Advertisement
ಹೌದು, ಈಗಾಗಲೇ ಕ್ಸಿ ಜಿನ್‌ಪಿಂಗ್ ನೇತೃತ್ವದ ಕಮ್ಯು ನಿಸ್ಟ್ ಪಕ್ಷ 1949ರ ನಂತರ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಭಾರಿ ವೈಫಲ್ಯ ಕಂಡಿದೆ. ಪಕ್ಷದ ಸದಸ್ಯರಲ್ಲದೆ, ದೇಶವಾಸಿಗಳಲ್ಲೂ ಆಡಳಿತ ವಿರೋಧಿ ಅಲೆ ಎದ್ದು ತೋರಿದೆ. ಇವರೆಲ್ಲರ ಗಮನವನ್ನು ಬೇರೆಡೆ ವರ್ಗಾ ಯಿಸಲು ಚೀನಾ, ಭಾರತದ ಗಡಿಯಲ್ಲಿ ತಂಟೆಯ ನಾಟಕ ಆಡುತ್ತಿದೆ ಎಂದು “ಹಿಂದೂಸ್ತಾನ್ ಟೈಮ್ಸ್’ ವಿಶ್ಲೇಷಿಸಿದೆ.
Related Articles
ಇತ್ತೀಚೆಗಷ್ಟೇ ಚೀನಾ ಸೈನಿಕರು ಲಡಾಖ್‌ನಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ ಎಂದು ಟಿವಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಕೆಲಕಾಲ ಯೋಧರನ್ನು ವಶಕ್ಕೆ ಪಡೆದು, ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡಿದ್ದರು ಎನ್ನಲಾಗಿದೆ. ಆದರೆ, ವಿದೇಶಾಂಗ ಸಚಿವಾಲಯ ಈ ಸುದ್ದಿಯನ್ನು ತಳ್ಳಿಹಾಕಿದ್ದು, ಭಾರತ, ಚೀನಾಕ್ಕೆ ಪ್ರೊಟೊಕಾಲ್ ಅನ್ವಯ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಭಾರತೀಯ ಸೈನಿಕರ ಬಂಧನವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
Advertisement
ಲಡಾಖ್‌ನಲ್ಲಿ ಉದ್ವಿಗ್ನ ಸ್ಥಿತಿಲಡಾಖ್ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಗಲ್ವಾನ್ ನದಿ ತೀರದಲ್ಲಿ ಚೀನ ಸೇನೆ 100 ಡೇರೆಗಳನ್ನು ಹಾಕಿ ಕುಳಿತಿದ್ದು, ಬಂಕರ್ ನಿರ್ಮಾಣದಲ್ಲಿ ತೊಡಗಿದೆ. ಲಡಾಖ್‌ನ ನಾಲ್ಕೈದು ಎತ್ತರ ಪ್ರದೇಶಗಳಲ್ಲಿ ಚೀನ ಮಿಲಿಟರಿ ನಿಯೋಜನೆಗೊಂಡಿದೆ. ಇದನ್ನು ಅರಿತು ಪೂರ್ವ ಲಡಾಖ್‌ಗೆ ಮತ್ತಷ್ಟು ಸೈನಿಕರನ್ನು ಭಾರತೀಯ ಸೇನೆ ಕಳಿಸಿಕೊಟ್ಟಿದೆ. ಇತರೆ ಪ್ರದೇಶಗಳಲ್ಲಿದ್ದ ಹೆಚ್ಚುವರಿ ಬೆಟಾಲಿ ಯನ್‌ಗಳನ್ನು, ಲಡಾಖ್‌ನ ಗಡಿಯುದ್ದಕ್ಕೂ ನಿಯೋಜಿಸಿ, ಚೀನ ಸೈನಿಕರ ಚಲನವಲನಗಳ ಮೇಲೆ ಹದ್ದಿನಗಣ್ಣಿಟ್ಟಿದೆ. ಮೂರು ಕಡೆ ಅತಿಕ್ರಮಣ
ಗಡಿಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವ ನಡುವೆಯೇ ಭಾರತೀಯ ಸೇನಾ ಮುಖ್ಯಸ್ಥ ನರವಾನೆ ಎಂ.ಎಂ. ನರವಾನೆ, ಶುಕ್ರವಾರ ಲೇಹ್‌ನಲ್ಲಿರುವ 14ನೇ ಕಾರ್ಪ್Õ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಇದರ ನಡುವೆಯೇ, ಭಾರತದ ಗಡಿಯಲ್ಲಿನ ಗಲ್ವಾನ್ ನದಿ ತೀರದ ಮೂರು ಕಡೆ ಚೀನಾ ಸೈನಿಕರು ಅತಿಕ್ರಮಣ ನಡೆಸಿರುವ ಬಗ್ಗೆ ವರದಿಯಾಗಿದೆ. ಆ ಮೂರೂ ಪ್ರದೇಶಗಳನ್ನು ಸೇನೆ ಗುರುತು ಮಾಡಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.