Advertisement

ಆ್ಯಸ್ಟ್ರೋಸ್ಯಾಟ್‌ ಕಣ್ಣಲ್ಲಿ ಸೆರೆಯಾದ ತಾರಾಪುಂಜಗಳ ಸಮೂಹ

09:40 AM Jul 04, 2018 | |

ಇಸ್ರೋದ ಬಾಹ್ಯಾಕಾಶ ಪರಿವೀಕ್ಷಣಾ ಉಪಗ್ರಹ “ಆ್ಯಸ್ಟ್ರೋಸ್ಯಾಟ್‌’ ಭೂಮಿಯಿಂದ 80 ಕೋಟಿ ಜ್ಯೋತಿ ರ್ವರ್ಷಗಳಷ್ಟು ದೂರವಿರುವ ವಿಶೇಷವಾದ ತಾರಾ ಪುಂಜಗಳ ಸಮೂಹ(ಗ್ಯಾಲಕ್ಸಿ ಕ್ಲಸ್ಟರ್‌)ದ ಚಿತ್ರವನ್ನು ಸೆರೆಹಿಡಿದಿದೆ. ಹಿಂದೆಲ್ಲ ವೈಯಕ್ತಿಕ ನಕ್ಷತ್ರ ಪುಂಜಗಳು, ಎರಡು ಪುಂಜಗಳು ಒಂದಕ್ಕೊಂದು ವಿಲೀನಗೊಳ್ಳು ವಂಥ ಚಿತ್ರಗಳನ್ನಷ್ಟೇ ಇದು ಸೆರೆಹಿಡಿದಿತ್ತು. ಹೀಗಾಗಿ, ಹೊಸ ಚಿತ್ರವು ವಿಜ್ಞಾನಿಗಳಿಗೆ ಹೊಸ ಅಧ್ಯಯನ ಅವಕಾಶ ಕಲ್ಪಿಸಿದೆ.

Advertisement

ಏನಿದು ಗ್ಯಾಲಕ್ಸಿ ಕ್ಲಸ್ಟರ್‌?
ಒಂದು ನಕ್ಷತ್ರಪುಂಜದಲ್ಲಿ ಸಾವಿರಾರು ನಕ್ಷತ್ರಗಳಿರುತ್ತವೆ. ಇಂಥ ಹಲವು ನಕ್ಷತ್ರಪುಂಜಗಳು ಒಂದಕ್ಕೊಂದು ಸೇರಿ ಗ್ಯಾಲಕ್ಸಿಗಳ ಸಮೂಹ ನಿರ್ಮಾಣ ವಾಗುತ್ತದೆ. ಈ ರೀತಿ ನಿರ್ಮಾಣವಾದ ಸಮೂಹಗಳ ಪೈಕಿ ಮೂರು ಗುಂಪು ಒಂದಕ್ಕೊಂದು ವಿಲೀನಗೊಂಡು ಗ್ಯಾಲಕ್ಸಿ ಕ್ಲಸ್ಟರ್‌ ಸೃಷ್ಟಿಯಾಗಿದೆ. ಇದು ಭವಿಷ್ಯದಲ್ಲಿ ಒಂದು ಬೃಹತ್‌ ಕ್ಲಸ್ಟರ್‌ ಆಗಿ ರೂಪುಗೊಳ್ಳುತ್ತದೆ. 

ಅಧ್ಯಯನಕ್ಕೆ ನೆರವು
ಆ್ಯಸ್ಟ್ರೋಸ್ಯಾಟ್‌ನಲ್ಲಿರುವ ಅಲ್ಟ್ರಾ ವಯಲೆಟ್‌ ಇಮೇಜಿಂಗ್‌ ಟೆಲಿಸ್ಕೋಪ್‌ ಮೂಲಕ ನಕ್ಷತ್ರಪುಂಜಗಳ ಸಮೂಹದ ಚಿತ್ರ ಸೆರೆಹಿಡಿಯಲಾಗಿದೆ. ವಿಜ್ಞಾನಿಗಳು ಅಬೆಲ್‌É 2256ನಲ್ಲಿ ವಿಲೀನಗೊಂಡಿರುವ ಪ್ರತಿಯೊಂದು ತಾರಾಪುಂಜದ ಸ್ವರೂಪವನ್ನು ಅಧ್ಯಯನ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಈ ತಾರಾಪುಂಜಗಳು ಹೇಗೆ ಉಭಯಪೀನ(ಎರಡೂ ಕಡೆಯೂ ಉಬ್ಬಿರುವಂಥ) ಮತ್ತು ಅಂಡಾಕಾರದ ಗ್ಯಾಲಕ್ಸಿಗಳಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಅರಿತುಕೊಳ್ಳುವ ಉದ್ದೇಶವೂ ವಿಜ್ಞಾನಿಗಳಿಗಿದೆ.

2256 ಅಬೆಲ್ಲ್‌  ತಾರಾಪುಂಜಗಳ ಸಮೂಹದ ಹೆಸರು

3- ಒಂದು ಗ್ಯಾಲಕ್ಸಿ ಕ್ಲಸ್ಟರ್‌ನಲ್ಲಿರುವ ನಕ್ಷತ್ರಪುಂಜಗಳ ಸಮೂಹಗಳ ಸಂಖ್ಯೆ

Advertisement

500ಕ್ಕೂ ಹೆಚ್ಚು ವಿಲೀನಗೊಂಡಿರುವ ತಾರಾಪುಂಜಗಳ ಸಮೂಹದಲ್ಲಿರುವ ಗ್ಯಾಲಕ್ಸಿಗಳ ಸಂಖ್ಯೆ

100 ಪಟ್ಟು ಹೆಚ್ಚು- ನಮ್ಮ ನಕ್ಷತ್ರಪುಂಜಕ್ಕೆ ಹೋಲಿಸಿದರೆ ಈ ಕ್ಲಸ್ಟರ್‌ನ ಗಾತ್ರ

Advertisement

Udayavani is now on Telegram. Click here to join our channel and stay updated with the latest news.

Next