Advertisement
259 ರನ್ನುಗಳ ಹಿನ್ನಡೆಗೆ ಸಿಲುಕಿದ ರೂಟ್ ಪಡೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಸಂಕಟದಲ್ಲಿದೆ. ಇನ್ನೂ 127 ರನ್ ಹಿನ್ನಡೆಯಲ್ಲಿದೆ. ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಪಂದ್ಯ ಉಳಿಸಿಕೊಳ್ಳಬೇಕಾದರೆ ಇಂಗ್ಲೆಂಡ್ ಭಾರೀ ಹೋರಾಟವನ್ನೇ ಮಾಡಬೇಕಿದೆ. ರವಿವಾರ ಸಂಜೆ ಪರ್ತ್‌ನಲ್ಲಿ ಮಳೆಯಾಗಿದ್ದು, ಇದ ರಿಂದ ಆಟವನ್ನು ಬೇಗನೆ ಕೊನೆಗೊ ಳಿಸಲಾಯಿತು. ಈ ಮಳೆ ಕೊನೆಯ ದಿನ ಇಂಗ್ಲೆಂಡ್ ರಕ್ಷಣೆಗೆ ಬಂದೀತೇ ಎಂಬುದೊಂದು ನಿರೀಕ್ಷೆ!
4 ವಿಕೆಟಿಗೆ 549 ರನ್ ಮಾಡಿ 3ನೇ ದಿನದಾಟ ಮುಗಿಸಿದ್ದ ಆಸ್ಟ್ರೇಲಿಯ, ರವಿವಾರ ಬ್ಯಾಟಿಂಗ್ ಮುಂದುವರಿಸಿ 9ಕ್ಕೆ 662 ರನ್ ಪೇರಿಸಿ ಡಿಕ್ಲೇರ್ ಮಾಡಿತು. ಇದು ತವರಿನ ಆ್ಯಶಸ್ ಟೆಸ್ಟ್ ನಲ್ಲಿ ಆಸ್ಟ್ರೇಲಿಯ ಪೇರಿಸಿದ ಅತ್ಯಧಿಕ ಮೊತ್ತವಾಗಿದೆ. ಇದರೊಂದಿಗೆ 71 ವರ್ಷಗಳ ದಾಖಲೆ ಪತನಗೊಂಡಿತು. 1946ರ ಸಿಡ್ನಿ ಟೆಸ್ಟ್‌ನಲ್ಲಿ 8ಕ್ಕೆ 659 ರನ್ ಗಳಿಸಿದ್ದು ಆಸ್ಟ್ರೇಲಿಯದ ಅತ್ಯುತ್ತಮ ಸಾಧನೆಯಾಗಿತ್ತು.
Related Articles
Advertisement
5 ಬೌಲರ್‌ಗಳಿಂದ “ಶತಕ’!ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡ ರ್ಸನ್ 116 ರನ್ನಿಗೆ 4 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಆದರೆ 5 ಬೌಲರ್‌ಗಳು 100 ಪ್ಲಸ್ ರನ್ ಬಿಟ್ಟುಕೊಟ್ಟದ್ದು ಆಂಗ್ಲರ ಬೌಲಿಂಗ್ ವೈಫಲ್ಯಕ್ಕೆ ಸಾಕ್ಷಿಯಾಯಿತು. ಟೆಸ್ಟ್ ಇತಿ ಹಾಸದ ಇನ್ನಿಂಗ್ಸ್ ಒಂದರಲ್ಲಿ ಐವರು ಬೌಲರ್‌ಗಳು ನೂರಕ್ಕೂ ಹೆಚ್ಚು ರನ್ ನೀಡಿದ ಕೇವಲ 8ನೇ ದೃಷ್ಟಾಂತ ಇದಾಗಿದೆ. ಇದರಲ್ಲಿ ಇಂಗ್ಲೆಂಡ್ ಅತಿ ಹೆಚ್ಚು 3 ಸಲ ಈ ಸಂಕಟಕ್ಕೆ ಸಿಲುಕಿದೆ.ಇಂಗ್ಲೆಂಡ್ ದ್ವಿತೀಯ ಸರದಿಯಲ್ಲಿ ಕುಕ್ (14), ಸ್ಟೋನ್‌ಮ್ಯಾನ್ (3), ವಿನ್ಸ್ (55) ಮತ್ತು ರೂಟ್ (14) ವಿಕೆಟ್ ಕಳೆದುಕೊಂಡಿದೆ. ಕ್ರೀಸಿನಲ್ಲಿ ರುವವರು ಮೊದಲ ಸರದಿಯ ಶತಕ ವೀರರಾದ ಮಾಲನ್ (28) ಮತ್ತು ಬೇರ್‌ಸ್ಟೊ (14). ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್-403 ಮತ್ತು 4 ವಿಕೆಟಿಗೆ 132 (ವಿನ್ಸ್ 55, ಮಾಲನ್ ಬ್ಯಾಟಿಂಗ್ 25, ಹ್ಯಾಝಲ್‌ವುಡ್ 23ಕ್ಕೆ 2). ಆಸ್ಟ್ರೇಲಿಯ-9ಕ್ಕೆ 662 ಡಿಕ್ಲೇರ್ (ಸ್ಮಿತ್ 239, ಎಂ. ಮಾರ್ಷ್ 181, ಪೇನ್ 49, ಕಮಿನ್ಸ್ 41, ಆ್ಯಂಡರ್ಸನ್ 116ಕ್ಕೆ 4, ಓವರ್ಟನ್ 110ಕ್ಕೆ 2).