Advertisement

INDvsBAN: ಭಾರತ ವಿರುದ್ದದ ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ಬಾಂಗ್ಲಾದೇಶ

04:38 PM Sep 12, 2024 | Team Udayavani |

ಢಾಕಾ: ಪಾಕಿಸ್ತಾನ ವಿರುದ್ದ ಟೆಸ್ಟ್‌ ಸರಣಿಯನ್ನು ಅವರದೇ ನೆಲದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ ಉತ್ಸಾಹದಲ್ಲಿರುವ ಬಾಂಗ್ಲಾದೇಶವು (Bangladesh) ಇದೀಗ ಭಾರತ ಪ್ರವಾಸಕ್ಕೆ ಅಣಿಯಾಗಿದೆ. ಭಾರತದ ವಿರುದ್ದ ಟೆಸ್ಟ್‌ ಸರಣಿಗೆ 16 ಜನರ ತಂಡವನ್ನು ಪ್ರಕಟಿಸಲಾಗಿದೆ.

Advertisement

ಬಾಂಗ್ಲಾದೇಶವು ಭಾರತದ ವಿರುದ್ದ ಎರಡು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯವು ಸೆ.19ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ಎರಡನೇ ಪಂದ್ಯವು ಸೆ.27ರಿಂದ ಕಾನ್ಪುರದಲ್ಲಿ ನಡೆಯಲಿದೆ.

ಇದುವರೆಗೆ ಭಾರತದಲ್ಲಿ ಬಾಂಗ್ಲಾ ಆಡಿರುವ ಎಲ್ಲಾ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಸೋಲು ಕಂಡಿದೆ.

ಪಾಕಿಸ್ತಾನ ವಿರುದ್ದದ ಸರಣಿಯಲ್ಲಿ ಗಾಯಗೊಂಡಿದ್ದ ವೇಗಿ ಶೊರಿಫುಲ್‌ ಇಸ್ಲಾಂ ಅವರು ಭಾರತ ಪ್ರವಾಸದಿಂದ ಹೊರಬಿದ್ದಿದ್ದಾರೆ.

ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಐಸಿಸಿಯ ಅಧಿಕೃತ ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ಬಾಂಗ್ಲಾದೇಶವು ಒಂಬತ್ತನೇ ಸ್ಥಾನದಲ್ಲಿದೆ.

Advertisement

ಬಾಂಗ್ಲಾ ಟೆಸ್ಟ್‌ ತಂಡ

ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ಮಹಮ್ಮದುಲ್ ಹಸನ್ ಜಾಯ್, ಝಾಕಿರ್ ಹಸನ್, ಶದ್ಮಾನ್ ಇಸ್ಲಾಂ, ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟ್ಟನ್ ಕುಮಾರ್ ದಾಸ್, ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ನಯೀಮ್ ಹಸನ್, ನಹಿದ್ ರಾಣಾ, ಹಸನ್ ಮಹಮ್ಮದ್, ಹಸನ್ ಮಹಮ್ಮದ್, ಸೈಯದ್ ಖಲೀದ್ ಅಹ್ಮದ್, ಜಾಕರ್ ಅಲಿ.

Advertisement

Udayavani is now on Telegram. Click here to join our channel and stay updated with the latest news.