Advertisement
ಟೀ ಕೆಲಸಗಾರರ ಓಲೈಕೆದೇಶದ 53 ಪ್ರತಿಶತದಷ್ಟು ಚಹಾ ಉತ್ಪಾದಿಸುವ ರಾಜ್ಯ ಅಸ್ಸಾಂ. ಹೆಚ್ಚಾಗಿ ಚಹಾ ಉತ್ಪಾದನೆಯ ಮೇಲೆಯೇ ಅವಲಂಬಿತವಾಗಿರುವ ಅಸ್ಸಾಂನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಟೀ ತೋಟಗಳಿವೆ. ಇದರಲ್ಲಿ ಬಹುತೇಕ ಕೆಲಸಗಾರರು ಒಡಿಶಾ, ಮಧ್ಯಪ್ರದೇಶ, ಬಿಹಾರ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಲ ಮೂಲದವರು. ಅನೇಕರು ದಶಕಗಳಿಂದ ಅಸ್ಸಾಂನಲ್ಲಿಯೇ ನೆಲೆಯೂರಿದ್ದಾರೆ. ಅವರನ್ನು ಟೀ ಮತ್ತು ಎಕ್ಸ್- ಟೀ -ಗಾರ್ಡನ್ ಟ್ರೈಬ್ಸ್ ಎಂದು ಕರೆಯಲಾಗಿದ್ದು, ಇತರ ಹಿಂದುಳಿದ ವರ್ಗವೆಂದು ಸರಕಾರ ಗುರುತಿಸಿದೆ. ಜನಸಂಖ್ಯೆಯಲ್ಲಿ 17 ಪ್ರತಿಶತದಷ್ಟಿರುವ ಈ ಜನರು, ಮತದಾರರ ಪ್ರಮಾಣದಲ್ಲಿ 35 ಪ್ರತಿಶತದಷ್ಟಿದ್ದಾರೆ. ಹೀಗಾಗಿ ಚುನಾವಣ ಫಲಿತಾಂಶದಲ್ಲಿ ಇವರು ಗಣನೀಯ ಪಾತ್ರ ವಹಿಸಲಿ¨ªಾರೆ. ಅಸ್ಸಾಂನ ಒಟ್ಟು 34 ರಲ್ಲಿ 16 ಜಿಲ್ಲೆಗಳಲ್ಲಿ ಈ ಸಮುದಾಯದ ಸಂಖ್ಯೆ ಅಧಿಕವಿದ್ದು ಎಲ್ಲ ಪಕ್ಷಗಳೂ ಟೀ ಕೆಲಸಗಾರರ ಹಕ್ಕುಗಳ ಬಗ್ಗೆ ಮಾತನಾಡುತ್ತಿವೆ.
ಟೀ ತೋಟಗಳ ಕೆಲಸಗಾರರಿಗೆ ದಿನಗೂಲಿ ವಿಚಾರವೇ ಪ್ರಮುಖ ಸಮಸ್ಯೆಯಾಗಿದೆ. ಬಿಜೆಪಿಯು 2016ರಲ್ಲಿ ದಿನಗೂಲಿಯನ್ನು 351 ರೂ.ಗೆ ಏರಿಸುವುದಾಗಿ ಭರವಸೆ ನೀಡಿತ್ತಾದರೂ ಪ್ರಸಕ್ತ ಕೆಲಸಗಾರರ ದೈನಂದಿನ ವೇತನ ಕೇವಲ 167 ರೂ. ಮಾತ್ರವೇ ಇದೆ. ಇದೇ ವರ್ಷದ ಫೆಬ್ರವರಿ 20ರಂದು ಅಸ್ಸಾಂ ಸರಕಾರ ದಿನಗೂಲಿಯಲ್ಲಿ 50 ರೂಪಾಯಿ ಹೆಚ್ಚಳ(217ರೂ.) ಮಾಡಿತ್ತಾದರೂ, ಭಾರತೀಯ ಚಹಾ ಒಕ್ಕೂಟ ಮತ್ತು 17 ಚಹಾ ಕಂಪೆನಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿವೆ. ಎ. 23ಕ್ಕೆ ಈ ಪ್ರಕರಣದಲ್ಲಿ ವಿಚಾರಣೆ ನಡೆಯಲಿದೆ. ಇತ್ತ ಕಾಂಗ್ರೆಸ್ ಹಾಗೂ ಎಐಯುಡಿಎಫ್ ಕೂಡ ಚಹಾ ಕೂಲಿ ಕಾರ್ಮಿಕರ ದಿನಗೂಲಿಯನ್ನು 365 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿವೆ. ಅಸ್ಸಾಂನಲ್ಲಿ ಪ್ರಚಾರದ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, ಹಲವು ಚಹಾ ತೋಟಗಳಿಗೆ ಭೇಟಿ ನೀಡಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದದ್ದೇ ದಿನಗೂಲಿಯಲ್ಲಿ ಖಂಡಿತ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿ¨ªಾರೆ. ಇನ್ನೊಂದೆಡೆ ಕೇಂದ್ರ ಸರಕಾರ ವೂ ಬಜೆಟ್‌ನಲ್ಲಿ ಪ.ಬಂಗಾಲ ಹಾಗೂ ಅಸ್ಸಾಂನ ಟೀ ತೋಟದ ಕೆಲಸಗಾರರಿಗಾಗಿಯೇ 1,000 ಕೋಟಿ ರೂ.ಗಳ ಅನುದಾನ ಘೋಷಿಸಿತ್ತು. ಅಲ್ಲದೆ ರಾಜ್ಯ ಸರಕಾರ 7 ಲಕ್ಷಕ್ಕೂ ಅಧಿಕ ಕೆಲಸಗಾರರ ಖಾತೆಗೆ 3,000 ರೂ.ಜಮಾ ಮಾಡಿದೆ.
Related Articles
Advertisement
ಹೊರಗಿನವರು ಮತ್ತು ಮೂಲನಿವಾಸಿಗಳುವಲಸಿಗ ಸಮಸ್ಯೆ ಅತೀ ಹೆಚ್ಚು ಚರ್ಚೆಯಾಗುವ ದೇಶದ ರಾಜ್ಯಗಳಲ್ಲಿ ಅಸ್ಸಾಂ ಪ್ರಮುಖವಾದದ್ದು. ಅಸ್ಸಾಂನಲ್ಲಿ ಎರಡು ರೀತಿಯ ವಲಸಿಗರ ಹರಿವು ಇದೆ. ಒಂದು ಬಾಂಗ್ಲಾದೇಶದ ಉಗಮಕ್ಕೂ ಮುನ್ನ ಹಾಗೂ ಅನಂತರವೂ ಹರಿದುಬರುತ್ತಿರುವ ಬಂಗಾಲಿಗಳದ್ದು (ಹಿಂದೂ ಮತ್ತು ಮುಸಲ್ಮಾನರು). ಎರಡನೆಯದ್ದು ವಿವಿಧ ರಾಜ್ಯಗಳಿಂದ ಚಹಾ ತೋಟಗಳಲ್ಲಿ ಕೆಲಸ ಮಾಡಲು ಬಂದು ಅಸ್ಸಾಂನಲ್ಲೇ ನೆಲೆ ಊರಿರುವ ಟೀ-ಪಂಗಡದ್ದು. ಅಸ್ಸಾಂನಲ್ಲಿ ಎಸ್ಟಿ ಸಮುದಾಯದ ಸಂಖ್ಯೆ ಅಧಿಕವಿದ್ದು, ಮೂಲನಿವಾಸಿಗಳಾದ ಇವರು ಸಾಂಸ್ಕೃತಿಕವಾಗಿ ವಲಸಿಗರಿಗಿಂತಲೂ ಬಹಳ ಭಿನ್ನರಾಗಿರುವವರು. ಬಾಂಗ್ಲಾದೇಶದಿಂದ ಬಂದ ಬಂಗಾಲಿ ಹಿಂದೂ-ಮುಸಲ್ಮಾನರಷ್ಟೇ ಅಲ್ಲದೇ ಹೊರ ರಾಜ್ಯಗಳಿಂದ ಬಂದ ಕೆಲಸಗಾರರೂ ತಮ್ಮ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿದ್ದಾರೆ, ತಮ್ಮ ಜಮೀನುಗಳನ್ನು ಹಿಡಿತದಲ್ಲಿಟ್ಟಿ¨ªಾರೆ ಎನ್ನುವ ಅಸಮಾಧಾನ ಇವರಿಗೆಲ್ಲ ಇದೆ. ಹೀಗಾಗಿ ಬಿಜೆಪಿ-ಕಾಂಗ್ರೆಸ್‌ಗಳೆರಡೂ ಬುಡಕಟ್ಟು ಸಮುದಾಯಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಭೂ ಪತ್ತಾಗಳನ್ನು ನೀಡುವ ಭರವಸೆ ನೀಡುತ್ತಿವೆ.