ಈ ಮಸೂದೆಯು “ಕ್ಲೋಸಿಂಗ್ ಲೂಪ್‌ಹೋಲ್ಸ್’ ಎಂದೇ ಹೆಸರಾಗಿದೆ. ಮೊದಲ ಹಂತದಲ್ಲಿ ಉದ್ಯೋಗಿಗಳ ಹಕ್ಕ ನ್ನು ರಕ್ಷಿಸುವ ಈ ಮಸೂದೆಯ ಪರವಾಗಿ ಮತಗಳು ಬಂದಿದ್ದು, ಸಂಸತ್‌ನಲ್ಲಿ ಅನುಮೋದನೆ ಪಡೆದಿದೆ. ಮಸೂದೆಯ ಕುರಿತು ಅಂತಿಮ ಹಂತದ ಮತದಾನ ಗುರುವಾರ ಮಧ್ಯಾಹ್ನ ನಡೆಯಲಿದೆ.
Advertisement
ಮಸೂದೆ ಕಾನೂನು ಆಗಿ ರೂಪುಗೊಂಡರೆ, ರಜೆಯ ಸಂದರ್ಭದಲ್ಲಿ, ಕಚೇರಿ ಅವಧಿ ಮುಗಿದ ಬಳಿಕ ಮೇಲಧಿಕಾರಿಗಳು ಅಥವಾ ಬಾಸ್‌ಗಳು ಅಥವಾ ವ್ಯವಸ್ಥಾಪಕರು ಕರೆ ಮಾಡಿದರೆ ಅದನ್ನು ಸ್ವೀಕರಿಸದೇ, ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಉದ್ಯೋಗಿಗಳು ಹೊಂದುತ್ತಾರೆ. ಜತೆಗೆ ಪ್ರಾಜೆಕ್ಟ್ಗಳಿಗೆ ಸಂಬಂಧಿಸಿದಂತೆ ಇಮೇಲ್‌ಗಳಿಗೆ ಪ್ರತ್ಯುತ್ತರ ನೀಡದೇ ಇರುವ ಹಕ್ಕನ್ನು ಉದ್ಯೋಗಿಗಳು ಹೊಂದಿರುತ್ತಾರೆ. ಅಲ್ಲದೇ ಈ ಕಾರಣಕ್ಕಾಗಿ ಉದ್ಯೋಗಿಗಳಿಗೆ ಯಾವುದೇ ರೀತಿಯ ಶಿಕ್ಷೆ ವಿಧಿಸುವಂತಿಲ್ಲ. ಉದ್ಯೋಗಿಗಳ ಖಾಸಗಿ ಸಮಯ ಗೌರವ ನೀಡಲು ಈ ಮಸೂದೆಯನ್ನು ಮಂಡಿಸಲಾಗಿದೆ.