Advertisement

ಮೌಲ್ಯಮಾಪಕರ ಸಮಸ್ಯೆ: ಸಚಿವರಿಗೆ ಪತ್ರ

05:40 AM May 30, 2020 | Lakshmi GovindaRaj |

ಬೆಂಗಳೂರು: ಪಿಯು ಮೌಲ್ಯಮಾಪನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಹಂತದಲ್ಲಿ ಒತ್ತಡ ಹೇರಲಾಗುತ್ತಿದ್ದು, ಇದೇ ರೀತಿ ಮುಂದುವರಿದರೆ ಮೌಲ್ಯಮಾಪನ ಬಹಿಷ್ಕರಿಸಲು ಚಿಂತನೆ ನಡೆಸಬೇಕಾಗುತ್ತದೆ ಎಂದು ಪಿಯು  ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರಿಗೆ ಶುಕ್ರವಾರ ಪತ್ರ ಬರೆದು, ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರ ಕಡೆಯಿಂದ ದೂರವಾಣಿ  ಮೂಲಕ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಮಾನಸಿಕವಾಗಿ ಒತ್ತಡ ಹೇರಲಾಗುತ್ತಿದೆ.

Advertisement

ಸಚಿವರು ಉಪನ್ಯಾಸಕರಿಗೆ ಮೌಲ್ಯಮಾಪನಕ್ಕೆ ಹಾಜರಾಗುವುದು ಕಡ್ಡಾಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಉಪ ನಿರ್ದೇಶಕರು  ಬಿಡುತ್ತಿಲ್ಲ ಎಂದು ತಿಳಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಉಪನ್ಯಾಸಕರ ಸಂಘ ದೊಂದಿಗೆ ಚರ್ಚಿಸಿ ರಾಜ್ಯಾ ದ್ಯಂತ ಮೌಲ್ಯ  ಮಾಪನ ಬಹಿ ಷ್ಕಾರ ಮಾಡುವ ನಿರ್ಧಾರಕ್ಕೆ ಬರ ಬೇಕಾ ಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂಗೆ ಮನವಿ: ದ್ವಿತೀಯ ಪಿಯುಸಿ ಮೌಲ್ಯಮಾಪನಕ್ಕೆ 55 ವರ್ಷ ಆಗಿರುವ ವರಿಗೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಇಲಾಖೆ ಒತ್ತಡ ಹೇರುತ್ತಿದ್ದು, ಕೊರೊನಾ ಸಂದರ್ಭದಲ್ಲಿ ಉಪನ್ಯಾಸ ಕರ ಆರೋಗ್ಯ ದೃಷ್ಟಿಯಿಂದ ಇದು  ಸರಿಯಲ್ಲ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು ಹೇಳಿ ದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂ ರಪ್ಪ ಅವರಿಗೆ ಪತ್ರಬರೆದು ಮೌಲ್ಯಮಾಪನಕ್ಕೆ ಕಡ್ಡಾಯವಾಗಿ ಹಾಜರಾಗಬೇಕು ಎಂಬ ಸೂಚನೆ  ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಒತ್ತಡ ಹೇರುವ ಅಧಿಕಾರಿಗಳ ವಿರುದಟಛಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next