Advertisement
ಶನಿವಾರ ನಡೆದ “ಹೈ ಕ್ವಾಲಿಟಿ ಫೈನಲ್’ ನಲ್ಲಿ ದ್ವಿತೀಯ ಶ್ರೇಯಾಂಕದ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಸೇರಿಕೊಂಡು ಇಟಲಿಯ ಸಿಮೋನ್ ಬೊಲೆಲ್ಲಿ-ಆ್ಯಂಡ್ರಿಯ ವವಸೋರಿ ಜೋಡಿಯನ್ನು 7-6 (7-0), 7-5 ಅಂತರದಿಂದ ಹಿಮ್ಮೆಟ್ಟಿಸಿದರು. ಒಂದು ಗಂಟೆ, 39 ನಿಮಿಷಗಳ ಕಾಲ ಇವರ ರ್ಯಾಕೆಟ್ ಸಮರ ಸಾರಿತು.
ಕರ್ನಾಟಕದ ಹೆಮ್ಮೆಯ ಟೆನಿಸಿಗ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದ ಮೊದಲ ನಿದರ್ಶನ ಇದಾಗಿದೆ. ಈ ಕಿರೀಟ ಧರಿಸಿದ ಭಾರತದ ಕೇವಲ 3ನೇ ಟೆನಿಸಿಗ. ಉಳಿದಿಬ್ಬರೆಂದರೆ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ. ವನಿತಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಹಿರಿಮೆ ಸಾನಿಯಾ ಮಿರ್ಜಾ ಅವರದು. ಇದು ರೋಹನ್ ಬೋಪಣ್ಣ ಗೆದ್ದ ಕೇವಲ 2ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ. ಇದಕ್ಕೂ ಮುನ್ನ 2017ರಲ್ಲಿ ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್‌ಸ್ಕಿ ಜತೆಗೂಡಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಚಾಂಪಿಯನ್ ಆಗಿದ್ದರು.
Related Articles
Advertisement
ಸೋಮವಾರ ನಂ.1ಈ ಕೂಟದ ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ರೋಹನ್ ಬೋಪಣ್ಣ ವಿಶ್ವದ ನಂ.1 ಡಬಲ್ಸ್ ಆಟಗಾರನೆಂಬ ಹಿರಿಮೆಗೆ ಪಾತ್ರ ರಾಗಿದ್ದರು. ಬಳಿಕ ಪದ್ಮಶ್ರೀ ಪ್ರಶಸ್ತಿ ಯಿಂದಲೂ ಪುರಸ್ಕೃತರಾಗಿದ್ದರು. ಸೋಮವಾರ ಬಿಡುಗಡೆಯಾಗ ಲಿರುವ ರ್‍ಯಾಂಕಿಂಗ್ ಯಾದಿಯಲ್ಲಿ ಬೋಪಣ್ಣ ನೂತನ ಎತ್ತರ ತಲುಪಲಿದ್ದಾರೆ. ಹಿರಿಯ ಚಾಂಪಿಯನ್
ಈ ಜಯದೊಂದಿಗೆ 43 ವರ್ಷದ ರೋಹನ್ ಬೋಪಣ್ಣ ಪುರುಷರ ವಿಭಾಗದ ಅತೀ ಹಿರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಎಂಬ ದಾಖಲೆಯನ್ನೂ ಬರೆದರು. ನೆದರ್ಲೆಂಡ್ಸ್‌ನ ಜೀನ್ ಜೂಲಿಯನ್ ರೋಜರ್ 40ನೇ ವರ್ಷದಲ್ಲಿ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದ ದಾಖಲೆ ಪತನಗೊಂಡಿತು. 2022ರಲ್ಲಿ ಅವರು ಮಾರ್ಸೆಲೊ ಅರೆವೋಲ ಜತೆಗೂಡಿ ಈ ಸಾಧನೆಗೈದಿದ್ದರು. ನೂತನ ಚಾಂಪಿಯನ್
ರವಿವಾರ ಪುರುಷರ ಸಿಂಗಲ್ಸ್‌ನಲ್ಲಿ ನೂತನ ಚಾಂಪಿಯನ್ ಒಬ್ಬರ ಉದಯವಾಗಲಿದೆ. ಡ್ಯಾನಿಲ್ ಮೆಡ್ವೆಡೇವ್-ಜಾನಿಕ್ ಸಿನ್ನರ್, ಇವರಲ್ಲಿ ಯಾರೇ ಗೆದ್ದರೂ ಮೊದಲ ಸಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತಿದಂತಾಗುತ್ತದೆ. ಬಾಲಕ, ಬಾಲಕಿಯರ ವಿಭಾಗ
ಆಸ್ಟ್ರೇಲಿಯನ್ ಓಪನ್ ಬಾಲಕರ ವಿಭಾಗದಲ್ಲಿ ಜಪಾನ್‌ನ 17 ವರ್ಷದ ರೀ ಸಕಮೋಟೊ ಪ್ರಶಸ್ತಿಯೆತ್ತಿದ್ದಾರೆ. ಅವರು ಜೆಕ್ ಗಣರಾಜ್ಯದ ಜಾನ್ ಕುಮ್‌ಸ್ಟಾಟ್ ವಿರುದ್ಧ 3-6, 7-6 (2), 7-5 ಅಂತರದ ಗೆಲುವು ಸಾಧಿಸಿದರು. ಬಾಲಕಿಯರ ವಿಭಾದ ಪ್ರಶಸ್ತಿ ಅಗ್ರ ಶ್ರೇಯಾಂಕದ ಸ್ಲೊವಾ ಕಿಯಾದ ಆಟಗಾರ್ತಿ ರೆನಾಟಾ ಜಮ್ರಿಕೋವಾ ಪಾಲಾಯಿತು. ಅವರು ಆಸ್ಟ್ರೇಲಿಯದ 15ರ ಹರೆಯದ ಆಟಗಾರ್ತಿ ಎಮರ್ಸನ್ ಜೋನ್ಸ್ ವಿರುದ್ಧ 6-4, 6-1 ಅಂತರದಿಂದ ಗೆದ್ದು ಬಂದರು.