Advertisement

ವಸತಿ ಯೋಜನೆ ಫ‌ಲಾನುಭವಿಗಳಿಗೆ ಸಹಕಾರ ಸಂಘಗಳಿಂದ ನೆರವು: ಖಾದರ್‌

06:00 AM Jun 13, 2018 | Team Udayavani |

ಬೆಂಗಳೂರು: ಸರಕಾರದ ವಸತಿ ಯೋಜನೆಯಡಿ ಗ್ರಾಮೀಣ ಭಾಗದ ಫ‌ಲಾನುಭವಿಗಳಿಗೆ ಮನೆ ನಿರ್ಮಾಣದ ಆರಂಭಿಕ ವೆಚ್ಚ 35 ಸಾವಿರ ರೂ.ಗಳನ್ನು  ಸಹಕಾರ ಸಂಘಗಳ ಮೂಲಕ ಕೊಡಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

Advertisement

ವಿಕಾಸಸೌಧದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಸತಿ ಯೋಜನೆ ಫ‌ಲಾನುಭವಿ ಗಳಿಗೆ ಮಂಜೂರಾತಿ ಪತ್ರ ನೀಡಿದ ಮೇಲೆ 35 ಸಾವಿರ ರೂ. ವೆಚ್ಚ ಮಾಡಿ ಪಾಯ ಹಾಕಿ ಅದರ ಫೋಟೋ ಸಹಿತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಅನಂತರ ಆರು ದಿನಗಳಲ್ಲಿ ಸರಕಾರದಿಂದ ಆ ವ್ಯಕ್ತಿಗೆ ಮಂಜೂರಾಗಿರುವ ಮೊತ್ತವನ್ನು ಖಾತೆಗೆ ಜಮೆ ಮಾಡಲಾಗುತ್ತದೆ. ಅನೇಕ ಸಂದರ್ಭದಲ್ಲಿ ಫ‌ಲಾನುಭವಿಗಳು ಪಾಯ ಹಾಕಲು ಬೇಕಾದ ಹಣವಿಲ್ಲದೆ ಖಾಸಗಿಯವರ ಬಳಿ ಸಾಲ ಪಡೆಯ ಬೇಕಾಗುತ್ತದೆ. ಕೆಲವು ಸಂದರ್ಭದಲ್ಲಿ ಹಣ ಹೊಂದಿಸಲು ಸಾಧ್ಯವಾಗದೆ ಮನೆ ನಿರ್ಮಾಣ ಕಾರ್ಯವೇ ವಿಳಂಬ ವಾಗುತ್ತಿದೆ. ಇದನ್ನು ತಪ್ಪಿಸಲು ಈ ಚಿಂತನೆ ನಡೆಸಲಾಗಿದೆ. ಈ ಕುರಿತು ಸಹಕಾರ ಇಲಾಖೆ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ವಸತಿ ಯೋಜನೆಯಲ್ಲೂ ಬದಲಾವಣೆ: ನಗರ ವಸತಿ ಯೋಜನೆಯಡಿ ಫ‌ಲಾನುಭವಿಗಳ ಆಯ್ಕೆ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ರಾಜೀವ್‌ ಗಾಂಧಿ ವಸತಿ ಯೋಜನೆಯ ಮಾದರಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.  ಹೌಸಿಂಗ್‌ ಬೋರ್ಡ್‌ ಸಾಕಷ್ಟು ಮನೆಗಳನ್ನು ನಿರ್ಮಿಸಿದರೂ ಸಾಕಷ್ಟು ಮನೆಗಳು ಖಾಲಿ ಉಳಿದಿವೆ. ಹೀಗಾಗಿ ಮನೆ ಮಂಜೂರಾತಿಗೆ ಈ ಹಿಂದೆ ಇದ್ದ ಆದಾಯ ಪ್ರಮಾಣಪತ್ರ, ಸ್ಥಳೀಯರಿಗೆ ಮಾತ್ರ ಅನ್ವಯ ಎಂಬ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next