Advertisement

ಬೆಳಗಾವಿ: 12 ತಾಸು ಈಜಿ ತಾಯಿ-ಮಗ ದಾಖಲೆ

05:05 PM Sep 06, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ತಾಯಿ-ಮಗ 12 ಗಂಟೆಗಳ ಕಾಲ ನಿರಂತರವಾಗಿ ಈಜುವುದರ ಮೂಲಕ ವಿನೂತನ ದಾಖಲೆ ನಿರ್ಮಿಸಿದ್ದಾರೆ.
ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈಜುಪಟು ಜ್ಯೋತಿ ಕೋರಿ(44) ಹಾಗೂ ಇವರ ಪುತ್ರ ವಿಹಾನ್‌ ಕೋರಿ(12) 12 ಗಂಟೆಗಳ ಕಾಲ ಇಲ್ಲಿಯ ಜೆಎನ್‌ ಎಂಸಿ ಸುವರ್ಣ ಈಜುಕೊಳದಲ್ಲಿ ಸ್ವಿಮ್ಮಿಂಗ್‌ ರಿಲೆಯಲ್ಲಿ ಏಷಿಯಾ ಬುಕ್‌ ಆಫ್‌ ರೆಕಾರ್ಡ್‌ ಹಾಗೂ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ತಮ್ಮ ಹೆಸರು ದಾಖಲು ಮಾಡುವ ಮೂಲಕ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Advertisement

ಗುರುವಾರ ಬೆಳಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿರಂತರವಾಗಿ ಈಜುವ ಮೂಲಕ ದಾಖಲೆ ನಿರ್ಮಿಸಿದ್ದು, 12 ಗಂಟೆ 22 ನಿಮಿಷಗಳ ಕಾಲ 30.1 ಕಿ.ಮೀ. ಈಜಿದ್ದಾರೆ.

ಸ್ವಿಮ್ಮಿಂಗ್‌ ಕೋಚ್‌ ಗಳಾದ ಉಮೇಶ ಕಲಘಟಗಿ, ಅಕ್ಷಯ ಶೇರೇಗಾರ, ಅಜಿಂಕ್ಯ ಮೇಂಡಕೆ, ನಿತೇಶ ಕುಡಚಕರ, ಗೋವರ್ಧನ ಕಾಕತಕರ, ಇರ್ಮಾನ್‌ ಉಚಗಾಂವಕರ ಮಾರ್ಗದರ್ಶನದಲ್ಲಿ ಈ ಸ್ವಿಮಿಂಗ್‌ ರೀಲೆ ನಡೆದಿ ದೆ. ಇವರ ಸಾಧನೆ ಏಷಿಯಾ ಇಂಡಿಯಾ ಬುಕ್‌ ಆಫ್‌ ರಿಕಾರ್ಡ್‌ ನಲ್ಲಿ ದಾಖಲಾಗಿದೆ ಎಂದು ಕೋಚ್‌ ಉಮೇಶ ಕಲಘಟಗಿ ತಿಳಿಸಿದರು. ಏಷಿಯಾ ಬುಕ್‌ ಆಫ್‌ ರಿಕಾರ್ಡ್‌ ನ ರೇಖಾ ಸಿಂಗ್‌ ಪರಿವೀಕ್ಷಕರಾಗಿ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.