Advertisement

Bangladeshದಲ್ಲಿ ನಿಲ್ಲದ ಹಿಂದೂಗಳ ಮೇಲಿನ ದಾಳಿ

11:46 PM Aug 14, 2024 | Esha Prasanna |

ಢಾಕಾ: ಹಿಂಸಾಪೀಡಿತ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮುಂದುವರಿದಿದೆ. ವಾಯವ್ಯ ಬಾಂಗ್ಲಾದೇಶದ ಹಿಂದೂ ಸಮುದಾ ಯಕ್ಕೆ ಸೇರಿದ ವ್ಯಕ್ತಿಯ ಮನೆಗೆ ಬೆಂಕಿ ಹಚ್ಚಲಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಗ್ಧಾನ ಮಾಡಿದ್ದರೂ ಈ ಘಟನೆ ನಡೆದಿದೆ.

ಅಂ.ರಾ. ಕೋರ್ಟಲ್ಲಿ ವಿಚಾರಣೆ:
ಶೇಖ್‌ ಹಸೀನಾ ಸರಕಾರದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಬೃಹತ್‌ ಪ್ರತಿಭಟನೆಯ ಸಮಯದಲ್ಲಿ ಕೊಲೆ ನಡೆಸಿದವರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಬಾಂಗ್ಲಾದ ಮಧ್ಯಾಂತರ ಸರಕಾರ ಘೋಷಣೆ ಮಾಡಿದೆ. ವಿಶ್ವ ಸಂಸ್ಥೆಯಡಿಯಲ್ಲಿ ತನಿಖೆ ನಡೆಸಲು ಮಧ್ಯಾಂತರ ಸರಕಾರ ಸಿದ್ಧತೆ ನಡೆಸಿದೆ.

ಹಸೀನಾ ವಿರುದ್ಧ 2ನೇ ಪ್ರಕರಣ
ಜು.15ರಿಂದ ಬಾಂಗ್ಲಾದಲ್ಲಿ ನಡೆ ದಿದ್ದ ಹಿಂಸಾ ಕೃತ್ಯಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರ ವಿರುದ್ಧ 2ನೇ ಪ್ರಕರಣವನ್ನು ದಾಖಲಿಸಲಾಗಿದೆ. ನ್ಯಾಯವಾ ದಿಯೊಬ್ಬರು ಹಸೀನಾ ವಿರುದ್ಧ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next