Advertisement
ಜಾತಿರಹಿತ ಸಮಾಜ ಅಂಬೇಡ್ಕರ್ ಕನಸು ಅದನ್ನು ಸಾಕಾರಗೊಳಿಸಲು ಸಿದ್ದರಾಮಯ್ಯನವರ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರ ಅಂಗವಾಗಿಯೇ ರಾಜಾದ್ಯಂತ ಹಿಂದುಳಿದ ವರ್ಗಗಳ ಭವನಕ್ಕೆ ನಿವೇಶನ ಹಾಗೂ ಹಣ ನೀಡಲಾಗಿದೆ. ಉಪಚುನಾವಣೆಯ ಮೇಲೆ ಕಣ್ಣಿಟ್ಟು ತಾವು ಈ ಕೆಲಸ ತಾವು ಮಾಡುತ್ತಿಲ್ಲ. ತಮ್ಮ ಮಗನಿಗೆ ಇಲ್ಲಿ ಟಿಕೇಟ್ ತಾವು ಕೇಳಿಲ್ಲ ಎಂದು ಪ್ರತಿಪಾದಿಸಿದ ಮಹದೇವಪ್ಪ, ನನ್ನ ಕಣ್ಣು ತಾಲೂಕಿನ ಅಭಿವೃದ್ಧಿಯ ಮೇಲೆ ಮಾತ್ರ ಎಂದರು.
ಸಮಾಜದ ಅಭಿವೃದ್ಧಿ ಹಾಗೂ ಸಾಮರಸ್ಯ ಬಯಸದ ಕೆಲವರು ಇದನ್ನೇ ಅಪಾರ್ಥ ಮಾಡಿ ಕೊಂಡು ಕೀಳುಭಾಷೆಯಲ್ಲಿ ಮಾತನಾಡುತ್ತಾರೆ. ಅಂತಹ ಭಾಷೆ ನಮಗೂ ಬರುತ್ತೆ. ಅಂತಹ ಮಾತ ನಾಡುವ ಕೆಳಮಟ್ಟದಲ್ಲಿ ತಾವಿಲ್ಲ ಎಂದ ಅವರು, ತಮ್ಮ ವಿರೋಧಿಗಳ ಹೆಸರೇಳದೆ ತರಾಟಗೆ ತೆಗೆದು ಕೊಂಡರು. ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ಸವಿತಾ ಸಮಾಜ ಹಾಗೂ ಈಡಿಗರ ಸಮುದಾಯದ ಭವನಗಳಿಗೆ ತಲಾ 20 ಲಕ್ಷ ರೂ. ಮಂಜೂರಾಗಿದ್ದು ತಮ್ಮ ಸಂಸದರ ನಿಧಿಯಿಂದಲೂ ಹಣ ನೀಡುವುದಾಗಿ ಘೋಷಿಸಿದರು. ಸಮುದಾಯ ಭವನಗಳ ನಿರ್ಮಾಣಕ್ಕಿಂತಲೂ ಅವುಗಳ ಸದ್ಬಳಕೆ ಮುಖ್ಯ. ಸಮಾಜದ ಬದಲಾವಣೆಯ ಕೇಂದ್ರಗಳಾಗಿ ಈ ಭವನಗಳು ಕೆಲಸ ಮಾಡಿದಾಗ ಇವುಗಳ ನಿರ್ಮಾಣ ಸಾರ್ಥಕ ಎಂದರು.
Related Articles
Advertisement
ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ, ಉಪಾದ್ಯಕ್ಷ ಗೋವಿಂದ ರಾಜು, ನಗರಸಭಾ ಅಧ್ಯಕ್ಷೆ ಪುಷ್ಪಾ ಕಮಲೇಶ, ಉಪಾಧ್ಯಕ್ಷ ಪ್ರದೀಪ್, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಧರ್, ಪಿ. ಶ್ರೀನಿವಾಸ್, ಇಂದ್ರಾ ಮಂಜುನಾಥ, ಕಳಲೆ ಕೇಶವ ಮೂàರ್ತಿ, ಎಸ್ ಸಿ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
ಉಪ ಚುನಾವಣೆ ಪ್ರತಿಷ್ಠೆಯೂ ಅಲ್ಲ, ದಿಕ್ಸೂಚಿಯೂ ಅಲ್ಲನಂಜನಗೂಡು ಉಪ ಚುನಾವಣೆ ಯಾರ ಪ್ರತಿಷ್ಠೆ ಅಥವಾ ಭವಿಷ್ಯದ ದಿಕ್ಸೂಚಿ ಅಲ್ಲವೇ ಅಲ್ಲ. ಈಗ ಮಾಡುತ್ತಿರುವುದು ಹೊಸ ಯೋಜನೆಗಳಲ್ಲ. ಹಳೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿ ಸಿದ್ಧೇವೆ ಅಷ್ಟೆ. ಈ ಸಮಾರಂಭದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯವರೂ ಇದ್ದಾರೆ. ಜೆಡಿಎಸ್‌ನಲ್ಲಿ ಒಬ್ಬೊಬ್ಬರನ್ನು ಬಿಟ್ಟು ಮಿಕ್ಕವರೆಲ್ಲ ಈಗ ನಮ್ಮೊಡನೇ ಸೇರಿದ್ದಾರೆ. ಚುನಾವಣೆಯಲ್ಲಿ ಯಾರಿಗಾದರೂ ಮತ ನೀಡಿ. ಆದರೆ ಅಭಿವೃದ್ಧಿಗೆ ಸಹಕರಿಸಿ. ರಾಜಕೀಯ ಚುನಾ ವಣೆಗೆ ಮಾತ್ರವಿರಲಿ. ಚುನಾವಣೆಯ ಫಲಿತಾಂಶದ ನಂತರ ಮತ್ತೆ ನಾವೆಲ್ಲ ಒಂದೇ ಎಂದು ಸಚಿವ ಮಹದೇವಪ್ಪ ಹೇಳಿದರು.