Advertisement

ಸೋಂಕಿತರ ಚಿಕಿತ್ಸೆಗೆ ಖಾಸಗಿ ವೈದ್ಯರ ನಿಯೋಜನೆ: ಶಾಸಕ

12:44 PM Apr 29, 2021 | Team Udayavani |

ಬೆಂಗಳೂರು: ವಿಶ್ವವಾಣಿ ಫೌಂಡೇಷನ್‌ ವತಿಯಿಂದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್‌-19 ಸೋಂಕಿನಿಂದಬಳಲುತ್ತಿರು ವವರಿಗೆ ಸೂಕ್ತಚಿಕಿತ್ಸಾ ವ್ಯವಸ್ಥೆಗೆ ಸಹಾಯ ಹಸ್ತಚಾಚಲಾಗಿದೆ ಎಂದು ಶಾಸಕಮತ್ತು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಹೇಳಿದರು.

Advertisement

ಯಲಹಂಕದಲ್ಲಿರುವ ಸರ್ಕಾರಿಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಕೊರತೆ ಹಿನ್ನೆಲೆಯಲ್ಲಿ ಕೋವಿಡ್‌ಸೋಂಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆದೊರೆಯುವಂತೆ ಮಾಡುವದೃಷ್ಟಿಯಿಂದ ವಿಶ್ವವಾಣಿ ಫೌಂಡೇಷನ್‌ಖಾಸಗಿ ಆಸ್ಪತ್ರೆಗಳ ವೈದ್ಯರನ್ನುನಿಯೋಜನೆ ಮಾಡಲು ನಿರ್ಧರಿಸಿದೆ.

ಇದಕ್ಕೆ ಪೂರಕವಾಗಿ ಕೊಲಂಬಿಯಾಏಷ್ಯಾ ಸೇರಿದಂತೆ ಇನ್ನಿತರೆ ಆಸ್ಪತ್ರೆಗಳಆಡಳಿತ ಮಂಡಳಿಗಳ ಜತೆ ಸಭೆನಡೆಸಿದ್ದು, ಒಂದೆರಡು ದಿನಗಳಲ್ಲಿವೈದ್ಯರು ಸೋಂಕಿತರ ಚಿಕಿತ್ಸೆಗೆಲಭ್ಯವಾಗಲಿದ್ದಾರೆ ಎಂದರು.

ಹಜ್‌ ಭವನದಲ್ಲಿ 450 ಹಾಸಿಗೆವ್ಯವಸ್ಥೆ: ಯಲಹಂಕ ವಲಯವ್ಯಾಪ್ತಿಯಲ್ಲಿರುವ ಹಜ್‌ ಭವನವನ್ನುಕೋವಿಡ್‌-19 ಚಿಕಿತ್ಸೆಗಾಗಿ ಬಳಸಿಕೊಳ್ಳಲಾ ಗುತ್ತಿದೆ. ಇಲ್ಲಿ 450 ಜನರಿಗೆಏಕಕಾಲಕ್ಕೆ ಚಿಕಿತ್ಸೆ ನೀಡಲು ಹಾಸಿಗೆವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದ್ದು,ಮೂರ್ನಾಲ್ಕು ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next