Advertisement
ಹೌದು. ದೇಶ, ರಾಜ್ಯ ರಾಜಕಾರಣದಲ್ಲಿ ತನ್ನದೇ ವೈಶಿಷ್ಟ್ಯ ಹೊಂದಿರುವ ಜಮಖಂಡಿಗೆ ಶ್ರೀಶೈಲಪ್ಪ ಅಥಣಿ ಎಂಬುವರು ಕೇವಲ ಒಂದು ದಿನದ ಶಾಸಕರಾಗಿದ್ದರು ಎಂಬುದೂ ವಿಶೇಷ.
ನಡೆಯುತ್ತಿದೆ.
Related Articles
ಹತ್ತಿರ ತುಳಸಿಗೇರಿ ಬಳಿ ನಡೆದ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಆನಂದ ನ್ಯಾಮಗೌಡ ದಾಖಲೆಯ ಗೆಲುವು ಸಾಧಿಸಿದ್ದರು. ಯುವ ಶಾಸಕರಾಗಿ ಆಯ್ಕೆಯಾದ ಆನಂದ ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದರೂ ಪಕ್ಷದ ಹಿರಿಯ-ಕಿರಿಯ ಪ್ರಮುಖರೊಂದಿಗೆ ಹಿಡಿತ ಸಾಧಿಸುವಲ್ಲಿ ಒಂದಷ್ಟು ಎಡವಿದ್ದಾರೆಂಬ ಮಾತಿದೆ.
Advertisement
ಈ ಬಾರಿ ಕುತೂಹಲ: ಪ್ರಸ್ತುತ ಚುನಾವಣೆಗೆ ಕಾಂಗ್ರೆಸ್ ನಿಂದ ಹಾಲಿ ಶಾಸಕ ಆನಂದ ನ್ಯಾಮಗೌಡ ಮೊದಲ ಪಟ್ಟಿಯಲ್ಲೇ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟಿಕೆಟ್ ಘೋಷಣೆ ಮಾಡಿದ್ದೇ ತಡ ಮತ್ತೂಬ್ಬ ಆಕಾಂಕ್ಷಿ ಸುಶೀಲಕುಮಾರ ಬೆಳಗಲಿ ಬಂಡಾಯ ಸ್ಪರ್ಧೆಗೆ ನಿರ್ಧರಿಸಿದ್ದಾರೆ. ಇದು ಕಾಂಗ್ರೆಸ್‌ನ ಭಿನ್ನಮತವಾದರೆ ಬಿಜೆಪಿಯೂ ಇದಕ್ಕೆ ಹೊರತಾಗಿಲ್ಲ.
ಬಿಜೆಪಿಯಲ್ಲಿ ಬರೋಬ್ಬರಿ 21 ಜನ ಆಕಾಂಕ್ಷಿಗಳಿದ್ದಾರೆ. ಅದರಲ್ಲೂ ಪ್ರಮುಖವಾಗಿ ಶ್ರೀಕಾಂತ ಕುಲಕರ್ಣಿ, ಉಮೇಶ ಮಹಾಬಲಶೆಟ್ಟಿ, ಜಗದೀಶ ಗುಡಗುಂಟಿ, ಬಸವರಾಜ ಸಿಂಧೂರ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಕೊನೆ ಗಳಿಗೆಯಲ್ಲಿ ಜಗದೀಶ ಗುಡಗುಂಟಿ ಮತ್ತು ಉಮೇಶ ಮಧ್ಯೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಎದುರಾಗಿತ್ತು. ಅಂತಿಮವಾಗಿ ಪಕ್ಷದ ವರಿಷ್ಠರು ಜಗದೀಶ ಗುಡಗುಂಟಿ ಅವರಿಗೆ ಮಣೆ ಹಾಕಿದ್ದಾರೆ.
ಶ್ರೀಕಾಂತ ಕುಲಕರ್ಣಿ ಅವರಿಗೆ ಈಗಾಗಲೇ 70 ವರ್ಷವಾಗಿದ್ದು, ಇದು ಕೊನೆಯ ಚುನಾವಣೆ. ಇದೊಂದು ಬಾರಿ ಅವಕಾಶ ಕೊಡಿ ಎಂದು ಅವರ ಬೆಂಬಲಿಗರು ಪಟ್ಟು ಹಿಡಿದ್ದಾರೆ. ಗುಜರಾತ್ ಮಾದರಿಯಾದರೆ ತಮಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ಡಾ| ಉಮೇಶ ಹೊಂದಿದ್ದರು. ಎಬಿವಿಪಿ ಮೂಲಕ ಸಂಘಟನೆಯಲ್ಲಿರುವುದು ಅವರ ಹೆಸರು ಕೇಳಿಬಂದಿತ್ತು. ಒಟ್ಟಾರೆ ಜಮಖಂಡಿ ಕ್ಷೇತ್ರದ ಚುನಾವಣೆ ಈ ಬಾರಿ ತೀವ್ರ ಕುತೂಹಲ ಕೆರಳಿಸುತ್ತಿದೆ. ಇಲ್ಲಿ ಗೆಲುವು-ಸೋಲಿನ ಲೆಕ್ಕಾಚಾರಕ್ಕಿಂತ ಟಿಕೆಟ್ ಪಡೆಯುವುದೇ ದೊಡ್ಡ ಗೆಲುವು ಎಂಬಂತಹ ವಾತಾವರಣ ಬಿಜೆಪಿಯಲ್ಲಿ ನಡೆಯುತ್ತಿದೆ.
ದೇಶದ ರಾಷ್ಟ್ರಪತಿಯಾಗಿದ್ದ ಸಜ್ಜನ ರಾಜಕಾರಣಿ ಜತಿ ಈ ಕ್ಷೇತ್ರವನ್ನು ಬಹುಪಾಲು ವರ್ಷ ಆಯ್ಕೆಯಾಗಿದ್ದ ಬಿ.ಡಿ.ಜತ್ತಿ ಒಬ್ಬ ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಂಡಿದ್ದರು. 1952ರಿಂದ 1967ರ ಸತತವಾಗಿ ಗೆದ್ದಿದ್ದ ಅವರು ಮುಂಬೈ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಉಪ ಸಭಾಪತಿ, ಸಭಾಪತಿ ಆಗಿದ್ದರು. ಬಳಿಕ 1971ರಲ್ಲಿ ಪುದುಚೇರಿ, ಓಡಿಸ್ಸಾ ರಾಜ್ಯಪಾಲರೂ ಆಗಿದ್ದರು. ಮುಂದೆ ದೇಶದ ಉಪ ರಾಷ್ಟ್ರಪತಿ ಆಗಿದ್ದ ವೇಳೆ ಹಂಗಾಮಿ ರಾಷ್ಟ್ರಪತಿ ಆಗುವ ಅವಕಾಶವೂ ಅವರಿಗೆ ಸಿಕ್ಕಿತ್ತು. ಇನ್ನೊಂದು ವಿಶೇಷವೆಂದರೆ, ಮುಂಬೈ ಸರ್ಕಾರ, ರಾಷ್ಟ್ರದ ರಾಜಧಾನಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಜತ್ತಿ ಅವರು, ತಮ್ಮ ಪುತ್ರನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು 1983ರಲ್ಲಿ ಇಂದಿರಾ ಗಾಂಧಿ ಎದುರು ಸರತಿ ಸಾಲಿನಲ್ಲಿ ನಿಂತಿದ್ದರು. ಇಂದಿರಾ ಗಾಂಧಿ ವಿಜಯಪುರಕ್ಕೆ ಬಂದಾಗ ಆಕಾಂಕ್ಷಿಗಳಿಂದ ಅರ್ಜಿ ಪಡೆಯುತ್ತಿದ್ದರು. ಆಗ ಜತ್ತಿ ಅವರೂ ತಮ್ಮ ಪುತ್ರನಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದರು.
ಆಗ ಜಮಖಂಡಿಗೆ ಬಿ.ಡಿ. ಜತ್ತಿ ಅವರ ಪುತ್ರ ದಾನಪ್ಪ(ಡಿ.ಬಿ. ಜತ್ತಿ)ಗೆ ಕಾಂಗ್ರೆಸ್ ಟಿಕೆಟ್ ಕೂಡ ಕೊಟ್ಟಿತ್ತು. ಆದರೆ ಆಗ ಜನತಾ ದಳದ ಜಿ.ಎಸ್. ಬಾಗಲಕೋಟ (ಮೂಲತಃ ಬಬಲೇಶ್ವರದವರು) ಇಲ್ಲಿಂದ ಗೆದ್ದರು. ಬಿ.ಡಿ. ಜತ್ತಿ ಅವರನ್ನು ಗೆಲ್ಲಿಸಿ ದೇಶದ ರಾಷ್ಟ್ರಪತಿವರೆಗೂ ಬೆಳೆಸಿದ್ದ ಈ ಕ್ಷೇತ್ರದ ಜನರು ಅವರ ಪುತ್ರನ ಕೈಹಿಡಿಯಲಿಲ್ಲ. ಹೀಗಾಗಿ ದಾನಪ್ಪ ಜತ್ತಿ ಅವರು ರಾಜಕೀಯದಿಂದ ದೂರವೇ ಉಳಿದರು.
ದಾಖಲೆಯ ಗೆಲುವುಜಮಖಂಡಿ ಕ್ಷೇತ್ರಕ್ಕೆ ಈ ವರೆಗೆ 14 ಸಾರ್ವತ್ರಿಕ ಚುನಾವಣೆ, 2 ಉಪ ಚುನಾವಣೆ ನಡೆದಿವೆ. ಅದರಲ್ಲಿ 12 ಬಾರಿ ಕಾಂಗ್ರೆಸ್ ಗೆದ್ದರೆ, ತಲಾ ಎರಡು ಬಾರಿ ಬಿಜೆಪಿ ಮತ್ತು ಜೆಎನ್‌ಪಿ ಪಕ್ಷ ಗೆದ್ದಿವೆ. ಇಲ್ಲಿ ನಡೆದ ಎರಡೂ ಉಪ ಚುನಾವಣೆಗಳು ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಒಂದೊಂದು ದಾಖಲೆಯೇ ಬರೆದಿವೆ. 1971ರ ಚುನಾವಣೆಯಲ್ಲಿ ಗೆದ್ದಿದ್ದ ಶ್ರೀಶೈಲಪ್ಪ ಅಥಣಿ ಒಂದೇ ದಿನ ಶಾಸಕರಾಗಿದ್ದರೆ, 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕ ಆನಂದ ನ್ಯಾಮಗೌಡ, ಬರೋಬ್ಬರಿ 39,480 ಮತಗಳ ಅಂತರದಿಂದ ಗೆದ್ದಿದ್ದರು. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಮತಗಳ ಅಂತರದಿಂದ ಗೆದ್ದ ಮೊದಲ ಶಾಸಕ ಎಂಬ ಖ್ಯಾತಿ ಆನಂದ ನ್ಯಾಮಗೌಡ ಪಡೆದಿದ್ದಾರೆ. ಕೇಂದ್ರ ಸಚಿವರಾಗಿ, ಶಾಸಕರಾದ್ರು !
ಬಹುತೇಕ ರಾಜಕೀಯ ವ್ಯಕ್ತಿಗಳು, ಗ್ರಾಪಂನಿಂದ ಹಿಡಿದು ದೆಹಲಿ ಮಟ್ಟದವರೆಗೂ ಬೆಳೆಯುವುದು ಸಂಪ್ರದಾಯ. ಆದರೆ ಇಲ್ಲಿನ ನಾಯಕರೊಬ್ಬರು ಒಮ್ಮೆಲೇ ಸಂಸದರಾಗಿ, ಕೇಂದ್ರದಲ್ಲಿ ಸಚಿವರೂ ಆಗಿದ್ದರೆಂಬುದು ವಿಶೇಷ. 1991ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ವತಃ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರೇ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಕೃಷ್ಣೆಗೆ ಚಿಕ್ಕಪಡಸಲಗಿಯಲ್ಲಿ ಬ್ಯಾರೇಜ್ ನಿರ್ಮಾಣದ ಮುಂಚೂಣಿಯಲ್ಲಿದ್ದ ಸಿದ್ದು ನ್ಯಾಮಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆಗ ರಾಮಕೃಷ್ಣ ಹೆಗಡೆ ಅವರು 2,55,645 ಮತ ಪಡೆದರೆ, ಕಾಂಗ್ರೆಸ್‌ನ ಸಿದ್ದು ನ್ಯಾಮಗೌಡ 2,76,849 ಮತ ಪಡೆದು, ಭಾರಿ ಅಂತರದ ಗೆಲುವು ಸಾಧಿಸಿದ್ದರು. ಮುಖ್ಯಮಂತ್ರಿಯನ್ನೇ ಸೋಲಿಸಿದ ಸಿದ್ದು ಎಂಬ ದೊಡ್ಡ ಸುದ್ದಿ ದೇಶಾದ್ಯಂತ ಹರಡಿತ್ತು. ಮುಂದೆ ಸಿದ್ದು ಅವರಿಗೆ ಕೇಂದ್ರದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಸ್ಥಾನವೂ ಸಿಕ್ಕಿತ್ತು. ಮೊದಲ ಬಾರಿ ಸಂಸದರು, ಕೇಂದ್ರ ಸಚಿವರೂ ಆಗಿದ್ದ ಸಿದ್ದು ನ್ಯಾಮಗೌಡ ಮುಂದೆ ವಿಧಾನ
ಪರಿಷತ್ ಸದಸ್ಯರಾಗಿ, ಜಮಖಂಡಿ ಕ್ಷೇತ್ರದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಅಥಣಿ ಏಕ್ ದಿನ್ ಕಾ ಎಂಎಲ್‌ಎ !
ನಾವೆಲ್ಲ ಏಕ್ ದಿನ್ ಕಾ ಸಿಎಂ ಸಿನೆಮಾ ನೋಡಿದ್ದೇವೆ. ಅದು ಚಿತ್ರದಲ್ಲಿ ಮಾತ್ರ. ಆದರೆ ಈ ಕ್ಷೇತ್ರಕ್ಕೊಬ್ಬರು ಏಕ್ ದಿನ್ ಕಾ ಎಂಎಎಲ್ ಆಗಿದ್ದರು ಅಂದರೆ ನಂಬಲೇಬೇಕು. ಅದು 1971ರ ಅವಧಿ. ಆಗ ಜಮಖಂಡಿ ಪ್ರತಿನಿಧಿಸುತ್ತಿದ್ದ ಬಿ.ಡಿ. ಜತ್ತಿ ಅವರು ಪುದುಚೇರಿಯ ಲೆಪ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡರು. ಆಗ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶ್ರೀಶೈಲಪ್ಪ ಮಲ್ಲಪ್ಪ ಅಥಣಿ (ಎಸ್.ಎಂ. ಅಥಣಿ), ಟಿ.ಪಿ. ಬಾಂಗಿ ವಿರುದ್ಧ ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಗೆದ್ದು ಬೆಂಗಳೂರಿಗೆ ತೆರಳಿ ಬೆಳಗ್ಗೆ 10.30ಕ್ಕೆ ಶಾಸಕರಾಗಿಯೂ ಪ್ರಮಾನ ವಚನ ಸ್ವೀಕರಿಸಿದ್ದರು. ಆದರೆ ಅದೇ ದಿನ ರಾತ್ರಿ ವೀರೇಂದ್ರ ಪಾಟೀಲರ ಸರ್ಕಾರ ಬಹುಮತ ಕಳೆದುಕೊಂಡಿತು. ಹೀಗಾಗಿ ಅವರು ಏಕ್ ದಿನ್ ಕಾ ಎಂಎಲ್‌ಎ ಎಂಬ ಖ್ಯಾತಿಗೊಳಗಾದರು. ವಿರೋಧಿಗೇ ಟಿಕೆಟ್ ಕೊಡಿಸಿದ್ದ ಶ್ರೀಶೈಲಪ್ಪ !
ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾದವರು ಟಿಕೆಟ್‌ಗಾಗಿ ಪೈಪೋಟಿ ನಡೆಸುವುದು ಇಂದಿನ ಪ್ರತಿಷ್ಠೆಯ ರಾಜಕಾರಣ. ಆದರೆ ಈ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಹಿರಿಯ ರಾಜಕಾರಣಿಯೊಬ್ಬರು ಮುಂದೆ ಎದುರಾದ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ವ್ಯಕ್ತಿಗೇ ಕಾಂಗ್ರೆಸ್ ಟಿಕೆಟ್ ಕೊಡಿಸಿ ದೊಡ್ಡವರೆನಿಸಿಕೊಂಡಿದ್ದರು. 1971ರ ಉಪ ಚುನಾವಣೆಯಲ್ಲಿ ಗೆದ್ದು ಒಂದೇ ದಿನ ಶಾಸಕರಾಗಿದ್ದ ಎಸ್.ಎಂ. ಅಥಣಿ ಅವರು, 1972ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇ ಇಲ್ಲ. ಕಾಂಗ್ರೆಸ್ ಟಿಕೆಟ್ ಕೊಡುವುದಾಗಿ ಹೇಳಿದ್ದರೂ ನಯವಾಗಿ ಬೇಡವೆಂದು ಉಪ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಟಿ.ಪಿ. ಬಾಂಗಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರು. ಇದು ಇಂದಿನ ರಾಜಕಾರಣಕ್ಕೆ ಬಹುದೊಡ್ಡ ಮಾದರಿ ಎಂದರೆ ತಪ್ಪಲ್ಲ ಯಾವ ಪಕ್ಷದಿಂದ ಯಾರು?
ಕಾಂಗ್ರೆಸ್: ಆನಂದ ನ್ಯಾಮಗೌಡ (ಟಿಕೆಟ್ ಘೋಷಣೆ) ಬಿಜೆಪಿ: ಶ್ರೀಕಾಂತ ಕುಲಕರ್ಣಿ, ಜಗದೀಶ ಗುಡಗುಂಟಿ (ಟಿಕೆಟ್ ಘೋಷಣೆ), ಬಸವರಾಜ ಬಿರಾದಾರ, ಬಸವರಾಜ ಸಿಂದೂರ, ಡಾ|ಉಮೇಶ ಮಹಾಬಳಶೆಟ್ಟಿ, ಡಾ|ರಂಗನಾಥ ಸೋನವಾಲಕರ. ಜೆಡಿಎಸ್: ಗುಡುಸಾಬ ಹೊನವಾಡ, ಕಲ್ಲಪ್ಪ
ಮಹಿಷವಾಡಗಿ, ರಡ್ಡಿ ಪಕ್ಷ: ಹಸನಅಲಿ ಉರ್ಪು ನದಿಮ್ ಜಾರೆ ಇತರೆ: ಸುಶೀಲಕುಮಾರ ಬೆಳಗಲಿ (ರೈತ ಸಂಘದ ಬೆಂಬಲ) ಶ್ರೀಶೈಲ ಕೆ. ಬಿರಾದಾರ