Advertisement

Australia;ಪ್ರಥಮ ದರ್ಜೆ ಕ್ರಿಕೆಟಿಗೆ ಮ್ಯಾಥ್ಯೂ ವೇಡ್‌ ವಿದಾಯ

12:17 AM Mar 16, 2024 | Team Udayavani |

ಹೋಬರ್ಟ್‌: ಆಸ್ಟ್ರೇಲಿಯದ ವಿಕೆಟ್‌ ಕೀಪರ್‌-ಬ್ಯಾಟರ್‌ ಮ್ಯಾಥ್ಯೂ ವೇಡ್‌ ಪ್ರಥಮ ದರ್ಜೆ ಕ್ರಿಕೆಟ್‌ನಿಂದ ನಿವೃತ್ತರಾಗುವುದಾಗಿ ತಿಳಿಸಿದ್ದಾರೆ. ಈ ಸಾಲಿನ “ಶೆಫೀಲ್ಡ್‌ ಶೀಲ್ಡ್‌’ ಕ್ರಿಕೆಟ್‌ ಪಂದ್ಯಾವಳಿಯೇ ಕೊನೆಯದು, ಅನಂತರ ಸೀಮಿತ ಓವರ್‌ಗಳ ಪಂದ್ಯಗಳಲ್ಲಷ್ಟೇ ಆಡಲಿ ದ್ದೇನೆ ಎಂದಿದ್ದಾರೆ.
ಈ ಬಾರಿಯ ಶೆಫೀಲ್ಡ್‌ ಶೀಲ್ಡ್‌ ಫೈನಲ್‌ ಟಾಸೆ¾àನಿಯ ಮತ್ತು ವೆಸ್ಟರ್ನ್ ಆಸ್ಟ್ರೇಲಿಯ ತಂಡಗಳ ನಡುವೆ ಮಾ. 21ರಂದು ಹೋಬರ್ಟ್‌ನಲ್ಲಿ ಆರಂಭವಾಗಲಿದೆ. ಬಳಿಕ ಐಪಿಎಲ್‌ ಆಡಲಿಳಿಯಲಿದ್ದಾರೆ. ವೇಡ್‌ ಶೆಫೀಲ್ಡ್‌ ಶೀಲ್ಡ್‌ನಲ್ಲಿ ಟಾಸ್ಮೆನೀಯ, ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಆಟಗಾರನಾಗಿದ್ದಾರೆ.

Advertisement

2012ರಲ್ಲಿ ಟೆಸ್ಟ್‌ ಕ್ರಿಕೆಟಿಗೆ ಪದಾ ರ್ಪಣೆ ಮಾಡಿದ ಮ್ಯಾಥ್ಯೂ ವೇಡ್‌ ಆಸ್ಟ್ರೇಲಿಯ ಪರ 36 ಪಂದ್ಯ ಆಡಿದ್ದಾರೆ. 2021ರ ಬಳಿಕ ಟೆಸ್ಟ್‌ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಅಂದು ಕೊನೆಯ ಸಲ ಬ್ರಿಸ್ಬೇನ್‌ನಲ್ಲಿ ಭಾರತದೆದುರು ಆಡಿದ್ದರು. 1,613 ರನ್‌, 4 ಶತಕ, 74 ಕ್ಯಾಚ್‌, 11 ಸ್ಟಂಪಿಂಗ್‌ ಇವರ ಸಾಧ ನೆಯಾಗಿದೆ. 2021ರ ಬಳಿಕ ಇವರ ಸ್ಥಾನಕ್ಕೆ ಅಲೆಕ್ಸ್‌ ಕ್ಯಾರಿ ಲಗ್ಗೆ ಇಟ್ಟರು.

“ಬ್ಯಾಗ್ಗಿ ಗ್ರೀನ್‌ ಕ್ಯಾಪ್‌ ಧರಿಸಿ ದೇಶವನ್ನು ಪ್ರತಿನಿಧಿಸಿದ್ದು ನನ್ನ ಪಾಲಿನ ಅವಿಸ್ಮರಣೀಯ ಕ್ಷಣ. ಟೆಸ್ಟ್‌ ಕ್ರಿಕೆಟಿನ ಪ್ರತಿಯೊಂದು ಸವಾಲನ್ನೂ ನಾನು ಆನಂದಿಸಿದ್ದೇನೆ. ರೆಡ್‌ ಬಾಲ್‌ ಕ್ರಿಕೆಟ್‌ ನನ್ನ ನೆಚ್ಚಿನ ಮಾದರಿ. ಇನ್ನೀಗ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದು ವರಿಯುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂಬುದಾಗಿ ಮ್ಯಾಥ್ಯೂ ವೇಡ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next