ಮಂಗಳೂರು: ಲಕುಮಿ ಸಿನಿ ಕ್ರಿಯೇಷನ್ ಮತ್ತು ಲೋ ಬಜೆಟ್ ಪ್ರೊಡಕ್ಷನ್ ನಿರ್ಮಾಣದಲ್ಲಿ ಹರ್ಷಿತ್ ಸೋಮೇಶ್ವರ ನಿರ್ದೇಶನದ “ಅನರ್ ಕಲಿ’ ತುಳು ಸಿನೆಮಾ ಆ. 23ರಂದು ಕರಾವಳಿಯಾದ್ಯಂತ ಪ್ರದರ್ಶನ ಆರಂಭಿಸಲಿದೆ.
ಕಿಶೋರ್ ಡಿ. ಶೆಟ್ಟಿ ಮಾತನಾಡಿ, ಅನರ್‌ಕಲಿ ಸಿನೆಮಾದ ಪ್ರೀಮಿಯರ್ ಶೋ ಈಗಾಗಲೇ ನಡೆದಿದ್ದು, ಪ್ರೇಕ್ಷಕರು ನಮ್ಮ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಸಿನೆಮಾ ಕುರಿತು ತುಳುನಾಡಿನಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇದು ನಮ್ಮ ಚಿತ್ರತಂಡಕ್ಕೆ ಸಿಕ್ಕ ಮೊದಲ ಗೆಲುವು. ಆ. 23ರಿಂದ ಎಲ್ಲರೂ ಚಿತ್ರ ವೀಕ್ಷಿಸಿ ನಮ್ಮನ್ನು ಗೆಲ್ಲಿಸಲಿದ್ದಾರೆ ಎಂದವರು ಹೇಳಿದರು.
ನಟ ಶೋಭರಾಜ್ ಪಾವೂರು ಮಾತನಾಡಿ, ಹೊಸ ಗೆಟಪ್‌ನಲ್ಲಿ ಸಿನೆಮಾ ಮೂಡಿಬಂದಿದೆ. ವೀಕ್ಷಕರಿಗೆ ಸಿನೆಮಾ ಬೇಸರ ಆಗದು ತುಳುವಿನಲ್ಲಿ ಇದೊಂದು ಭಿನ್ನ ಪ್ರಯತ್ನ ಎಂದರು.
ನಟಿ ಆರ್. ಜೆ. ಮಧುರಾ ಮಾತನಾಡಿ, “ಸಿನೆಮಾ ನೋಡಿದವರು ತುಂಬಾ ಚೆನ್ನಾಗಿದೆ ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. ತುಳುವರು ಥಿಯೇಟರ್‌ಗೆ ಬಂದು ಈ ಸಿನೆಮಾ ನೋಡಿದರೆ ಸಿನೆಮಾ ಗೆಲ್ಲಲು ಸಾಧ್ಯ. ಜತೆಗೆ ಇಂತಹ ಸಿನೆಮಾ ಇನ್ನಷ್ಟು ಮೂಡಿಬರಲು ಸಾಧ್ಯ ಎಂದರು.
ನಿರ್ದೇಶಕ ಹರ್ಷಿತ್ ಸೋಮೇಶ್ವರ ಮಾತನಾಡಿ, ಈ ಸಿನೆಮಾದಲ್ಲಿ 2 ಗಂಟೆ 10 ನಿಮಿಷಗಳ ಕಾಲ ನಿಮ್ಮನ್ನು ರಂಜಿಸಲು ಬೇಕಾದ ಎಲ್ಲವೂ ಇವೆ. ಶೋಭರಾಜ್ ಪಾವೂರು, ಮಧುರಾ ಆರ್.ಜೆ., ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ದೀಪಕ್ ಪಾಣಾಜೆ, ರವಿ ರಾಮಕುಂಜ, ಪುಷ್ಪರಾಜ್ ಬೊಳ್ಳೂರು, ಸುಜಾತಾ ಶಕ್ತಿನಗರ, ನಮಿತಾ ಕುಳೂರು ಮುಖ್ಯಭೂಮಿಕೆಯಲ್ಲಿದ್ದಾರೆ. ಮೋಹನ್ ಕೊಪ್ಪಲ, ಹರ್ಷಿತ್ ಸೋಮೇಶ್ವರ, ಮಂಜು ರೈ ಮೂಳೂರು, ರಂಜನ್ ಬೋಳೂರು, ಶರಣ್ ಕೈಕಂಬ, ಪ್ರಕಾಶ್ ಶೆಟ್ಟಿ ಧರ್ಮನಗರ, ವಾತ್ಸಲ್ಯ ಸಾಲಿಯಾನ್, ವಿನಾಯಕ್ ಮುಂತಾದವರು ಸಿನೆಮಾದಲ್ಲಿದ್ದಾರೆ ಎಂದರು.
ಅರುಣ್ ರೈ ಪುತ್ತೂರು, ವಾತ್ಸಲ್ಯ, ಲಂಚುಲಾಲ್, ರಜನೀಶ್ ಕೋಟ್ಯಾನ್, ರೋಹಿತ್, ಮೋಹನ್ ಕೊಪ್ಪಲ ಉಪಸ್ಥಿತರಿದ್ದರು.