Advertisement

ಶಾರ್ಟ್‌ ಸರ್ಕೀಟ್‌ನಿಂದ ಎಟಿಎಂ ಭಸ್ಮ

11:15 PM May 07, 2019 | Team Udayavani |

ಚಿಕ್ಕೋಡಿ: ನೆತ್ತಿ ಸುಡುವ ಬಿಸಿಲಿನ ವೇಳೆಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದಾಗಿ ಎಸ್‌ಬಿಐ ಬ್ಯಾಂಕಿನ ಎಟಿಎಂ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ಹಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಬಸವ ಜಯಂತಿ ನಿಮಿತ್ತ ಬ್ಯಾಂಕು ರಜೆಯಿತ್ತು.

Advertisement

ಹೀಗಾಗಿ ಗ್ರಾಹಕರು ಒಡವೆ ಖರೀದಿಸಲು ಎಟಿಎಂ ಮೂಲಕ ಹಣ ತೆಗೆದುಕೊಳ್ಳುವಾಗ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದ ಈ ಅವಘಡ ಸಂಭವಿಸಿದೆ. ಬೆಂಕಿ ನಂ ದಿಸಲು ಸ್ಥಳೀಯರು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ, ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು. ಸದಲಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next