Advertisement

Kolkata doctor Case; ವೈದ್ಯೆಯ ಮೇಲೆ ಸಾಮೂಹಿಕ ಕೃತ್ಯವೆಸಗಿಲ್ಲ: ಸಿಬಿಐ ತನಿಖೆ ವರದಿ

04:50 PM Aug 22, 2024 | Team Udayavani |

ಕೋಲ್ಕತ್ತಾ: ಟ್ರೈನಿ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (CBI) ಇಲ್ಲಿಯವರೆಗೆ ನಡೆಸಿರುವ ತನಿಖೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿಲ್ಲ ಎಂದು ಸೂಚಿಸಿದೆ ಎಂದು ವರದಿ ಹೇಳಿದೆ.

Advertisement

ಆಗಸ್ಟ್ 9 ರಂದು ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಭೀಕರ ಪ್ರಕರಣದಲ್ಲಿ ಸಂಜೋಯ್ ರಾಯ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಈತ ಮಾತ್ರ ಭಾಗಿಯಾಗಿದ್ದಾನೆ ಎಂದು ತನಿಖೆ ಸೂಚಿಸುತ್ತದೆ.

ಕೋಲ್ಕತ್ತಾ ಪೋಲೀಸ್‌ ಗೆ ಸೇರಿದ್ದ ನಾಗರಿಕ ಸ್ವಯಂಸೇವಕ ರಾಯ್ ಟ್ರೈನಿ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ತನಿಖೆ ಸೂಚಿಸುತ್ತದೆ. ಡಿಎನ್‌ಎ ವರದಿಯೂ ಒಬ್ಬ ವ್ಯಕ್ತಿಯ ಕೈವಾಡವನ್ನು ದೃಢಪಡಿಸಿದೆ ಎಂದು ವರದಿಯಾಗಿದೆ.

ಕೋಲ್ಕತ್ತಾ ಘಟನೆಯ ಬಳಿಕ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದೆ. ಕೆಲಸದ ಜಾಗದಲ್ಲಿ ಮಹಿಳೆಯರಿಗೆ ಸುರಕ್ಷತೆ ಕಲ್ಪಿಸಬೇಕು ಎಂಬ ಕೂಗು ಎದ್ದಿದೆ.

ಆಸ್ಪತ್ರೆಯ ಸೆಮಿನಾರ್ ಹಾಲ್‌ ನಲ್ಲಿ ವೈದ್ಯೆಯ ಅರೆಬೆತ್ತಲೆ ಶವ ಪತ್ತೆಯಾದ ಒಂದು ದಿನದ ನಂತರ (ಆಗಸ್ಟ್ 10) ಆರೋಪಿ ಸಂಜೋಯ್ ರಾಯ್ ನನ್ನು ಬಂಧಿಸಲಾಯಿತು.

Advertisement

ವೈದ್ಯನನ್ನು ಹತ್ಯೆಗೈದ ಕಟ್ಟಡಕ್ಕೆ ರಾಯ್ ಪ್ರವೇಶಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳ ಮೂಲಕವೂ ಸಿಬಿಐ ಪರಿಶೀಲನೆ ನಡೆಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಆದರೆ, ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಕುರಿತು ಸಿಬಿಐ ತನಿಖೆಯನ್ನು ಇನ್ನೂ ಮುಕ್ತಾಯಗೊಳಿಸಿಲ್ಲ. ಏಜೆನ್ಸಿಯು ವಿಧಿವಿಜ್ಞಾನ ವರದಿಯನ್ನು ಅವರ ಅಂತಿಮ ಅಭಿಪ್ರಾಯಕ್ಕಾಗಿ ಸ್ವತಂತ್ರ ತಜ್ಞರಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.