ಮುಂಬಯಿ, ಜು. 13: ಬಿಲ್ಲವರ ಅಸೋಸಿಯೇಶನ್ ಕೊರೊನಾ ಮಹಾಮಾರಿಯಿಂದ ಅತೀವ ತೊಂದರೆಗೊಳಗಾಗಿದ್ದ ಕುಟುಂಬಗಳಿಗೆ ಆರಂಭದಿಂದಲೇ ವಿವಿಧ ರೂಪದಲ್ಲಿ ಸಹಕರಿಸಿದೆ. ಲಸಿಕೆ ಅಭಿಯಾನ, ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ನಡೆಸಿ ಇದೀಗ ಪ್ರಸ್ತುತ ದಿನಬಳಕೆಯ ವಸ್ತುಗಳನ್ನು ಆರ್ಥಿಕವಾಗಿ ತೊಂದರೆಯಲ್ಲಿರುವ ಕುಟುಂಬಗಳನ್ನು ಗುರುತಿಸಿ ಅಸೋಸಿಯೇಶನ್‌ನ ಎಲ್ಲ ಕಚೇರಿಗಳಲ್ಲೂ ನೀಡಲು ಆರಂಭಿಸಿದೆ. ಈ ಅಭಿಯಾನಕ್ಕೆ ಸಮುದಾಯದ ಉದ್ಯಮಿಗಳ, ದಾನಿಗಳ, ಸ್ಥಳೀಯ ಕಛೇರಿಗಳ ಹಾಗೂ ಭಾರತ್ ಬ್ಯಾಂಕ್ ನೌಕರ ವೃಂದದ ಅಪಾರ ಸಹಕಾರ ದೊರಕಿದೆ.
ಮುಂದಿನ ದಿನಗಳಲ್ಲಿ ಸಂಸ್ಥೆಯ ಮುಖಾಂತರ ಹಲವಾರು ಸಮಾಜ ಪರ ಸೇವೆಗಳಿಗೆ ಅಡಿಪಾಯ ಹಾಕಲು ಯೋಜನೆ ತಯಾರಾಗುತ್ತಿದೆ. ದಾನಿಗಳು ಈ ಎಲ್ಲ ಯೋಜನೆಗಳಿಗೆ ಸಹಕರಿಸಬೇಕು ಎಂದು ಬಿಲ್ಲವರ ಅಸೋಸಿಯೇಶನಿನ ಅಧ್ಯಕ್ಷ ಹರೀಶ್. ಅಮೀನ್ ಹೇಳಿದರು.
ಅವರು ಜು. 11ರಂದು ಮೀರಾರೋಡ್ ಬಿಲ್ಲವರ ಸ್ಥಳೀಯ ಕಛೇರಿಯಲ್ಲಿ ಗುರು ಪ್ರಸಾದ ಆಹಾರದ ಕಿಟ್ ವಿತರಿಸಿ ಮಾತನಾಡಿ, ಸಮಾಜ ಬಾಂಧವರು ತೊಂದರೆಯಲ್ಲಿದ್ದರೆ ಯಾವುದೇ ಮುಜುಗರ ಮಾಡದೆ ತಕ್ಷಣ ಸ್ಥಳೀಯ ಕಛೇರಿ ಅಥವಾ ಕೇಂದ್ರ ಕಛೇರಿಯನ್ನು ಸಂಪರ್ಕಿಸಿ ಸಹಾಯ ಪಡಕೊಳ್ಳಬೇಕು ಎಂದರು.
ಅಸೋಸಿಯೇಶನ್‌ನ ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ ಅವರು ಮಾತನಾಡಿ, ದಿ| ಜಯ ಸಿ. ಸುವರ್ಣರ ಆಶಯದಂತೆ ಸಮಾಜದ ಸ್ಥಿತಿಗತಿಯನ್ನು ಅರಗಿಸಿಕೊಂಡಂತ ಯುವ ಅದ್ಯಕ್ಷರು ಸಮಾಜಕ್ಕೆ ದೊರಕಿದ್ದಾರೆ. ಗುರುಗಳ ಆಶೀರ್ವಾದದಿಂದ ಹರೀಶ್ ಜಿ. ಅಮೀನ್ ನೇತೃತ್ವದಲ್ಲಿ ಉತ್ತಮ ಸಮಾಜಪರ ಸೇವೆಗಳ ಅಡಿಪಾಯ ಹಾಕಲಾಗಿದೆ. ಇದಕ್ಕೆ ಸರ್ವ ಸಮಾಜ ಬಾಂಧವರ ಸಹಕಾರ ದೊರಕುತ್ತಿದೆ ಎಂದು ಹೇಳಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮೀರಾರೋಡ್ ಭಾರತ್ ಬ್ಯಾಂಕಿನ ಸಹ ಪ್ರಬಂಧಕಿ ಉಮಾ ಬಿ. ಬಂಗೇರ, ಸಮಾಜ ಸೇವಕ ಶೇಖರ್ ಜಿ. ಪೂಜಾರಿ ಹಾಗೂ ಸ್ಥಳೀಯ ಕಚೇರಿಯ ಉಪಾಧ್ಯಕ್ಷ ಸುಭಾಷ್ ಕರ್ಕೇರ ಅವರು ಸಂಧಬೋìಚಿತವಾಗಿ ಮಾತನಾಡಿ ಶುಭಹಾರೈಸಿದರು. ಆರಂಭದಲ್ಲಿ ಭುವಾಜಿ ಶ್ಯಾಮ್ ಅಮೀನ್ ಅವರಿಂದ ಗುರು ಪ್ರಾರ್ಥನೆ ಹಾಗೂ ಆರತಿ ನಡೆಯಿತು. ನೂತನ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರನ್ನು ಪದಾಧಿಕಾರಿಗಳು ಶಾಲು ಹೊದಿಸಿ ಹೂಗುತ್ಛ ನೀಡಿ ಅಭಿನಂದಿಸಿದರು.
ಆಗಮಿಸಿದ್ದ ಅತಿಥಿಗಳು, ದಾನಿಗಳನ್ನು ಹೂಗುಚ್ಛ ನೀಡಿ ಸತ್ಕರಿಸಲಾಯಿತು. ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ಎನ್. ಪಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಗುರುಪ್ರಸಾದ ಕಿಟ್ ಪಡೆದುಕೊಂಡವರ ಯಾದಿಯನ್ನು ಸ್ಥಳೀಯ ಕೋಶಾಧಿಕಾರಿ ಎಚ್. ಎಮ್ ಪೂಜಾರಿ ಓದಿದರು. ಅಧ್ಯಕ್ಷರು ಹಾಗೂ ಅತಿಥಿಗಳು ಆಹಾರ ಕಿಟ್ ವಿತರಿಸಿದರು.
ವೇದಿಕೆಯಲ್ಲಿ ಕೇಂದ್ರ ಕಚೇರಿಯ ಜತೆ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಕೇಂದ್ರ ಕಛೇರಿಯ ಪ್ರತಿನಿಧಿ ಮೋಹನ್ ಡಿ. ಪೂಜಾರಿ, ಸ್ಥಳೀಯ ಸಮಿತಿಯ ಗೌರವಾಧ್ಯಕ್ಷ ಭೋಜ ಬಿ. ಸಾಲ್ಯಾನ್, ಜಿಓಸಿ ಗಣೇಶ್ ಪೂಜಾರಿ, ಕೇಂದ್ರ ಸಮಿತಿಯ ಸದಸ್ಯ ನೀಲೇಶ್ ಪಲಿಮಾರ್, ಅಂಧೇರಿ
ಸ್ಥಳೀಯ ಸಮಿತಿಯ ಕಾರ್ಯದರ್ಶಿ ಹರೀಶ್ ಶಾಂತಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿಯ ಜತೆ ಕೋಶಾಧಿಕಾರಿ ವಿಜಯ ಅಮೀನ್, ಸದಸ್ಯರಾದ ವಿಶ್ವನಾಥ ಮಾಬಿಯಾನ್, ಲೀಲಾಧರ್ ಸನಿಲ್, ಜಿ. ಕೆ. ಕೆಂಚನಕೆರೆ, ದಿನೇಶ್ ಸುವರ್ಣ, ಸುಂದರಿ ಆರ್. ಕೋಟ್ಯಾನ್, ಶೋಭಾ ಎಚ್. ಪೂಜಾರಿ, ಸಂಜೀವಿ ಎಸ್. ಪೂಜಾರಿ, ಶಾಂಭವಿ ಜಿ. ಸಾಲ್ಯಾನ್, ಸುಲೋಚನಾ ಮಾಬಿಯಾನ್, ಭಾರತಿ ಅಂಚನ್, ಇಂದಿರಾ ಸುವರ್ಣ, ರಾಧಾ ಎಸ್. ಕೋಟ್ಯಾನ್, ಗಣೇಶ್ ಬಂಗೇರ ಹಾಗೂ ಶಂಕರ್ ಎಲ್. ಪೂಜಾರಿ ಉಪಸ್ಥಿತರಿದ್ದರು.