Advertisement

ರಕ್ಷಣೆ ಕೋರಿ ವೈದ್ಯರಿಂದ ಸಹಾಯಕ ಆಯುಕ್ತರಿಗೆ ಮನವಿ

03:13 PM Feb 16, 2017 | Team Udayavani |

ಸೇಡಂ: ಕೆಲವರು ಉದ್ದೇಶಪೂರ್ವಕವಾಗಿ ವೈದ್ಯರ ತೇಜೋವಧೆಗೆ ಯತ್ನಿಸುತ್ತಿದ್ದು, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಂಡು ವೈದ್ಯರಿಗೆ ರಕ್ಷಣೆ ನೀಡುವಂತೆ ಇಂಡಿಯನ್‌ ಮೆಡಿಕಲ್‌ ಅಸೋಸಿಯೇಷನ್‌, ಇಂಡಿಯನ್‌ ಫ್ಯಾಮಿಲಿ μಜಿಷಿಯನ್ಸ್‌ ಅಸೋಸಿಯೇಷನ್‌ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. 

Advertisement

ಇತ್ತೀಚೆಗೆ ಬಟಗೇರಾ ಗ್ರಾಮದ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಕೆಲವರು ವೈದ್ಯರನ್ನು ವಿನಾಕಾರಣ ದೂಷಿಸುತ್ತಿದ್ದು, ಹಲ್ಲೆಗೂ ಯತ್ನಿಸಿದ್ದಾರೆ. ಇದರಿಂದ ತಾಲೂಕಿನಾದ್ಯಂತ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರತಿನಿತ್ಯ ವೈದ್ಯರ ವಿರುದ್ಧ ಆರೋಪಿಸುವ ಘಟನೆಗಳು ನಡೆಯುತ್ತಲೇ ಇವೆ.

ಈ ಕುರಿತು ಅನೇಕ ಬಾರಿ ಅಧಿಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ನಡೆದ ಘಟನೆ ಸಂಬಂಧ, ಮಗುವಿನ ಸಾವಿಗೆ ಡಾ| ಸದಾಶಿವ ಕಾರಣರಲ್ಲದಿದ್ದರೂ ಒತ್ತಾಯ ಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು. 

ಹಿರಿಯ ವೈದ್ಯ ಶಾಂತವೀರ ಸುಂಕದ, ಡಾ| ಸದಾನಂದ ಬೂದಿ, ಡಾ| ಉದಯಕುಮಾರ ಶಹಾ, ಡಾ| ರಾಜಕುಮಾರ ನಿಡಗುಂದಾ, ಡಾ| ಜಗನ್ನಾಥ ಮಳಖೇಡ, ಡಾ| ಲಗಶೆಟ್ಟಿ ಇವಣಿ, ಡಾ| ಸಂತೋಷ ಚವ್ಹಾಣ, ಡಾ| ಮೋಹನರೆಡ್ಡಿ ರುದ್ರವಾರ, ಡಾ| ಸದಾನಂದರೆಡ್ಡಿ, ಡಾ| ಸಲಾವುದ್ದಿನ, ಡಾ| ಶಿವಶಂಕರ ತಳ್ಳಳ್ಳಿ, ಡಾ| ನಾಗನಾಥ, ಡಾ| ಶರಣಮ್ಮ, ಡಾ| ಮಂಜುಳಾ ಅಗ್ನಾಳ, ಡಾ| ನಿರ್ಮಲಾ ಪಾಟೀಲ, ಡಾ| ಗೀತಾ ಪಾಟೀಲ, ಡಾ| ಶ್ರೀನಿವಾಸ ಮೊಕದಂ, ಡಾ| ಸಂತೋಷ ಧಾಡಾಪುರ ಇನ್ನಿತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next