Advertisement

ವಿಷಕಾರಿ Mushroom ಪದಾರ್ಥ ಸೇವಿಸಿ 2 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತ್ಯು

07:08 PM Apr 09, 2023 | Team Udayavani |

ಅಸ್ಸಾಂ: ವಿಷಕಾರಿ ಅಣಬೆ ಪದಾರ್ಥ ಸೇವಿಸಿ ಎರಡು ವರ್ಷದ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಅಸ್ಸಾಂ ಜಿಲ್ಲೆಯ ಮೆರಪಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಐದು ಕುಟುಂಬದ ಸುಮಾರು 13 ಮಂದಿ ಸದಸ್ಯರು ಏಪ್ರಿಲ್ 2 ರಂದು ಅಣಬೆ ಪದಾರ್ಥ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘಟನೆಯಲ್ಲಿ ಹೇಮಂತ ಬರ್ಮನ್ (2) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟರೆ ಶುಕ್ರವಾರದಂದು ಅವರ ತಾಯಿ ತರಲಿ ಬರ್ಮನ್ (23) ಮತ್ತು ಶನಿವಾರ ತಂದೆ ಪ್ರಫುಲ್ಲ ಬರ್ಮನ್ (24) ಅವರು ಮೃತಪಟ್ಟಿದ್ದಾರೆ, ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಮೇರಪಾನಿ ಸಮುದಾಯ ಆರೋಗ್ಯ ಕೇಂದ್ರದ ಉಪ ಅಧೀಕ್ಷಕ ಡಾ.ಚಂದ್ರ ಶ್ಯಾಮ್ ಮಾತನಾಡಿ, ‘ವಿಷಪೂರಿತ ಅಣಬೆ ಸೇವಿಸಿದ ಐದು ಕುಟುಂಬಗಳ ಒಟ್ಟು 13 ಮಂದಿ ಅಸ್ವಸ್ಥಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅದರಲ್ಲಿ ಒಂದೇ ಕುಟುಂಬದ ಮೂವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಉಳಿದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Election 2023: ಮಂಗಳಮುಖಿ, ವಿಕಲಚೇತನರಿಂದ ಸ್ವೀಪ್ ಎಕ್ಸ್‌ಪ್ರೆಸ್‌ಗೆ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next