Advertisement

ವಿದಾಯ ಟೆಸ್ಟ್‌ಗೂ ಮುನ್ನ ಏಕದಿನ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ David Warner

10:57 AM Jan 01, 2024 | Team Udayavani |

ಸಿಡ್ನಿ: ವಿದಾಯ ಟೆಸ್ಟ್‌ ಆಡುವ ಹೊಸ್ತಿಲಿನಲ್ಲಿರುವ ಬೆನ್ನಲ್ಲೇ ಆಸ್ಟ್ರೇಲಿಯದ ಸ್ಟಾರ್‌ ಆಟಗಾರ  ಡೇವಿಡ್ ವಾರ್ನರ್ ಸೋಮವಾರ(ಜ.1 ರಂದು) ಏಕದಿನ ಕ್ರಿಕೆಟ್‌ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

Advertisement

ಏಕದಿನ ವಿಶ್ವಕಪ್‌ ಸಂದರ್ಭದಲ್ಲಿಯೇ ನಾನು ನಿವೃತ್ತಿ ಆಗುವ ಬಗ್ಗೆ ಯೋಚನೆ ಮಾಡಿದ್ದೆ. ಭಾರತದ ನೆಲದಲ್ಲಿ ಏಕದಿನ ವಿಶ್ವಕಪ್‌ ಗೆದ್ದಿರುವುದು ದೊಡ್ಡ ಸಾಧನೆಯಾಗಿದೆ ಎಂದು ಅವರು ಪ್ರತಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

“2025 ರಲ್ಲಿ ಪಾಕಿಸ್ತಾನದಲಿ ಚಾಂಪಿಯನ್ಸ್‌ ಟ್ರೋಫಿ ನಡೆಯಲಿದೆ. ಈ ವೇಳೆ ತನ್ನ ತಂಡಕ್ಕೆ ಆರಂಭಿಕ ಆಟಗಾರನ ಅಗತ್ಯಬಿದ್ದರೆ ನಿವೃತ್ತಿಯಿಂದ ವಾಪಾಸ್‌ ಆಗಿ ಆಡುತ್ತೇನೆ. ಇನ್ನೆರಡು ವರ್ಷ ನಾನು ಕ್ರಿಕೆಟ್‌ ಆಡಬಲ್ಲೆ” ಎಂದು ಅವರು ಹೇಳಿದ್ದಾರೆ.

ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಏಕದಿನ ವಿಶ್ವಕಪ್‌ ನಲ್ಲಿ ವಾರ್ನರ್‌ ಒಟ್ಟು 11 ಪಂದ್ಯದಲ್ಲಿ 48.63 ರ ಸರಾಸರಿಯಲ್ಲಿ 535 ರನ್ ಮತ್ತು 108.29 ರ ಸ್ಟ್ರೈಕ್ ರೇಟ್ ನಲ್ಲಿ ಎರಡು ಶತಕ ಮತ್ತ ಒಂದು ಅರ್ಧಶತಕಗಳಿಸಿದ್ದರು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ 163 ರನ್ ಗಳಿಸಿದ್ದರು.

Advertisement

ಇಲ್ಲಿಯವರೆಗೆ 161 ಏಕದಿನಗಳಲ್ಲಿ ವಾರ್ನರ್ 22 ಶತಕಗಳು ಮತ್ತು 33 ಅರ್ಧ ಶತಕಗಳೊಂದಿಗೆ 45.30 ರ ಸರಾಸರಿಯಲ್ಲಿ 6932 ರನ್ ಗಳನ್ನು ಗಳಿಸಿದ್ದಾರೆ. ಜನವರಿ 2009 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೋಬಾರ್ಟ್‌ನಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.

ಆಸೀಸ್‌ ನ ದಿಗ್ಗಜರಾದ ರಿಕಿ ಪಾಂಟಿಂಗ್, ಆಡಮ್ ಗಿಲ್‌ಕ್ರಿಸ್ಟ್, ಮಾರ್ಕ್ ವಾ, ಮೈಕೆಲ್ ಕ್ಲಾರ್ಕ್ ಮತ್ತು ಸ್ಟೀವ್ ವಾ ನಂತರ ಬಳಿಕ ಅತೀ ಹೆಚ್ಚು ರನ್‌ ಗಳಿಸಿದ ಎನ್ನುವ ಕೀರ್ತಿ ವಾರ್ನರ್‌ ಅವರದು.

 

Advertisement

Udayavani is now on Telegram. Click here to join our channel and stay updated with the latest news.

Next