Advertisement

ಸದ್ಗುಣಗಳಿಂದ ನವ ಸಮಾಜ ನಿರ್ಮಾಣ ಸಾಧ್ಯ: ರೈ|ರೆ|ಡಾ|ಬರ್ನಾರ್ಡ್‌ ಮೋರಸ್‌

12:49 AM Jan 27, 2023 | Team Udayavani |

ಕಾರ್ಕಳ: ಸತ್ಯ ಮತ್ತು ಪ್ರಾಮಾಣಿಕತೆ ಸದಾಕಾಲ ಬಾಳುವ ಸದ್ಗುಣಗಳು. ಅವುಗಳಿಂದಾಗಿ ನವಸಮಾಜ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಬರ್ನಾರ್ಡ್‌ ಮೋರಸ್‌ ಹೇಳಿದರು.

Advertisement

ಅವರು ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾ ಪುಣ್ಯಕ್ಷೇತ್ರದ ಮಹೋತ್ಸ ವದ 5ನೇ ಹಾಗೂ ಕೊನೆಯ ದಿನವಾದ ಗುರುವಾರ ಪ್ರಮುಖ ಬಲಿ ಪೂಜೆಯನ್ನು ಅರ್ಪಿಸಿ ಪ್ರಬೋಧನೆ ನೀಡಿದರು.

ಕೌಟುಂಬಿಕ ಬದುಕಿನಲ್ಲೂ ಸದ್ಗುಣದ ಅಗತ್ಯವಿದೆ ಎಂದರು.

ಜ. 22ರಂದು ಆರಂಭಗೊಂಡ ವಾರ್ಷಿಕ ಮಹೋತ್ಸವವು ಭಕ್ತಿ ಸಂಭ್ರಮ  ದೊಂದಿಗೆ ಜ. 26ರಂದು ತೆರೆ ಕಂಡಿತು.

ದಿನದ ಇತರ ಬಲಿಪೂಜೆಗಳನ್ನು ವಂ| ಬೇಸಿಲ್‌ ವಾಜ್‌ ಮಡಂತ್ಯಾರು, ವಂ| ಲಾರೆನ್ಸ್‌ ಡಿ’ಸೋಜಾ ಶಿವಮೊಗ್ಗ, ವಂ| ಕ್ಲಿಫರ್ಡ್‌ ಪಿಂಟೊ ಬೆಳ್ತಂಗಡಿ, ವಂ| ರೋಬರ್ಟ್‌ ಕ್ರಾಸ್ತಾ ಗುಲ್ಬರ್ಗ ಮತ್ತು ವಂ| ಜೋಸೆಫ್‌ ಮಾರ್ಟಿಸ್‌ ದೇರೆಬೈಲು ನೆರವೇರಿಸಿದರು.

Advertisement

ದಿನದ ಅಂತಿಮ ಬಲಿಪೂಜೆಯನ್ನು ವಂ| ಪಾವ್ಲ್ ರೇಗೊ ಮಿಯ್ನಾರು ನೆರವೇರಿಸುವುದರೊಂದಿಗೆ ಮಹೋತ್ಸವದ ಐದನೇ ಹಾಗೂ ಅಂತಿಮ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು. ಮಹೋತ್ಸವದ ಸಂದರ್ಭ ಪ್ರತೀ ದಿನ 7ರಂತೆ ಒಟ್ಟು 35 ಬಲಿಪೂಜೆಗಳು ನೆರವೇರಿದವು.

ಲಕ್ಷಾಂತರ ಭಕ್ತರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಹರಕೆಗಳನ್ನು ಸಲ್ಲಿಸಿದರು. ಉಡುಪಿ, ಮಂಗಳೂರು, ಶಿವಮೊಗ್ಗ ಧರ್ಮಪ್ರಾಂತದ ಧರ್ಮಗುರುಗಳು ಪಾಪ ನಿವೇದನೆಯ ಸಂಸ್ಕಾರದಲ್ಲಿ ಸಹಕರಿಸಿದರು.

ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್‌ ಲೋಬೊ ಮಾರ್ಗ ದರ್ಶನದಲ್ಲಿ ಬಸಿಲಿಕಾದ ನಿರ್ದೇಶಕ ವಂ| ಆಲ್ಬನ್‌ ಡಿ’ಸೋಜಾ ನೇತೃತ್ವದಲ್ಲಿ ಮಹೋತ್ಸವ ಸಾಂಗವಾಗಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next