Advertisement
ಮೊದಲ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ್ದ ಸ್ವಿಯಾಟೆಕ್ ಆಬಳಿಕ ಪಂದ್ಯದಲ್ಲಿ ಹಿಡಿತ ಸಾಧಿಸಲು ವಿಫಲರಾಗಿ ಶರಣಾದರು. ಈ ಮೂಲಕ ಇಲ್ಲಿ ಚೊಚ್ಚಲ ಬಾರಿ ಮತ್ತು ಒಟ್ಟಾರೆ ಗ್ರ್ಯಾನ್ ಸ್ಲಾಮ್‌ನಲ್ಲಿ ಐದನೇ ಪ್ರಶಸ್ತಿ ಗೆಲ್ಲುವ ಪ್ರಯತ್ನವು ಮೂರನೇ ಸುತ್ತಿನಲ್ಲಿ ಅಂತ್ಯಗೊಂಡಿತು.
ಎರಡು ಬಾರಿಯ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಮೂರನೇ ಸುತ್ತಿನ ಹೋರಾಟದಲ್ಲಿ ಜೆಲೆನಾ ಒಸ್ಟಾಪೆಂಕೊ ಅವರನ್ನು ಸುಲಭವಾಗಿ ಮಣಿಸಿ ಮುನ್ನಡೆದರು. 34ರ ಹರೆಯದ ಅಜರೆಂಕಾ 6-1, 7-5 ಸೆಟ್‌ಗಳಿಂದ 2017ರ ಫ್ರೆಂಚ್ ಓಪನ್ ಚಾಂಪಿಯನ್ ಒಸ್ಟಾಪೆಂಕೊ ಅವರನ್ನು ಉರುಳಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ಡಯಾನಾ ಯಸೆŒàಮಸ್ಕಾ ಅವರನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ಪಂದ್ಯದಲ್ಲಿ ಎಮ್ಮಾ ನವಾರೊ ಅವರನ್ನು 6-2, 2-6, 6-1 ಸೆಟ್‌ಗಳಿಂದ ಕೆಡಹಿದ್ದರು. ಸ್ಟೀಫನ್ಸ್‌ಗೆ ಸೋಲು
ಅಮೆರಿಕದ ಮಾಜಿ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಅವರು ಮೂರು ಸೆಟ್‌ಗಳ ಹೋರಾಟದಲ್ಲಿ ಅನ್ನಾ ಕಲಿನ್‌ಸ್ಕಾಯಾ ಅವರೆದುರು ಸೋಲನ್ನು ಕಂಡು ಹೊರಬಿದ್ದರು. 6-7 (8), 6-1, 6-4 ಸೆಟ್‌ಗಳಿಂದ ಜಯ ಸಾಧಿಸಿದ ಕಲಿನ್‌ಸ್ಕಾಯಾ ಅವರು ಮುಂದಿನ ಸುತ್ತಿನಲ್ಲಿ ಇಟಲಿಯ ಜಾಸ್ಮಿನ್ ಪೊಲಿನಿ ಅವರನ್ನು ಎದುರಿಸಲಿದ್ದಾರೆ. ಪೊಲಿನಿ ಇನ್ನೊಂದು ಪಂದ್ಯದಲ್ಲಿ ರಷ್ಯಾದ ಅನ್ನಾ ಬ್ಲಿಂಕೋವಾ ಅವರನ್ನು 7-6 (1), 6-4 ಸೆಟ್‌ಗಳಿಂದ ಸೋಲಿಸಿದ್ದರು. ಚೀನದ ಆಟಗಾರ್ತಿಯರ ನಡುವೆ ನಡೆದ ಪಂದ್ಯದಲ್ಲಿ ಝೆನ್ ಕ್ವಿನ್ವೆನ್ ಅವರು ವಾಂಗ್ ಯಫಾನ್ ಅವರನ್ನು 6-4, 2-6, 7-6 (8) ಸೆಟ್‌ಗಳಿಂದ ಸೋಲಿಸಿದರು. ಮುಂದಿನ ಸುತ್ತಿನಲ್ಲಿ ಅವರು ಒಸೀನ್ ಡೊಡಿನ್ ಅವರನ್ನು ಎದುರಿಸಲಿದ್ದಾರೆ.
Related Articles
ಪಂದ್ಯದ ನಡುವೆ ಚೀನದ ವೈಲ್ಡ್‌ಕಾರ್ಡ್ ಪ್ರವೇಶಿಗ ಶಾಂಗ್ ಜುನ್‌ಚೆಂಗ್ ಗಾಯದಿಂದಾಗಿ ನಿವೃತ್ತಿಯಾದ ಕಾರಣ ಕಾರ್ಲೋಸ್ ಅಲ್ಕರಾಜ್ ನಾಲ್ಕನೇ ಸುತ್ತಿಗೇರಿದರು. ಎರಡು ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಆಗಿರುವ ಅಲ್ಕರಾಜ್ 18ರ ಹರೆಯದ ಶಾಂಗ್ ವಿರುದ್ಧ ಪ್ರಾಬಲ್ಯ ಸಾಧಿಸಿದ್ದರು. ಅಂತಿಮವಾಗಿ ಶಾಂಗ್ ಪಂದ್ಯ ತ್ಯಜಿಸಿದಾಗ ಅಲ್ಕರಾಜ್ 6-1, 6-1, 1-0 ಅಂತರದಿಂದ ಮುನ್ನಡೆಯಲ್ಲಿದ್ದರು. ಮುಂದಿನ ಸುತ್ತಿನಲ್ಲಿ ಅವರು ಸರ್ಬಿಯಾದ ಮಿಯೊಮಿರ್ ಕೆಮನೋವಿಕ್ ಅವರನ್ನು ಎದುರಿಸಲಿದ್ದಾರೆ.
Advertisement