Advertisement

Delhi Hospital: ಚಿಕಿತ್ಸೆ ನೀಡುವಾಗ ನೋವಾಯಿತೆಂದು ವೈದ್ಯರಿಗೆ ಕಪಾಳಮೋಕ್ಷ ಮಾಡಿದ ರೋಗಿ

10:07 AM Aug 26, 2024 | Team Udayavani |

ನವದೆಹಲಿ: ಕೋಲ್ಕತಾದಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಹತ್ಯೆಗೆ ಸಂಬಂಧಿಸಿ ಕಳೆದ ಹನ್ನೊಂದು ದಿನಗಳಿಂದ ರಾಷ್ಟ್ರವ್ಯಾಪಿ ಮುಷ್ಕರ ನಡೆಯುತ್ತಿರುವ ಬೆನ್ನಲ್ಲೇ ದೆಹಲಿಯ ಆಸ್ಪತ್ರೆಯೊಂದರಲ್ಲಿ ವ್ಯಕ್ತಿಯೊಬ್ಬರು ಚಿಕಿತ್ಸೆಗೆ ಬಂದು ವೈದ್ಯರಿಗೆ ಕಪಾಳಮೋಕ್ಷ ಮಾಡಿ ನಿಂದಿಸಿರುವ ಘಟನೆ ಭಾನುವಾರ ನಡೆದಿದೆ.

Advertisement

ಘಟನೆ ದೆಹಲಿಯ ಹೆಡ್ಗೆವಾರ್ ಆಸ್ಪತ್ರೆಯಲ್ಲಿ ನಡೆದಿದ್ದು ವೈದ್ಯರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಯಾದ್ ರಾವ್ ಎನ್ನಲಾಗಿದೆ.

ಏನಿದು ಘಟನೆ:
ಯಾದ್ ರಾವ್ ಶನಿವಾರ ತಡರಾತ್ರಿ ಮನೆಯಲ್ಲಿ ಆಯತಪ್ಪಿ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದರು, ಅವರನ್ನು ಮಗ ಹಾಗೂ ಮಗಳು ಹೆಡ್ಗೆವಾರ್ ಆಸ್ಪತ್ರೆಗೆ ಕರೆತಂದಿದ್ದಾರೆ, ಗಾಯಗೊಂಡ ವ್ಯಕ್ತಿಯನ್ನು ಪರಿಶೀಲಿಸಿದ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ. ತಲೆಗೆ ಗಾಯವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡುವ ವೇಳೆ ವ್ಯಕ್ತಿಗೆ ನೋವಾಗಿದೆ ಇದರಿಂದ ಸಿಟ್ಟಿಗೆದ್ದ ರೋಗಿ ವೈದ್ಯರನ್ನು ತಳ್ಳಿ ಕಪಾಳಮೋಕ್ಷ ಮಾಡಿದ್ದಾರೆ. ಚಿಕಿತ್ಸೆಗೆ ಒಳಗಾಗಿದ್ದ ವ್ಯಕ್ತಿಯ ಮಗ ಹಾಗೂ ಮಗಳು ವಿಚಾರ ತಿಳಿದು ಒಳಗೆ ಪ್ರವೇಶಿಸಿ ವೈದ್ಯರಿಗೆ ಬೈದು ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಇದನ್ನು ತಡೆಯಲು ಬಂದ ಆಸ್ಪತ್ರೆಯ ಸಿಬಂದಿಯನ್ನು ತಳ್ಳಿ ಹಲ್ಲೆ ನಡೆಸಿದ್ದಾಗಿ ತಿಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ವೈದ್ಯರು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದ ವ್ಯಕ್ತಿ ಪಾನಮತ್ತನಾಗಿದ್ದು, ಆತ ಸ್ಥಿಮಿತದಲ್ಲಿ ಇರಲಿಲ್ಲ ಹಾಗಾಗಿ ನಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದಾರೆ.

ಸದ್ಯ ಹಲ್ಲೆ ನಡೆಸಿದ ವ್ಯಕ್ತಿ ತಲೆಗೆ ಗಂಭೀರ ಗಾಯವಾಗಿದ್ದರಿಂದ ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಆಸ್ಪತ್ತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Advertisement

ವೈದ್ಯರ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 121 ಮತ್ತು 223 ಮತ್ತು ಸೆಕ್ಷನ್ 3 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Krishna Janmashtami: ಯುವಜನತೆಗೆ ಮಾದರಿಯಾಗಲಿ ಶ್ರೀಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next