Advertisement

National Space Day: ಆ.23 “ರಾಷ್ಟ್ರೀಯ ಬಾಹ್ಯಾಕಾಶ ದಿನ”: ಈಗ ಅಧಿಕೃತ

08:49 PM Aug 29, 2023 | Team Udayavani |

ನವದೆಹಲಿ: ಚಂದ್ರನ ದಕ್ಷಿಣ ಭಾಗದಲ್ಲಿ ಆ.23ರಂದು ಯಶಸ್ವಿಯಾಗಿ ವಿಕ್ರಮ್‌ ಲ್ಯಾಂಡರ್‌, ಪ್ರಜ್ಞಾನ್‌ ರೋವರ್‌ ಇಳಿದ ಹಿನ್ನೆಲೆಯಲ್ಲಿ ಪ್ರತಿ ವರ್ಷದ ಆ.23ರಂದು “ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಆಚರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಆ.26ರಂದು ಬೆಂಗಳೂರಿನ ಪೀಣ್ಯದಲ್ಲಿ ಇರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟ ವೇಳೆ ಈ ಅಂಶ ಘೋಷಣೆ ಮಾಡಿದ್ದರು. ಆ ಬಗ್ಗೆ ನವದೆಹಲಿಯಲ್ಲಿ ಮಂಗಳವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಚಂದ್ರಯಾನ-3 ಯಶಸ್ವಿಯಾದ ಬಗ್ಗೆ ಕೇಂದ್ರ ಸಂಪುಟ ಸಭೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Advertisement

ಚಂದ್ರನಲ್ಲಿ ವಾರ ಪೂರೈಸಿದ ಪ್ರಜ್ಞಾನ್‌ ರೋವರ್‌
ಇಸ್ರೋ ನಿರೀಕ್ಷಿತ ಚಂದ್ರಯಾನ-3 ಯಶಸ್ವಿಯಾಗಿ ಮಂಗಳವಾರಕ್ಕೆ ಒಂದು ವಾರ ಪೂರ್ತಿಯಾಗಿದೆ. ಇದುವರೆಗೆ ಅದರ ಕಾರ್ಯ ನಿರ್ವಹಣೆಯಿಂದ ತೃಪ್ತಿಯಾಗಿದೆ ಮತ್ತು ಶಶಾಂಕನ ಮೇಲೆ ತಾಪಮಾನ ಯಾವ ರೀತಿ ಏರಿಳಿತವಾಗುತ್ತದೆ ಎಂಬ ಐತಿಹಾಸಿಕ ಹಾಗೂ ಮೊದಲ ಮಾಹಿತಿಯನ್ನು ಪ್ರಜ್ಞಾನ್‌ ರೋವರ್‌ ರವಾನೆ ಮಾಡಿದೆ. ಇದಲ್ಲದೆ, ಆ ಪ್ರದೇಶದಲ್ಲಿ ಉಂಟಾಗುವ ಕಂಪನಗಳು, ಇರಬಹುದಾದ ಖನಿಜ ಲವಣಗಳು, ನೀರಿನ ಅಂಶದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಕಳುಹಿಸುವ ನಿರೀಕ್ಷೆಯನ್ನು ಇಸ್ರೋ ಹೊಂದಿದೆ. ಸೋಮವಾರ ರೋವರ್‌ ಎರಡು ಕುಳಿಗಳನ್ನು ತಪ್ಪಿಸಿ ಮುಂದುವರಿದಿರುವ ಬಗ್ಗೆ ಫೋಟೋ ಸಹಿತ ಮಾಹಿತಿಯನ್ನು ಕಳುಹಿಸಿಕೊಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next