Advertisement

ಕುಲಸಚಿವರ ಬದಲಾವಣೆಗೆ ಯತ್ನ? 

07:15 AM Aug 16, 2018 | |

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಹಾಗೂ ವಿದ್ಯಾವಿಷಯಕ ಪರಿಷತ್‌ನ ಸರ್ಕಾರಿ ನಾಮರ್ದೇಶಿತ ಸದಸ್ಯರನ್ನು ಬದಲಾಯಿಸಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಈಗ ಕುಲಸಚಿವರ ಬದಲಾವಣೆಗೆ ಮುಂದಾಗಿದ್ದಾರೆಂದು ತಿಳಿದುಬಂದಿದೆ.

Advertisement

ಕುವೆಂಪು ವಿವಿ, ಕರ್ನಾಟಕ ಜಾನಪದ ವಿವಿ, ತುಮಕೂರು ವಿವಿ, ದಾವಣಗೆರೆ ವಿವಿ, ಗುಲ್ಬರ್ಗ ವಿವಿ ಸೇರಿ ಮೊದಲ ಹಂತದಲ್ಲಿ 7 ವಿಶ್ವವಿದ್ಯಾಲಯಗಳ ಕುಲಸಚಿವರ ಬದಲಾವಣೆ ಮಾಡಿ, ನಂತರ ಉಳಿದ ವಿವಿ ಕುಲಸಚಿವರ ಬದಲಾವಣೆಗೆ ಸಚಿವರು ಮನಸ್ಸು ಮಾಡಿದ್ದಾರೆ. ಅಲ್ಲದೇ ಕೆಲವು ವಿವಿಗಳ ಕುಲಸಚಿವರನ್ನು ಅದಲು ಬದಲು ಮಾಡಲು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣ ಸಚಿವರ ಈ ನಿರ್ಧಾರಕ್ಕೆ ನಿವೃತ್ತ ಕುಲಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸಕಾರಣ ಇಲ್ಲದೆ ಕುಲಪತಿಗಳ ಬದಲಾವಣೆ ಸರಿಯಲ್ಲ. ಕುಲಸಚಿವರ ಬದಲಾವಣೆ ಆಡಳಿತಾತ್ಮಕ ದೃಷ್ಟಿಯಿಂದ ಒಳ್ಳೆದಲ್ಲ ಎಂದು ನಿವೃತ್ತ ಕುಲಸಚಿವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next