Advertisement

ಇರಾಕ್ ನಲ್ಲಿ ಆಕ್ಸಿಜನ್​ ಟ್ಯಾಂಕ್​ ಸ್ಫೋಟ : 27 ಮಂದಿ ಸೋಂಕಿತರು ಬೆಂಕಿಗೆ ಬಲಿ          

02:22 PM Apr 25, 2021 | Team Udayavani |

ಇರಾಕ್ : ಕೋವಿಡ್ ಸೋಂಕು ಇಡೀ ಪ್ರಪಂಚವನ್ನೇ ಆತಂಕಗೊಳಪಡಿಸಿದ್ದು,  ವಿಶ್ವ ಕೋವಿಡ್ ಸೋಂಕಿನ ಎರಡನೇ ಅಲೆ ಕಾರಣದಿಂದಾಗಿ ಹೈರಾಣಾಗಿದೆ.

Advertisement

ಇರಾಕ್ ​​ನ ರಾಜಧಾನಿ ಬಾಗ್ದಾದ್​​ ದ ಕೊವಿಡ್​ ಆಸ್ಪತ್ರೆಯೊಂದರಲ್ಲಿ ನಡೆದ ಭೀಕರ ಅಗ್ನಿದುರಂತದಲ್ಲಿ 27 ಸೋಂಕಿತರು ಸಾವನ್ನಪ್ಪಿದ್ದು, 46 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ : ಬಿಎಸ್ ವೈ ಅವರೇ ಈ ಕೆಲಸಗಳಿಗೆ ಅಡ್ಡಗಾಲು ಹಾಕಿದರೆ ಬಡವರ ಶಾಪ ತಟ್ಟದೆ ಇರದು: ಸಿದ್ದರಾಮಯ್ಯ

ಬಾಗ್ದಾದ್ ​ನ ಆಗ್ನೇಯದಲ್ಲಿರುವ ದಿಯಾಲಾ ಬ್ರಿಜ್​ ಏರಿಯಾದಲ್ಲಿರುವ ಐ ಬಿ ಎನ್​​ ಖತೀಬ್ ಆಸ್ಪತ್ರೆಯಲ್ಲಿ ಆಕ್ಸಿಜನ್​ ಟ್ಯಾಂಕ್​ ಸ್ಫೋಟಗೊಂಡ ಪರಿಣಾಮ ಬಾರಿ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳಾಗಿವೆ.

ಇನ್ನು, ಗಾಯಗೊಂಡವರನ್ನು ಸ್ಥಳೀಯ ಬೇರೆ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Advertisement

ಇರಾಕ್ ​​ನ ರಾಜಧಾನಿ ಬಾಗ್ದಾದ್ ​​ದ ಕೊವಿಡ್​ ಆಸ್ಪತ್ರೆಯೊಂದರಲ್ಲಿ ನಡೆದ ಭೀಕರ ಅಗ್ನಿದುರಂತದಲ್ಲಿ 27 ರೋಗಿಗಳು ಸಾವನ್ನಪ್ಪಿದ್ದು, 46 ಮಂದಿ ಘಟನೆಯ ಕಾರಣದಿಂದಾಗಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿದ್ದು, ಬಾಗ್ದಾದ್ ​ನ ಆಗ್ನೇಯದಲ್ಲಿರುವ ದಿಯಾಲಾ ಬ್ರಿಜ್​ ಏರಿಯಾದಲ್ಲಿರುವ ಐಬಿಎನ್​​ ಖತೀಬ್ ಆಸ್ಪತ್ರೆಯಲ್ಲಿ ಆಕ್ಸಿಜನ್​ ಟ್ಯಾಂಕ್​ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ : ಮೂಗಿಗೆ ನಿಂಬೆ ರಸ ಹಾಕಿದರೆ ಉಸಿರಾಟದ ಸಮಸ್ಯೆ ಪರಿಹಾರವಾಗುತ್ತದೆ: ವಿಜಯ ಸಂಕೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next