Advertisement

ಅಸ್ಸಾಂ ಪ್ರವಾಸೋದ್ಯಮಕ್ಕೆ ಒಂದು ಸಾವಿರ ಕೋಟಿ ನಷ್ಟ; ಸಿಎಎ ವಿರುದ್ಧ ಪ್ರತಿಭಟನೆ ಎಫೆಕ್ಟ್

09:44 AM Jan 01, 2020 | Nagendra Trasi |

ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸ ಪ್ರತಿಭಟನೆ, ಹಿಂಸಾಚಾರದಿಂದ ಅಸ್ಸಾಂ ಪ್ರವಾಸೋದ್ಯಮಕ್ಕೆ ಅಂದಾಜು ಒಂದು ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

Advertisement

ಡಿಸೆಂಬರ್ ಹಾಗೂ ಜನವರಿ ತಿಂಗಳಿಗೂ ಪ್ರತಿಭಟನೆ ಮುಂದುವರಿಯುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಭಾರೀ ನಷ್ಟ ಅನುಭವಿಸಿದೆ ಎಂದು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಅಧ್ಯಕ್ಷ ಜಯಂತ್ ಮಲ್ಲಾ ಬರುವಾ ಗುವಾಹಟಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಅಸ್ಸಾಂನಲ್ಲಿ ಹಿಂಸಾಚಾರ, ಪ್ರತಿಭಟನೆ ಭುಗಿಲೆದ್ದ ನಿಟ್ಟಿನಲ್ಲಿ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಪ್ರವಾಸ ಕೈಗೊಳ್ಳದಂತೆ ಸೂಚನೆ ನೀಡಿತ್ತು. ಇದರಿಂದಾಗಿ ಆತಂಕಗೊಂಡ ಪ್ರವಾಸಿಗರು ಅಸ್ಸಾಂ ಪ್ರವಾಸ ರದ್ದುಗೊಳಿಸಿದ್ದರು ಎಂದು ಹೇಳಿದರು.

ಅಸ್ಸಾಂ ಪ್ರವಾಸೋದ್ಯಮ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಸೀಸನ್ ಆಗಿದ್ದು, ಸುಮಾರು ಒಂದು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ಬರುವಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next