Advertisement

Bangladesh; ಕೊ*ಲೆ ಆರೋಪ: ಹಸೀನಾ ವಿರುದ್ಧ 155ನೇ ಪ್ರಕರಣ

01:43 AM Sep 16, 2024 | Team Udayavani |

ಢಾಕಾ: ದಂಗೆ ಹಿನ್ನೆಲೆಯಲ್ಲಿ ಬಾಂಗ್ಲಾ ದೇಶದಿಂದ ಪಲಾಯನ ಮಾಡಿರುವ ಮಾಜಿ ಪ್ರಧಾನಿ ಶೇಖ್‌ ಹಸೀನಾ ವಿರುದ್ಧ ಹೊಸದಾಗಿ ಮತ್ತೂಂದು ಕೇಸು ದಾಖಲಾಗಿದೆ. ವಿದ್ಯಾರ್ಥಿಯೊಬ್ಬನನ್ನು ಕೊಲೆಗೈ ಯ್ಯಲು ಪ್ರಯತ್ನಿಸಿ ರುವ ಆರೋಪದಲ್ಲಿ ಹಸೀನಾ ಮತ್ತು ಇತರ 58 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.

Advertisement

ಫ‌ಹೀಮ್‌ ಫೈಸಲ್‌ ಎಂಬ ವಿದ್ಯಾರ್ಥಿ ನೀಡಿರುವ ದೂರಿನ ಮೇರೆಗೆ ಕೇಸು ದಾಖಲಾಗಿದೆ. ಸರಕಾರದ ವಿರುದ್ಧದ ಪ್ರತಿಭಟನೆ ವೇಳೆ ಆತನ ಮೇಲೆ ಗುಂಡು ಹಾರಿಸಲಾಗಿತ್ತು. ಅದ ರಿಂದ ಆತ ಗಾಯಗೊಂಡಿದ್ದಾಗಿ ದೂರಿ ನಲ್ಲಿ ತಿಳಿಸಿದ್ದಾನೆ. ಮಾಜಿ ಪ್ರಧಾನಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 155ಕ್ಕೆ ಏರಿಕೆಯಾಗಿದೆ. ಈ ಪೈಕಿ 136 ಕೊಲೆಗೆ ಸಂಬಂಧಿಸಿದ್ದಾಗಿದೆ. 7 ನರಮೇಧ, 8 ಅಪಹರಣ, 1 ಬಿಎನ್‌ಪಿ ಪಕ್ಷದ ಮೇಲಿನ ದಾಳಿಗೆ ಸಂಬಂಧಿಸಿದೆ ಎಂದು ವರದಿಗಳು ತಿಳಿಸಿವೆ.

ಸೂಫಿ ಕೇಂದ್ರಗಳ ಮೇಲೆ ದಾಳಿ
ಢಾಕಾ: ಬಾಂಗ್ಲಾದೇಶದಲ್ಲಿ ಸೂಫಿ ಮಸೀ­ದಿಗಳನ್ನು ಅಲ್ಲಿನ ಮೂಲ ಭೂತ­ವಾದಿಗಳು ಗುರಿಯಾಗಿಸಿ ದಾಳಿ ನಡೆಸಿರುವುದು ವರದಿಯಾ ಗಿದೆ. ಜಾತಿ ಧರ್ಮಗಳನ್ನು ಮೀರಿ ಧಾರ್ಮಿಕ ಕೇಂದ್ರಗಳಾಗಿ ಗುರು ತಿಸಿಕೊಂಡಿರುವ ಸೂಫಿ ಕೇಂದ್ರ ಗಳ ಧ್ವಂಸ ಮುಸ್ಲಿಂ ಸಮುದಾ ಯಗಳ ಒಳಗೇ ಕಿಡಿ ಹೊತ್ತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next