Advertisement
ನನ್ನ ಮಾಜಿ ಪತಿ ಫರ್ಹಾನ್ ಈಗಷ್ಟೇ 50ನೇ ಸಂವತ್ಸರಕ್ಕೆ ಕಾಲಿಟ್ಟ. ಫರ್ಹಾನ್‌ನ ಹೆಂಡತಿ ಲೈಲಾ ಆತನಿಗಾಗಿ ಅದ್ಭುತ ಪಾರ್ಟಿ ಆಯೋಜಿಸಿದ್ದರು. ಹೌದು, ಆ ಪಾರ್ಟಿಗೆ ನನ್ನನ್ನೂ ಆಹ್ವಾನಿಸಲಾಗಿತ್ತು. ಫರ್ಹಾನ್ ಹುಟ್ಟುಹಬ್ಬಕ್ಕೆ ನಾನು ಬಂದದ್ದನ್ನು ನೋಡಿ ಅಲ್ಲಿ ನೆರೆದಿದ್ದವರ ಮುಖದಲ್ಲಿ ಹೊಮ್ಮುತ್ತಿದ್ದ ಬಗೆಬಗೆಯ ಭಾವನೆಗಳನ್ನು ನೋಡಿ ಆಶ್ಚರ್ಯವಾಯಿತು. ಸತ್ಯವೇನೆಂದರೆ, ನಾನು ಅಂದು ನಿಜಕ್ಕೂ ಸಂತೋಷವಾಗಿದ್ದೆ, ಜೋರಾಗಿ ನಗುತ್ತಾ, ಅದ್ಭುತವಾಗಿ ಅಲ್ಲಿ ಸಮಯ ಕಳೆದೆ. “ಅಂಥ ಸನ್ನಿವೇಶದಲ್ಲಿ ನಾನು ಅದ್ಹೇಗೆ ಅಷ್ಟೊಂದು ಖುಷಿಯಾಗಿದ್ದೆ?’ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇತ್ತು.
Related Articles
Advertisement
ನಾನು ನನ್ನ ಲೇಖನಗಳಲ್ಲಿ “ದೊಡ್ಡ ವ್ಯಕ್ತಿಯಾಗಬೇಕು’ ಎನ್ನುವುದರ ಬಗ್ಗೆ ಅನೇಕ ಬಾರಿ ಬರೆದಿದ್ದೇನೆ. ದೊಡ್ಡ ವ್ಯಕ್ತಿಯಾಗುವುದು ಎಂದರೆ ಅವರಿಗಿಂತ ದೊಡ್ಡ ವ್ಯಕ್ತಿ ಎಂದಲ್ಲ. ನಮ್ಮ ಸಣ್ಣತನಗಳು, ಋಣಾತ್ಮಕ ಗುಣ ಮತ್ತು ಅಹಂಕಾರಗಳನ್ನು ಮೀರಿದ ದೊಡ್ಡ ವ್ಯಕ್ತಿಯಾಗಬೇಕು ಎಂದರ್ಥ. ನಾನು ಬೋಧಿಸುತ್ತೇನೆ, ಬೋಧಿಸಿದ್ದನ್ನು ಪಾಲಿಸುತ್ತೇನೆ. ನೀವೂ ಪಾಲಿಸಬಲ್ಲಿರಿ!
ಮದುವೆ ಎಂಬ ಹೊಸ ಸುಲಿಗೆ ದಂಧೆ!ನಾನು ಮೊದಲಿನಿಂದಲೂ ಮಹಿಳಾವಾದಿಯಾಗಿ ಗುರುತಿಸಿಕೊಂಡ ವಳು. ಮಹಿಳೆಯರ ಹಕ್ಕುಗಳನ್ನು ಬಲಿಷ್ಠಗೊಳಿಸುವಂಥ ಅನೇಕ ಚಳವಳಿ ಗಳಲ್ಲಿ, ಚರ್ಚೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಮಹಿಳೆಯರು ತಮ್ಮ ಸಹಾಯಕ್ಕೆ ಇರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತೀರಾ ಆಘಾತಗೊಳಿಸುವಂಥ ವಿಷಯ. ಕಳೆದ ಕೆಲವು ದಿನಗಳಲ್ಲಿ ಇಂಥ 7-8 ಘಟನೆಗಳು ನನ್ನ ಗಮನಕ್ಕೆ ಬಂದವು. ಆರ್ಥಿಕವಾಗಿ ಸ್ವತಂತ್ರವಾಗಿರುವ, ತನ್ನ ಹೆಸರಲ್ಲಿ ದೊಡ್ಡ ಸ್ವತ್ತನ್ನು ಹೊಂದಿರುವ ಮತ್ತು ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಇರುವ ಮಹಿಳೆಯೊಬ್ಬಳು ಶ್ರೀಮಂತನಂತೆ ಕಾಣಿಸುತ್ತಿದ್ದ ಪುರುಷನೊಂದಿಗೆ ಡೇಟ್ ಮಾಡಲಾರಂಭಿಸಿದಳು. ಕೆಲ ತಿಂಗಳ ನಂತರ “ಬೇಗ ಮದುವೆಯಾಗೋಣ’ ಎಂದು ಆತನ ಮೇಲೆ ಒತ್ತಡ ಹೇರಲಾರಂಭಿಸಿದಳು. ಗ್ರಹಗತಿ, ನಕ್ಷತ್ರ, ಒಳ್ಳೇ ಟೈಮ್ ಇದೆ ಎನ್ನುವುದು ಆಕೆಯ ನೆಪವಾಗಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಆಕೆ ಗಂಡನೊಂದಿಗೆ ಜಗಳವಾಡುವುದು, ರೇಗಾಡುವುದು ಮಾಡತೊಡಗಿದಳು. ಒಂದು ದಿನ ಜೋರು ಗದ್ದಲ ಮಾಡಿ ಮನೆಯಿಂದ ಹೊರನಡೆದುಬಿಟ್ಟಳು. ಅದಾದ ಕೆಲ ತಿಂಗಳಲ್ಲಿ ತನಗೆ ವಿಚ್ಛೇದನ ಬೇಕೆಂದು ಗಂಡನನ್ನು ಪೀಡಿಸಲಾರಂಭಿಸಿದಳು. ಆಕೆ ತನ್ನ ವಕೀಲರ ಮಾತು ಕೇಳಿ ಹಾಗೆ ಮಾಡಿದಳ್ಳೋ ಅಥವಾ ಕುಟುಂಬದ ಮಾತು ಕೇಳಿಯೋ ತಿಳಿಯದು, ಒಟ್ಟಲ್ಲಿ ತವರು ಮನೆಯಿಂದ ಗಂಡನ ಮನೆಗೆ ಹೋಗುವುದು ಅವನನ್ನು ಪೀಡಿಸುವುದು, ವಾಪಸ್ ತವರು ಮನೆಗೆ ಬರುವುದು ರೊಟೀನ್ ಆಯಿತು. ಈ ತಾಪತ್ರಯದಿಂದ ಮುಕ್ತಿ ಬೇಕೆಂದರೆ “ದೊಡ್ಡ ಮೊತ್ತ ಕೊಡು’ ಎಂದು ಪತಿಯನ್ನು ಪೀಡಿಸಲಾರಂಭಿಸಿದಳು. ಆದರೆ ಆತನ ಬಳಿ ಹೇಳಿಕೊಳ್ಳುವಂಥ ಆಸ್ತಿಯಿರಲಿಲ್ಲ, ಸ್ವಂತ ಬ್ಯುಸಿನೆಸ್ ಇತ್ತಾದರೂ ಮೈತುಂಬಾ ಸಾಲವಿತ್ತು. ಆಗ ಈ ಮಹಿಳೆ “ನಿನ್ನ ಅಪ್ಪ-ಅಮ್ಮನಿಂದ ಹಣ ಪಡೆದು ನನಗೆ ಕೊಡು. ನಿನಗೆ ತಾಪತ್ರಯ ತಪ್ಪುತ್ತದೆ’ ಎಂದು ಡಿಮ್ಯಾಂಡ್ ಮಾಡಲಾರಂಭಿಸಿದಳು. ಪತಿ ಇದನ್ನು ವಿರೋಧಿಸಿದ ತಕ್ಷಣ, ಆತನ ಅಪ್ಪ-ಅಮ್ಮನ ಮೇಲೆ ಮಹಿಳಾ ಸುರಕ್ಷಾ ಕಾನೂನಿನಡಿಯಲ್ಲಿ ವಿವಿಧ ಕೇಸು ಜಡಿಯುವುದಾಗಿ ಹೆದರಿಸುತ್ತಿದ್ದಳು. ಇದು ನನಗೆ ನಿಜಕ್ಕೂ ಭಯ, ಜುಗುಪ್ಸೆ ಹುಟ್ಟಿಸುತ್ತದೆ. ಇದು ಲೀಗಲ್ ಸುಲಿಗೆಯಲ್ಲದೇ ಮತ್ತೇನೂ ಅಲ್ಲ! ಮದುವೆಗೂ ಮುನ್ನವೇ ಆಕೆ ಹಣ ಗಳಿಸುತ್ತಿದ್ದಳು. ಮದುವೆಯ ಸಮಯದಲ್ಲೂ ಕೆಲಸ ಮಾಡಿ ಹಣ ಗಳಿಸುತ್ತಿದ್ದಳು. ಆದರೆ ಈಗ ಅವಳು, “ನನಗೆ ಹಣ ಕೊಡು. ಇಲ್ಲದಿದ್ದರೆ ನಿನ್ನ ವಿರುದ್ಧ ಎಲ್ಲಾ ಕಾನೂನನ್ನು ಬಳಸುತ್ತೇನೆ’ ಎನ್ನುತ್ತಾಳೆ. ಕಳೆದ ಎರಡು ವರ್ಷಗಳಲ್ಲಿ ಹೆಣ್ಣುಮಕ್ಕಳು ಸೆಕ್ಷನ್ 498 ಎ ಅಡಿಯಲ್ಲಿ 31,000 ನಕಲಿ ಕೇಸ್‌ಗಳನ್ನು ದಾಖಲಿಸಿದ್ದಾರೆ ಎನ್ನುವುದನ್ನು ಸಂಶೋಧನೆಗಳು ಬಹಿರಂಗಪಡಿಸಿವೆ. ಮಹಿಳಾ ಪರ ಕಾನೂನನ್ನು ಸ್ವಾರ್ಥಿ ಮತ್ತು ಹಗೆತುಂಬಿದ ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಸುಪ್ರೀಂ ಕೋರ್ಟ್ ಕೂಡ ಹಲವು ತೀರ್ಪುಗಳನ್ನು ನೀಡಬೇಕಾಯಿತು. ತತಲವಾಗಿ ನಿಜಕ್ಕೂ ಅನ್ಯಾಯಕ್ಕೊಳಗಾಗುತ್ತಿರುವ ಮಹಿಳೆಯರಿಗೆ ದೊಡ್ಡ ಹೊಡೆತ ಬಿದ್ದಿದೆ. ವಿಚ್ಛೇದನದ ಮೇಲೆ ಸಹಿ ಮಾಡಿದಾಕ್ಷಣ ಒಬ್ಬ ವ್ಯಕ್ತಿ ಮತ್ತು ಆತನ ಕುಟುಂಬ ಹಣ ಕಕ್ಕಬೇಕೇನು? ನಾವು ಸ್ತ್ರೀ ಧನದ ಬಗ್ಗೆ ಮಾತನಾಡುತ್ತೇವೆ. ಹಾಗಿದ್ದರೆ ಪುರುಷ ಧನದ ಕಥೆಯೇನು? ಸುಳ್ಳು ಪ್ರಕರಣಗಳನ್ನು ದಾಖಲಿಸುವ ಹೆಣ್ಣುಮಕ್ಕಳಿಗೆ ಯಾವ ಶಿಕ್ಷೆ ನೀಡಬೇಕು? ಗಂಡು ಮತ್ತು ಆತನ ಮನೆಯವರನ್ನು ರಕ್ಷಿಸಲು ಯಾವ ರೀತಿಯ ಹೊಸ ಕಾನೂನುಗಳನ್ನು ರಚಿಸಬೇಕು? ಮದುವೆಯೆನ್ನುವುದನ್ನು “ಸುಲಿಗೆ ದಂಧೆ’ ಆಗದಂತೆ ತಡೆಯಲು ಏನು ಮಾಡಬೇಕು? ಆಸೆಬುರುಕ ಹೆಣ್ಣುಮಕ್ಕಳಿಂದಾಗಿ ನಿಜ ಸಂತ್ರಸ್ತರಿಗೆ, ಮಹಿಳಾಪರ ಹೋರಾಟಕ್ಕೆ ಆಗುತ್ತಿರುವ ಹಾನಿಯನ್ನು ತಪ್ಪಿಸೋದು ಹೇಗೆ? ಈ ಪ್ರಶ್ನೆಗಳಿಗೆ ನಿಮ್ಮ ಬಳಿ ಉತ್ತರ ಇದೆಯೇ? ಪೂಜಾ ಬೇಡಿ ಬಾಲಿವುಡ್ ನಟಿ
ದಿ. ಪ್ರೊತಿಮಾ ಬೇಡಿ ಪುತ್ರಿ