Advertisement
ಮುಂಬರುವ ವಾರಗಳಲ್ಲಿ 100 ಲಕ್ಷ ಡೋಸ್‌ಗಳ ರಫ್ತು ನಡೆಯಲಿದ್ದು, ಇನ್ನುಳಿದವುಗಳನ್ನು ಜೂನ್‌ಗೆ ಮುನ್ನ ರಫ್ತು ಮಾಡಲಾಗುತ್ತದೆ ಎಂದು ಶ್ವೇತಭವನ ಸೋಮವಾರ ಹೇಳಿತ್ತು. ಆರಂಭಿಕ ವಿಳಂಬ ನೀತಿಯ ಬಳಿಕ ಬೈಡೆನ್ ಸರಕಾರ ಭಾರತಕ್ಕೂ ಲಸಿಕೆ ಕಳುಹಿಸಿಕೊಡಲು ತೀರ್ಮಾನಿಸಿದೆ.
ಕೋವಿಡ್ ಸಂಬಂಧಿ ವಸ್ತುಗಳು, ಔಷಧ, ಸಲಕರಣೆ ಇತ್ಯಾದಿಗಳ ಆಮದು ವಿಚಾರವಾದ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿಯೊಂದನ್ನು ಆರಂಭಿಸಿರುವುದಾಗಿ ಸೆಂಟ್ರಲ್ ಬೋರ್ಡ್ ಆಫ್ ಇನ್‌ಡೈರೆಕ್ಟ್ ಟ್ಯಾಕ್ಸಸ್ (ಸಿಬಿಐಟಿ) ಮಂಗಳವಾರ ಪ್ರಕಟಿಸಿದೆ. ಇವುಗಳ ಆಮದನ್ನು ತ್ವರಿತಗೊಳಿಸುವುದಕ್ಕಾಗಿ ಈ ಕ್ರಮವನ್ನು ಅದು ಕೈಗೊಂಡಿದೆ. ಸುಂಕ ವಿನಾಯಿತಿ ಲಭ್ಯತೆ, ಕ್ಲಿಯರೆನ್ಸ್ ವಿಧಿವಿಧಾನಗಳು, ನೋಂದಣಿ ಕ್ರಮ ಇತ್ಯಾದಿಗಳ ಬಗ್ಗೆ ವಿವಿಧ ಸಚಿವಾಲಯಗಳಿಂದ ಈಗಾಗಲೇ ಕರೆಗಳು ಬರಲಾರಂಭಿಸಿವೆ ಎಂದು ಸಿಬಿಐಟಿ ಹೇಳಿದೆ.