Advertisement

Government ಅಸ್ಥಿರಗೊಳಿಸಲು ಯತ್ನ: ಬಿಜೆಪಿ ವಿರುದ್ಧ ರಮಾನಾಥ ರೈ ಆರೋಪ

10:50 PM Nov 06, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಪೂರ್ಣ ಬಹುಮತದೊಂದಿಗೆ ಸುಭದ್ರವಾಗಿ ಆಡಳಿತ ನಡೆಸುತ್ತಿದ್ದರೂ, ಬಿಜೆಪಿ ಮುಖಂಡರು ಸರಕಾರವನನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಬಿಜೆಪಿಗೆ ಯಾವುದೇ ಕಾರಣಕ್ಕೂ ಸರಕಾರವನ್ನು ಉರುಳಿಸಲು ಸಾಧ್ಯವಾಗದು, ಐದು ವರ್ಷ ಸರಕಾರ ಭದ್ರವಾಗಿ ಆಡಳಿತ ನಡೆಸಲಿದೆ ಎಂದರು.

Advertisement

ಸೋಮವಾರ ನಗರದಲ್ಲಿ ಅವರು ಮಾತನಾಡಿ, ಅಧಿಕಾರ ಕಳೆದುಕೊಂಡ ಬಳಿಕ ಬಿಜೆಪಿಯವರು ಸರಕಾರದ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವ ಮೂಲಕ ಸರಕಾರದ ವಿರುದ್ಧ ಪ್ರಹಾರ ಮಾಡುತ್ತಿದ್ದಾರೆ. ಆದರೆ ಜನರು ಬಿಜೆಪಿಯ ಈ ಕುತಂತ್ರ ಬುದ್ಧಿಯನ್ನು ಅರ್ಥಮಾಡಿಕೊಂಡಿದ್ದಾರೆ ಎಂದರು.

ಕಾಂಗ್ರೆಸ್‌ ಹಿಂದಿನಿಂದಲೂ ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಬಾರಿಯೂ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರು, ಬಡವರು, ಹಿಂದುಳಿದ ವರ್ಗದವರಿಗೆ ನೆರವಾಗಿದೆ. ಆದರೆ ಬಿಜೆಪಿ ಬಂಡವಾಳಶಾಹಿಗಳು, ಶ್ರೀಮಂತರು, ವ್ಯಾಪಾರಿಗಳ ಪರ ಮಾತ್ರ ಇದೆ. ರೈತರ ಸಾಲಾ ಮನ್ನಾ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಿದ್ದ ಪ್ರಧಾನಿಯವರು ಉದ್ದಿಮೆದಾರರು, ಬಂಡವಾಳ ಶಾಹಿಗಳ ಸಾಲಾ ಮನ್ನಾ ಮಾಡಿದ್ದಾರೆ ಎಂದು ದೂರಿದರು.

ಶಾಸಕರಲ್ಲಿ ಇಚ್ಛಾಶಕ್ತಿ ಕೊರತೆ
ರಾಜ್ಯ ಸರಕಾರ ಅಭಿವೃದ್ಧಿ ಕೆಲಸಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿ ಶಾಸಕರಲ್ಲಿ ಇಚ್ಛಾಶಕ್ತಿ ಇಲ್ಲ. ತಾನು ವಿಪಕ್ಷ ಸದಸ್ಯನಾಗಿದ್ದಾಗ ಅನುದಾನದ ವಿಷಯದಲ್ಲಿ ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡಿಲ್ಲ ಎಂದರು. ನಾನ್‌ ಸಿಆರ್‌ಝಡ್‌ ಮರಳು ಬ್ಲಾಕ್‌ಗಳನ್ನು ಗುರುತಿಸುವ ಸಂಬಂಧ ಈಗಾಗಲೇ ಜಿಲ್ಲಾಡಳಿತದ ಗಮನ ಸೆಳೆಯಲಾಗಿದ್ದು, ಜಿಲ್ಲಾಧಿಕಾರಿಯವರು ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಸಿಆರ್‌ಝಡ್‌ ವ್ಯಾಪ್ತಿಯ ಮರಳು ವಿತರಿಸಲು ಕೇಂದ್ರದ ಒಪ್ಪಿಗೆ ಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭೆ ಚುನಾವಣೆ; ಒಗ್ಗಟ್ಟಿನಿಂದ ಕೆಲಸಲೋಕಸಭಾ ಚುನಾವಣೆಗೆ ಸಂಬಂಧಿಸಿ ಹೈಕಮಾಂಡ್‌ ಸೂಚಿಸುವ
ಅಭ್ಯರ್ಥಿ ಪರವಾಗಿ ಎಲ್ಲರೂ ಒಗ್ಗಟ್ಟಿ ನಿಂದ ಕೆಲಸ ಮಾಡುತ್ತೇವೆ. ಅಭ್ಯರ್ಥಿ ಆಯ್ಕೆಗೆ ಪಕ್ಷದಿಂದಲೇ ಸರ್ವೇ ನಡೆ
ಯಲಿದ್ದು, ಜನಾಭಿಪ್ರಾಯದ ಬಳಿಕ ಘೋಷಣೆ ನಡೆಯಲಿದೆ ಎಂದ ರಮಾನಾಥ ರೈ ಅವರು, ತಾವು ಆಕಾಂಕ್ಷಿಯೇ? ಎಂದು ಕೇಳಿದ ಪ್ರಶ್ನೆಗೆನೇರವಾಗಿ ಉತ್ತರಿಸದೆ ನುಣುಚಿಕೊಂಡರು.

ಮಾಜಿ ಶಾಸಕ ಜೆ.ಆರ್‌.ಲೋಬೊ, ಮುಖಂಡರಾದ ಇಬ್ರಾಹಿಂ ಕೋಡಿ ಜಾಲ್‌, ಶಶಿಧರ ಹೆಗ್ಡೆ, ಪ್ರಕಾಶ್‌ ಸಾಲ್ಯಾನ್‌, ಧರಣೇಂದ್ರ ಕುಮಾರ್‌, ರಕ್ಷಿತ್‌ ಶಿವರಾಂ, ಸುದರ್ಶನ ಜೈನ್‌, ನಝೀರ್‌ ಬಜಾಲ್‌, ಶಾಹುಲ್‌ ಹಮೀದ್‌, ಗಣೇಶ್‌ ಪೂಜಾರಿ, ಶೇಖರ ಕುಕ್ಯಾಡಿ, ಅಬ್ಟಾಸ್‌ ಆಲಿ, ಮಹಮ್ಮದ್‌ ಕುಂಜತ್ತಬೈಲ್‌, ಶಬ್ಬೀರ್‌ ಸಿದ್ಧಕಟ್ಟೆ ಮೊದಲಾದವರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next