Advertisement

ಪರಿಶಿಷ್ಟರ ಮೇಲೆ ದೌರ್ಜನ್ಯ; 7 ವರ್ಷದಲ್ಲಿ 488 ಪ್ರಕರಣ!

04:02 PM Oct 21, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆ ಹಾಗೂ ಅತ್ಯಾಚಾರ, ಜಾತಿನಿಂದನೆ ಯಂತಹ ಗಂಭೀರ ಪ್ರಕರಣಗಳೂ ಹೆಚ್ಚು ಹೆಚ್ಚು ದಾಖಲಾಗುತ್ತಿರುವುದು ಜಿಲ್ಲಾಡಳಿತ ಅಂಕಿ, ಅಂಶಗಳಿಂದ ದೃಢಪಟ್ಟಿದೆ.

Advertisement

ಹೌದು, ಕಳೆದ 7 ವರ್ಷದಲ್ಲಿ ಜಿಲ್ಲೆಯಲ್ಲಿ ಪರಿಶಿಷ್ಟರ ಮೇಲೆ ಬರೋಬ್ಬರಿ 488 ವಿವಿಧ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 21 ಕೊಲೆ ಪ್ರಕರಣಗಳು ದಾಖಲಾದರೆ, 17 ಅತ್ಯಾಚಾರ ಪ್ರಕರಣಗಳು ಹಾಗೂ 68 ಪೋಕ್ಸೋ ಪ್ರಕರಣಗಳು ದಾಖಲಾಗಿರುವುದು ತೀವ್ರ ಆತಂಕ, ಕಳವಳಕ್ಕೆ ಕಾರಣವಾಗಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗ ಹೆಚ್ಚಿನ ಪ್ರಮಾಣದಲ್ಲಿದೆ. ಆದರೆ, ಪರಿಶಿಷ್ಟರ ಮೇಲೆಯೇ ಜಾತಿಯ ಕಾರಣಕ್ಕೆ 488 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪ್ರತಿ ವರ್ಷ ಕೂಡ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಳ ಕಂಡಿರುವುದು ಎದ್ದು ಕಾಣುತ್ತಿದೆ. ಕಳೆದ 2018ರಿಂದ 2024ರ ಸೆಪ್ಪೆಂಬರ್‌ 9ರ ವರೆಗೂ ಜಿಲ್ಲೆಯಲ್ಲಿ 488 ದೌರ್ಜನ್ಯ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

ವಿಭಾಗವಾರು ಪ್ರಕರಣಗಳ ವಿವರ: ಇನ್ನೂ ಜಿಲ್ಲೆಯಲ್ಲಿ ಒಟ್ಟು 7 ವರ್ಷದಲ್ಲಿ ಪರಿಶಿಷ್ಟರ ಮೇಲೆ ದಾಖಲಾಗಿರುವ 488, ದೌರ್ಜನ್ಯ ಪ್ರಕರಣಗಳ ಪೈಕಿ ಜಿಲ್ಲೆಯ ಚಿಂತಾಮಣಿ ಉಪ ವಿಭಾಗದಲ್ಲಿ 261 ಹೆಚ್ಚು ದಾಖಲಾಗಿದ್ದು, ಆ ಪೈಕಿ 222 ದೌರ್ಜನ್ಯ ಪ್ರಕರಣಗಳು, 8 ಕೊಲೆ ಪ್ರಕರಣಗಳು, 7 ಅತ್ಯಾಚಾರ ಹಾಗೂ 24 ಪೋಕೊÕà ಪ್ರಕರಣಗಳು ದಾಖಲಾದರೆ, ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ ಒಟ್ಟು ದಾಖಲಾದ 227 ಪ್ರಕರಣಗಳ ಪೈಕಿ 160 ದೌರ್ಜನ್ಯ ಪ್ರಕರಣಗಳು, 13 ಕೊಲೆ, 10 ಅತ್ಯಾಚಾರ ಪ್ರಕರಣಗಳು ಹಾಗೂ 44 ಪೋಕ್ಸೋ ಪ್ರಕರಣಗಳು ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

304 ಪ್ರಕರಣಗಳಲ್ಲಿ ಪರಿಹಾರ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಾಂಗದ ಮೇಲೆ ಕಳೆದ 7 ವರ್ಷದಲ್ಲಿ 488 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 304 ಪ್ರಕರಣಗಳಲ್ಲಿ ಮಾತ್ರ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಕಲ್ಪಿಸಿದೆ. ಉಳಿದ ಪ್ರಕರಣಗಳಿಗೆ ಪರಿಹಾರ ಕಲ್ಪಿಸಿಲ್ಲ. 14 ಮಂದಿ ಕೊಲೆಯಾದ ವ್ಯಕ್ತಿಗಳ ಪೈಕಿ 4 ಕುಟುಂಬಗಳಿಗೆ ಸರ್ಕಾರ ಉದ್ಯೋಗದ ಆಸರೆ ಕಲ್ಪಿಸಿದೆ. 10 ಕುಟುಂಬಗಳಿಗೆ ಪಿಂಚಣಿ ಸೌಕರ್ಯ ಕಲ್ಪಿಸಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ದಲಿತರ ಮೇಲೆ ವಿವಿಧ ರೀತಿಯಲ್ಲಿ ದೌರ್ಜನ್ಯ, ಜಾತಿ ನಿಂದನೆ, ಕೊಲೆ, ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದಂತ ಗಂಭೀರ ಸ್ವರೂಪದ ದೌರ್ಜನ್ಯಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಜಿಲ್ಲೆಯ ಕಾನೂನು ಸುವ್ಯವಸ್ಥೆ ಬಗ್ಗೆ ಜಿಲ್ಲೆಯ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾಡಳಿತ ಒಮ್ಮೆ ಅವಲೋಕನ ಮಾಡಬೇಕಿದೆ.

ದ್ವೇಷ,ಅಸೂಯೆ ಮತ್ತಿತರ ಕಾರಣದಿಂದ ಕೊಲೆ,ಅತ್ಯಾಚಾರ: ಜಿಲ್ಲೆಯಲ್ಲಿ ಕಳೆದ 2018ರಿಂದ 2024ರ ಸೆಪ್ಪೆಂಬರ್‌ 9ರ ವರೆಗೂ ಒಟ್ಟು 21 ಮಂದಿ ದಲಿತರು ಕೊಲೆ ಆಗಿದ್ದಾರೆ. ಆ ಪೈಕಿ ಚಿಂತಾಮಣಿ ಉಪ ವಿಭಾಗದಲ್ಲಿ 8 ಮಂದಿ ದಲಿತರು ಕೊಲೆ ಆಗಿದ್ದರೆ, ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿ 13 ಮಂದಿ ದಲಿತರನ್ನು ಕೊಲೆ ಮಾಡಲಾಗಿದೆ. ದ್ವೇಷ, ಅಸೂಯೆ, ಜಮೀನು ವಿವಾದ ಮತ್ತಿತರ ಕಾರಣಗಳಿಗೆ ದಲಿತರ ಕೊಲೆಯಾಗಿದೆ. ಅಲ್ಲದೆ, 21 ಮಂದಿ ಮೇಲೆ ಅತ್ಯಾಚಾರ, 68 ಅಪ್ರಾಪ್ತರ ಮೇಲೆ ಅತ್ಯಾಚಾರ ವಿಶೇಷ ಪ್ರಕರಣಗಳು ಕಳೆದ 7 ವರ್ಷದಲ್ಲಿ ದಾಖಲಾಗಿದೆ.

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next