Advertisement

ಕಣಿವೆಗೆ ಉರುಳಿದ ಬಸ್‌;16 ಅಮರನಾಥ ಯಾತ್ರಿಕರ ದುರ್ಮರಣ

02:43 PM Jul 16, 2017 | Team Udayavani |

ಜಮ್ಮು: ಅಮರನಾಥ ಯಾತ್ರಿಕರು ತೆರಳುತ್ತಿದ್ದ ಖಾಸಗಿ ಬಸ್ಸೊಂದು ಕಣಿವೆಗೆ ಉರುಳಿ 16 ಮಂದಿ ಯಾತ್ರಾರ್ಥಿಗಳು ದಾರುಣವಾಗಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡ ಭೀಕರ ದುರ್ಘ‌ಟನೆ ಭಾನುವಾರ ನಡೆದಿದೆ. 

Advertisement

ಜಮ್ಮು ಮತ್ತು ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯ ಬನಿಹಾಲ್‌ ಬಳಿ ಭೀಕರ ಅವಘಡ ನಡೆದಿದೆ. ಟಯರ್‌ ಸ್ಫೋಟಗೊಂಡು ಬಸ್‌ ಉರುಳಿದೆ ಎಂದು ಹೇಳಲಾಗಿದೆ. 16 ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, 30 ಗಂಭೀರವಾಗಿ ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ. 

ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು,ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ  ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next