Advertisement

ಬ್ಯಾಂಕ್‌ಗಳಿಗೆ ಐತಿಹಾಸಿಕ 59,000 ಕೋಟಿ ರೂ. ಲಾಭ

06:57 PM Nov 08, 2022 | Team Udayavani |

ಮುಂಬೈ: ದೇಶದ ಬ್ಯಾಂಕುಗಳೆಲ್ಲ ಅತ್ಯಂತ ಸಂತೋಷದಲ್ಲಿವೆ. ಕಾರಣ ಈ ವರ್ಷದ ಸೆಪ್ಟೆಂಬರ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ  ಬ್ಯಾಂಕುಗಳು 59,000 ಕೋಟಿ ರೂ. ನಿವ್ವಳ ಲಾಭ ಗಳಿಸಿರುವುದು!

Advertisement

ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ.57 ಹೆಚ್ಚಳವಾಗಿದೆ. ಆಗ ಬ್ಯಾಂಕುಗಳಿಗೆ 37,567 ಕೋಟಿ ರೂ. ಲಾಭ ಲಭಿಸಿತ್ತು. ಇತಿಹಾಸದಲ್ಲೇ ಯಾವುದೇ ತ್ತೈಮಾಸಿಕದಲ್ಲಿ ಈ ಪರಿಯ ಲಾಭ ಸಿಕ್ಕಿರಲಿಲ್ಲ, ಹೀಗಾಗಿ ಇದೊಂದು ದೊಡ್ಡ ಸಾಧನೆಯಾಗಿ ದಾಖಲಾಗಿದೆ.

ಪ್ರಮುಖ ಬ್ಯಾಂಕುಗಳು ಕಳೆದ ಶನಿವಾರವೇ ತಮ್ಮ ಆದಾಯ-ಲಾಭವನ್ನು ಘೋಷಿಸಿವೆ. ಹಾಗಾಗಿ ಸೋಮವಾರ ಬ್ಯಾಂಕ್‌ಗಳ ನಿಫ್ಟಿ ಸೂಚ್ಯಂಕ 41,779ಕ್ಕೆ ಏರಿತ್ತು. ಇದೊಂದು ದಾಖಲೆಯೂ ಹೌದು.

ಖಾಸಗಿ ಬ್ಯಾಂಕುಗಳಿಗೆ 33,165 ಕೋಟಿ ರೂ. ನಿವ್ವಳ ಲಾಭ ದೊರೆತಿದೆ. ಕಳೆದ ವಿತ್ತೀಯವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ.67 (19,868 ಕೋ.ರೂ.) ಹೆಚ್ಚಳವಾಗಿದೆ. ಇನ್ನು ಸರ್ಕಾರಿ ವಲಯದ ಬ್ಯಾಂಕುಗಳು 25,685 ಕೋ.ರೂ. ಲಾಭ ಗಳಿಸಿವೆ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಇಲ್ಲಿ ಶೇ.50 (17,123 ಕೋ.ರೂ.) ಲಾಭ ಏರಿದೆ. ಸರ್ಕಾರಿ ಬ್ಯಾಂಕ್‌ಗಳ ಪೈಕಿ ಎಸ್‌ಬಿಐ (13,256 ಕೋ.ರೂ.), ಖಾಸಗಿ ಬ್ಯಾಂಕ್‌ಗಳ ಪೈಕಿ ಎಚ್‌ಡಿಎಫ್ಸಿ (10,605 ಕೋ.ರೂ.) ಗರಿಷ್ಠ ಲಾಭ ಗಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next