ಕ್ಯಾನ್‌ಬೆರಾ: ಶ್ರೀಲಂಕಾ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸಿದ ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮಂಗಳವಾರದ 3ನೇ ಮುಖಾಮುಖಿಯನ್ನು ಆರನ್ ಫಿಂಚ್ ಪಡೆ 6 ವಿಕೆಟ್‌ಗಳಿಂದ ಜಯಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾಕ್ಕೆ ಗಳಿಸಲು ಸಾಧ್ಯವಾದದ್ದು 6ಕ್ಕೆ 121 ರನ್ ಮಾತ್ರ. ಆಸ್ಟ್ರೇಲಿಯ 16.5 ಓವರ್‌ಗಳಲ್ಲಿ 4 ವಿಕೆಟಿಗೆ 124 ರನ್ ಬಾರಿಸಿತು.
ಲಂಕಾ ಕುಸಿತದಲ್ಲಿ ವೇಗಿ ಕೇನ್ ರಿಚರ್ಡ್‌ಸನ್ ಪ್ರಮುಖ ಪಾತ್ರ ವಹಿಸಿದರು. 21ಕ್ಕೆ 3 ವಿಕೆಟ್ ಉರುಳಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಜೇಯ 39 ರನ್ ಮಾಡಿದ ನಾಯಕ ದಸುನ್ ಶಣಕ ಲಂಕಾ ಸರದಿಯ ಟಾಪ್ ಸ್ಕೋರರ್. ಚಂಡಿಮಾಲ್ 25 ರನ್ ಹೊಡೆದರು.
ಇದನ್ನೂ ಓದಿ:ಪ್ರೊ ಕಬಡ್ಡಿ: ಪಾಟ್ನಾ ಪೈರೇಟ್ಸ್ ಗೆ ಸತತ 5ನೇ ಗೆಲುವು
ಚೇಸಿಂಗ್ ವೇಳೆ ಆಸ್ಟ್ರೇಲಿಯ ಬೆನ್ ಮೆಕ್‌ಡರ್ಮಟ್ ವಿಕೆಟನ್ನು ಮೊದಲ ಎಸೆತದಲ್ಲೇ ಕಳೆದುಕೊಂಡಿತು. ಫಿಂಚ್ (35), ಮ್ಯಾಕ್ಸ್‌ವೆಲ್ (35) ಹೆಚ್ಚಿನ ಅಪಾಯವಾಗದಂತೆ ನೋಡಿಕೊಂಡರು. 24ಕ್ಕೆ 3 ವಿಕೆಟ್ ಉರುಳಿಸಿದ ಮಹೀಂದ್ರ ತೀಕ್ಷಣ ಲಂಕೆಯ ಯಶಸ್ವಿ ಬೌಲರ್.