ಮೆಲ್ಬೋರ್ನ್: ದಶಕದ ಬಳಿಕ ಪಾಕಿಸ್ಥಾನ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾವು ತಂಡ ಪ್ರಕಟ ಮಾಡಿದೆ. ಆದರೆ ನಿಗದಿತ ಓವರ್ ಮಾದರಿ ಸರಣಿಗೆ ಐಪಿಎಲ್ ನಲ್ಲಿ ಭಾಗವಹಿಸುಲಿರುವ ಪ್ರಮುಖ ಆಟಗಾರರನ್ನು ಕೈಬಿಡಲಾಗಿದೆ.
ಮಾರ್ಚ್ 4ರಿಂದ 25ರವರೆಗೆ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದೆ. ನಂತರ ಮಾ.29ರಿಂದ ಎ.5ರವರೆಗೆ ಮೂರು ಏಕದಿನ ಮತ್ತು ಒಂದು ಟಿ20 ಪಂದ್ಯಗಳನ್ನು ಪಾಕಿಸ್ಥಾನದಲ್ಲಿ ಆಸೀಸ್ ಆಡಲಿದೆ. ಈ ವೇಳೆ ಐಪಿಎಲ್ ಆರಂಭವಾಗುವ ಕಾರಣದಿಂದ ಮೊದಲ ಕೆಲವು ಪಂದ್ಯಗಳಿಗೆ ಆಸೀಸ್ ಆಟಗಾರರು ಐಪಿಎಲ್ ಗೆ ಲಭ್ಯವಾಗುವುದಿಲ್ಲ ಎನ್ನಲಾಗಿತ್ತು.
ಆದರೆ ಇದೀಗ ಪಾಕಿಸ್ಥಾನ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಆಸೀಸ್ ಪ್ರಮುಖ ಆಟಗಾರರನ್ನು ಆಯ್ಕೆ ಮಾಡಿಲ್ಲ. ಐಪಿಎಲ್ ನಲ್ಲಿ ಆಡಲಿರುವ ಪ್ರಮುಖರಾದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ ವುಡ್, ಗ್ಲೆನ್ ಮ್ಯಾಕ್ಸ್ ವೆಲ್ ಗೆ ವಿಶ್ರಾಂತಿ ನೀಡಲಾಗಿದೆ. ಮದುವೆಯ ಕಾರಣದಿಂದ ಮ್ಯಾಕ್ಸ್ ವೆಲ್ ಲಭ್ಯವಿಲ್ಲವೆಂದು ಮೊದಲೇ ತಿಳಿಸಿದ್ದರು. ಇದೇ ವೇಳೆ ಐಪಿಎಲ್ ಆಡದ ಮಿಚ್ ಸ್ಟಾರ್ಕ್ ಗೂ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಬದ್ಧ
ಇದೇ ವೇಳೆ ಐಪಿಎಲ್ ನಲ್ಲಿ ಭಾಗವಹಿಸಲಿರುವ ಜೇಸನ್ ಬೆಹ್ರಂಡಾಫ್, ನಥನ್ ಎಲ್ಲಿಸ್, ಮಿಚೆಲ್ ಮಾರ್ಶ್, ಮಾರ್ಕಸ್ ಸ್ಟೋಯಿನಸ್ ರನ್ನು ಪಾಕಿಸ್ಥಾನ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ.
ತಂಡ: ಆರನ್ ಫಿಂಚ್ (ನಾ), ಸೀನ್ ಅಬಾಟ್, ಆಶ್ಟನ್ ಆ್ಯಗರ್, ಜೇಸನ್ ಬೆಹ್ರೆನ್‌ಡಾರ್ಫ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್, ಮಿಚೆಲ್ ಮಾರ್ಶ್, ಬೆನ್ ಮೆಕ್‌ಡರ್ಮಾಟ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಮ್ ಝಂಪಾ.