Advertisement
ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಾಗ್ಧಾನ ಮಾಡಿದ್ದರೂ ಈ ಘಟನೆ ನಡೆದಿದೆ.
ಶೇಖ್ ಹಸೀನಾ ಸರಕಾರದ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಬೃಹತ್ ಪ್ರತಿಭಟನೆಯ ಸಮಯದಲ್ಲಿ ಕೊಲೆ ನಡೆಸಿದವರ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಾಗಿ ಬಾಂಗ್ಲಾದ ಮಧ್ಯಾಂತರ ಸರಕಾರ ಘೋಷಣೆ ಮಾಡಿದೆ. ವಿಶ್ವ ಸಂಸ್ಥೆಯಡಿಯಲ್ಲಿ ತನಿಖೆ ನಡೆಸಲು ಮಧ್ಯಾಂತರ ಸರಕಾರ ಸಿದ್ಧತೆ ನಡೆಸಿದೆ. ಹಸೀನಾ ವಿರುದ್ಧ 2ನೇ ಪ್ರಕರಣ
ಜು.15ರಿಂದ ಬಾಂಗ್ಲಾದಲ್ಲಿ ನಡೆ ದಿದ್ದ ಹಿಂಸಾ ಕೃತ್ಯಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ 2ನೇ ಪ್ರಕರಣವನ್ನು ದಾಖಲಿಸಲಾಗಿದೆ. ನ್ಯಾಯವಾ ದಿಯೊಬ್ಬರು ಹಸೀನಾ ವಿರುದ್ಧ ಅರ್ಜಿ ಸಲ್ಲಿಸಿದ್ದರಿಂದ ಪ್ರಕರಣ ದಾಖಲಿಸಲಾಗಿದೆ.