ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಕಾರ್ಯಕರ್ತರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ದೇವತ್ಕಲ್ ಗ್ರಾಮದಲ್ಲಿ ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ. ದಲಿತರಿಗೆ ಹೊಟೇಲ್‌ನಲ್ಲಿ ಪ್ರವೇಶ ನಿಷೇಧಿಸಿದ್ದಾರೆ. ಹೊಲ ಮನೆ ಕೆಲಸಗಳಿಗೆ ದಲಿತರನ್ನು ಕೂಲಿ ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕಳೆದ ಎರಡು ದಿನಗಳ ಹಿಂದೆ ಜಮೀನಿಗೆ ನೀರು ಹರಿಸುವ ವಿಷಯವಾಗಿ ಸರ್ವಣೀಯರು ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ. ದಲಿತರ ಜಮೀನುಗಳಿಗೆ ನೀರು ಹರಿಸಲು ಬಿಡುತ್ತಿಲ್ಲ. ಈ ಬಗ್ಗೆ ಕೇಳಿದರೆ ನಾವು ನೀರು ಕಟ್ಟಿಕೊಂಡ ನಂತರ ನೀವು ನೀರು ಕಟ್ಟಿಕೊಳ್ಳಬೇಕು. ಅಲ್ಲಿಯವರೆಗೆ ನೀರು ಬಿಡುವುದಿಲ್ಲ ಎಂದು ದಲಿತ ಕುಟುಂಬದ ಮಾನಪ್ಪ ತಳವಾರನಿಗೆ ಮಾರಣಾಂತಿಕ ಹಲ್ಲೆ ಮಾಡಿ ಕೈ ಮುರಿದಿದ್ದಾರೆ ಎಂದು ದೂರಿದರು.
ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಒತ್ತಡಕ್ಕೆ ಮಣಿದ ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ. ಕಾರಣ ಕೂಡಲೇ ಹಲ್ಲೆ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷé ತೋರಿದಲ್ಲಿ ಸಮಿತಿ ಉಗ್ರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ನಿಂಗಣ್ಣ ಮಳಳ್ಳಿ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ಹುಣಸಿಹೊಳೆ, ಭೀಮಣ್ಣ ಕೊಂಗಂಡಿ, ಮಲ್ಲಿಕಾರ್ಜುನ ದೋರನಳ್ಳಿ, ಬುದ್ಧವಂತ ನಾಗರಾಳ, ತಿಪ್ಪಣ್ಣ, ಮಾನಪ್ಪ ಶೆಳ್ಳಗಿ, ಬಸವರಾಜ ಗೋನಾಲ, ಮಹೇಶ
ಯಾದಗಿರಿ ಇದ್ದರು.