Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಭಾರತ ಅಖಂಡವಾಗಿದ್ದು, ನಾವು ಒಂದು ರಾಷ್ಟ್ರ. ಕಾಂಗ್ರೆಸ್ 1947 ರಲ್ಲಿ ಭಾರತವನ್ನು ಛಿದ್ರಗೊಳಿಸಿತು. ರಾಹುಲ್ ಗಾಂಧಿಯವರು ತಮ್ಮ ತಾತ ತಪ್ಪು ಮಾಡಿದ್ದಾರೆ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ” ಎಂದು ಹೇಳಿದರು.
ಅಸ್ಸಾಂ ನಲ್ಲಿ ನೆಲಸಮಗೊಂಡ ಮದರಸಗಳೆಲ್ಲ ಮದರಸಾಗಳಾಗಿರಲಿಲ್ಲ ಅಲ್ ಖೈದಾ ಕಚೇರಿಗಳಾಗಿದ್ದವು. ನಾವು 2 ರಿಂದ 3 ಮದರಸಗಳನ್ನು ಕೆಡವಿದ್ದೇವೆ. ಅಲ್ ಖೈದಾದ ಕೆಲಸ ನಡೆಯುವ ಮದರಸಾ ಬೇಡ ಎಂದು ಮುಸ್ಲಿಂ ಸಮುದಾಯದವರೇ ಕೆಡವಲು ಬರುತ್ತಿದ್ದಾರೆ, ಮದರಸಾದ ಸ್ವರೂಪವೇ ಬದಲಾಗುತ್ತದೆ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ. ಜೈರಾಮ್ ರಮೇಶ್ ಯಾರು?
ಮೊದಲು ಹೇಳಿ, ಜೈರಾಮ್ ರಮೇಶ್ ಯಾರು? ಅವರು ಅಸ್ಸಾಂನಲ್ಲಿ ವಾಸಿಸುವವರೇ ? ಅವರು ಯಾರು? ನನಗೆ ಗೊತ್ತಿಲ್ಲ. ಕಾಂಗ್ರೆಸ್ ನಾಯಕರ ಹೆಸರು ಯಾರಿಗೆ ನೆನಪಾಗುತ್ತದೆ? ನಾನು ಕಾಂಗ್ರೆಸ್‌ನಲ್ಲಿದ್ದಾಗ ಅಂತಹ ಹೆಸರಿನ ವ್ಯಕ್ತಿಯೊಂದಿಗೆ ಎಂದಿಗೂ ಹತ್ತಿರವಾಗಿರಲಿಲ್ಲ. ಅವರು ಯಾರೆಂದು ನನಗೆ ಗೊತ್ತಿಲ್ಲ ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.
Related Articles
Advertisement