಅಂದು ಅಡ್ರಿಯಾನೊ ಪನಾಟ್ಟ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿದ್ದರು.

“ಸೀನ್‌’ ಬದಲಿಸಿದ ಸಿನ್ನರ್‌
ಜಾನಿಕ್‌ ಸಿನ್ನರ್‌ ಸೆಮಿಫೈನಲ್‌ನಲ್ಲಿ ಟೆನಿಸ್‌ ದೈತ್ಯ ಹಾಗೂ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಅವರನ್ನು ಕೆಡವಿ ಸುದ್ದಿಯಾಗಿದ್ದರು. ಆದರೆ ಫೈನಲ್‌ ಸ್ಪರ್ಧೆಯ ಆರಂಭ ಕಂಟಾಗ

ಸಿನ್ನರ್‌ ಸಾಹಸ ಸೆಮಿ
ಫೈನಲ್‌ಗೇ ಮುಗಿಯಿತೆಂದು ಭಾವಿಸಲಾಗಿತ್ತು. 3ನೇ ಸಲ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ತಲುಪಿದ್ದ ಮೆಡ್ವೆಡೇವ್‌ ಮೊದಲೆರಡು ಸೆಟ್‌ಗಳನ್ನು ಸುಲಭದಲ್ಲಿ ಜಯಿಸಿದ್ದರು. ಅನಂತರ ಸಿನ್ನರ್‌ ಅವರ ತಿರುಗೇಟಿನಿಂದ ಪಂದ್ಯದ “ಸೀನ್‌’ ಸಂಪೂರ್ಣ ಬದಲಾಯಿತು. ಉಳಿದ 3 ಸೆಟ್‌ಗಳಲ್ಲಿ ಅವರು ಮೆಡ್ವೆಡೇವ್‌ಗೆ ಮುನ್ನಡೆಯ ಅವಕಾಶವನ್ನೇ ಕೊಡಲಿಲ್ಲ.

ಡ್ಯಾನಿಲ್‌ ಮೆಡ್ವೆಡೇವ್‌ ಆಡಿದ 3ನೇ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಇದಾಗಿತ್ತು. ಆದರೆ ಗೆಲುವಿನ ಅದೃಷ್ಟ ಮಾತ್ರ ಕೂಡಿಬರಲಿಲ್ಲ. 2021 ಮತ್ತು 2022ರಲ್ಲಿ ಸತತವಾಗಿ ಫೈನಲ್‌ಗೆ ಲಗ್ಗೆ ಇರಿಸಿದ್ದ ಮೆಡ್ವೆಡೇವ್‌, ಕ್ರಮವಾಗಿ ನೊವಾಕ್‌ ಜೊಕೋವಿಕ್‌ ಮತ್ತು ರಫೆಲ್‌ ನಡಾಲ್‌ ಅವರಿಗೆ ಶರಣಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next