Advertisement
ಕೂಟದ “ಗುಗಾ ಕುರ್ಟನ್’ ಗುಂಪಿನ 2ನೇ ಪಂದ್ಯದಲ್ಲಿ ಜೊಕೋವಿಕ್ 6-4, 6-3 ನೇರ ಸೆಟ್‌ಗಳಿಂದ ಇಸ್ನರ್‌ಗೆ ಸೋಲಿನ ಆಘಾತ ನೀಡಿ ದರು. ಇತ್ತೀಚೆಗಷ್ಟೇ ನಂ. ವನ್ ಸ್ಥಾನಕ್ಕೇರಿರುವ ಜೊಕೋವಿಕ್ ಈ ಪಂದ್ಯದಲ್ಲಿ ಕೆಲವು ತಪ್ಪುಗಳನ್ನು ಮಾಡಿದರಾದರೂ ಇಸ್ನರ್ ವಿರುದ್ಧ ಸುಲಭವಾಗಿ ಜಯ ಸಾಧಿಸಿದರು. ಆರಂಭಿಕ ಸೆಟ್‌ನಲ್ಲಿ ಹಿಡಿತ ಸಾಧಿಸಿಕೊಂಡ ಜೊಕೋವಿಕ್‌ಗೆ ಹೆಚ್ಚಿನ ಪೈಪೋಟಿ ನೀಡುವಲ್ಲಿ ಇಸ್ನರ್ ಎಡವಿದರು. “ಈ ಪಂದ್ಯ ಉತ್ತಮವಾಗಿತ್ತು. ಎದುರಾಳಿಗೆ ಹೆಚ್ಚಿನ ಅವಕಾಶ ನೀಡದೆ ಸುಲಭವಾಗಿ ಜಯಿಸಿದೆ’ ಎಂದು ಜೊಕೋವಿಕ್ ತಿಳಿಸಿದ್ದಾರೆ.
“ಗುಗಾ ಕುರ್ಟನ್’ ಗುಂಪಿನ ಮೊದಲ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವರೇವ್ ಕ್ರೊವೇಶಿಯಾದ 7ನೇ ಶ್ರೇಯಾಂಕಿತ ಮರಿನ್ ಸಿಲಿಕ್ ಅವರನ್ನು 7-6 (7/5), 7-6 (7/1) ಸೆಟ್‌ಗಳಿಂದ ಸೋಲಿಸಿದ್ದಾರೆ. ಇದು ಸಿಲಿಕ್ ವಿರುದ್ಧ ಅವರ ಸತತ ಆರನೇ ಗೆಲುವು ಆಗಿದೆ. ಪಂದ್ಯದ ಆರಂಭದಲ್ಲಿ ಒತ್ತಡದಲ್ಲಿದ್ದರೂ ಉತ್ತಮ ಪ್ರದರ್ಶನ ನೀಡಿದ ಸಿಲಿಕ್‌ಗೆ ಪೈಪೋಟಿ ನೀಡಿದ ಜರ್ಮನ್ ಆಟಗಾರ ಜ್ವರೇವ್ ಪಂದ್ಯವನ್ನು ಟೈ ಬ್ರೇಕರ್‌ನಲ್ಲಿ ಗೆಲ್ಲಲು ಯಶಸ್ವಿಯಾದರು.