Advertisement
ಹೌದು, ಪ್ರವಾಹಪೀಡಿತ ಅಸ್ಸಾಂನ ಸ್ಥಿತಿಯಿದು. ಜಲಾವೃತಗೊಂಡಿರುವ ನೂರಾರು ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಸಿಲ್ಚಾರ್‌ನಲ್ಲಂತೂ ಪರಿಸ್ಥಿತಿ ಗಂಭೀರವಾಗಿದ್ದು, ಒಂದು ಲೀಟರ್ ನೀರು 110 ರೂ. ಗಳಿಗೆ ಮಾರಾಟವಾಗುತ್ತಿದೆ. ಮಿನರಲ್ ವಾಟರ್ ಕ್ಯಾನ್‌ಗಳಿಗೆ 300 ರೂ.ಗಳಾಗಿದ್ದರೆ, ಯಾವುದೇ ತರಕಾರಿಯೂ 100 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿಲ್ಲ, ಎಷ್ಟು ಹುಡುಕಾಡಿದರೂ ಕ್ಯಾಂಡಲ್‌ಗಳು ಕೂಡ ಲಭ್ಯವಾಗುತ್ತಿಲ್ಲ.
Related Articles
Advertisement
24 ಗಂಟೆಗಳಲ್ಲಿ 10 ಸಾವು: ಸತತ 6 ದಿನಗಳಿಂದಲೂ ಸಿಲ್ಚಾರ್‌ನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಪ್ರವಾಹ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಅಸ್ಸಾಂನಲ್ಲಿ 24 ಗಂಟೆಗಳ ಅವಧಿಯಲ್ಲಿ 10 ಮಂದಿ ಅಸುನೀಗಿದ್ದು, ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ತಿಳಿಸಿದೆ.
ದೇಶದಲ್ಲಿ ಮಳೆ ಕೊರತೆಜೂನ್ ಮೊದಲಾರ್ಧದಲ್ಲಿ ದೇಶಾದ್ಯಂತ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ತಿಂಗಳ ದ್ವಿತೀಯಾರ್ಧದ ಆರಂಭದಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದ್ದರೂ, ಅನಂತರದಲ್ಲಿ ಮತ್ತೆ ಮಳೆಯ ತೀವ್ರತೆ ಕಡಿಮೆಯಾಗಿದೆ. ಜೂನ್ 24ರ ವರೆಗಿನ ಅಂಕಿ ಅಂಶಗಳನ್ನು ಗಮನಿಸಿದರೆ, ಮಳೆ ಕೊರತೆ -4 ಪ್ರತಿಶತದಷ್ಟಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಜೂ.28ರಿಂದ ಮುಂಗಾರು ಮತ್ತೆ ಚೇತರಿಸಿಕೊಂಡು, ದೇಶಾದ್ಯಂತ ಉತ್ತಮ ಮಳೆಯಾ ಗುವ ನಿರೀಕ್ಷೆಯಿದೆ ಎಂದೂ ಮೂಲಗಳು ತಿಳಿಸಿವೆ. ಸಿಡಿಲು ಬಡಿದು ಮೂವ ರು ಬಾಲಕಿಯರ ಸಾವು
ಮಧ್ಯಪ್ರದೇಶದ ರೇವಾ ಜಿಲ್ಲೆಯ 5 ಪ್ರದೇಶಗಳಲ್ಲಿ ಶನಿವಾರ ಸಿಡಿಲು ಬಡಿದ ಪರಿಣಾಮ ಮೂವರು ಬಾಲಕಿಯರು ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 4 ದಿನಗಳ ಕಾಲ ಗುಡುಗು-ಮಿಂಚಿನಿಂದ ಕೂಡಿದ ಬಿರುಗಾಳಿ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿರುವ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ.